ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವನ್ನು ಮಾರ್ಚ್ 24ರಿಂದ ಲಾಕ್ಡೌನ್ ಮಾಡಲಾಗಿತ್ತು. ಲಾಕ್ಡೌನ್ ವೇಳೆಯಲ್ಲಿ ಯಾವುದೇ ಚಟುವಟಿಕೆ ನಡೆಸಿದಂತೆ ನಿರ್ಬಂಧ ವಿಧಿಸಲಾಗಿತ್ತು. ಅದರಂತೆ ಸಿನಿಮಾ, ಧಾರವಾಹಿಗಳ ಚಿತ್ರೀಕರಣಕ್ಕೂ ತಡೆ ನೀಡಲಾಗಿತ್ತು.
ಜೂನ್ 1ರಿಂದ ಅನ್ಲಾಕ್ ಮೊದಲ ಹಂತದಲ್ಲಿ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ನಿಷೇಧಿತ ಚಟುವಟಿಕೆಗಳನ್ನು ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಯಂತೆ ಹಂತಹಂತವಾಗಿ ಪುನರಾಂಭಿಸಲಾಗುತ್ತಿದೆ. ಇದೀಗ ಧಾರವಾಹಿ ಹಾಗೂ ಸಿನಿಮಾ ಚಿತ್ರೀಕರಣ ಆರಂಭಕ್ಕೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಮೂಲಕ ಹಿರಿತೆರೆ ಮತ್ತು ಕಿರಿತೆರೆ ತಂತ್ರಜ್ಞರಿಗೆ, ಕಲಾವಿದರಿಗೆ ಸಿಹಿಸುದ್ದಿ ನೀಡಿದೆ.
ಹಿರಿತೆರೆ, ಕಿರಿತೆರೆಯ ಚಿತ್ರೀಕರಣವನ್ನು ಹಾಗೂ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಬಹುದು. ಆದರೆ, ಕಡ್ಡಾಯವಾಗಿ ಕೊವಿಡ್-19 ಸಂಬಂಧ ರಾಷ್ಟ್ರೀಯ ನಿಯಮಗಳನ್ನು ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯೊಂದಿಗೆ ಆದೇಶ ಹೊರಡಿಸಿದೆ.
Comments are closed.