ರಾಷ್ಟ್ರೀಯ

ನವೆಂಬರ್ ಮಧ್ಯಂತರದ ವೇಳೆಗೆ ಕೊರೋನಾ ಗರಿಷ್ಠ ಮಟ್ಟ ತಲುಪಲಿದೆ: ಐಸಿಎಂಆರ್

Pinterest LinkedIn Tumblr


ಹೊಸದಿಲ್ಲಿ: ಭಾರತದಲ್ಲಿ ನವೆಂಬರ್ ಮಧ್ಯಂತರ ವೇಳೆಗೆ ಕೋವಿಡ್ 19 ಪ್ರಕರಣಗಳು ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಅನುದಾನಿತ ಓಪನ್ ಆಕ್ಸೆಸ್ ಸ್ಟಡಿ ವರದಿಯು ತಿಳಿಸಿದೆ.

ದೇಶದಲ್ಲಿ ಕೊರೊನಾ ವೈರಸ್ ಲಾಕ್‌ಡೌನ್ ಹೇರಿರುವ ಕಾರಣ ಕೋವಿಡ್ 19 ಪ್ರಕರಣಗಳು ತನ್ನ ಶಿಖರವನ್ನು ತಲುಪಲು ವಿಳಂಬವಾಗಿದೆ ಎಂಬುದನ್ನು ಅಧ್ಯಯನ ವರದಿ ಉಲ್ಲೇಖಿಸಿದೆ.

ಇದರಿಂದ ದೇಶದ ಆರೋಗ್ಯ ವ್ಯವಸ್ಥೆಗೆ ಕೋವಿಡ್ ಮಹಾಮಾರಿಯನ್ನು ಎದುರಿಸಲು ಬೇಕಾದಷ್ಟು ಸಮಯ ದೊರಕಿದೆ ಎಂಬುದನ್ನು ತಿಳಿಸಿದೆ.

ಅಧ್ಯಯನದ ಪ್ರಕಾರ, ಕೊರೊನಾ ವೈರಸ್ ಲಾಕ್‌ಡೌನ್ ಸಾಂಕ್ರಾಮಿಕ ರೋಗವು ಗರಿಷ್ಠ ಮಟ್ಟವನ್ನು ತಲುಪುವ ಅವಧಿಯನ್ನು ಬದಲಾಯಿಸಿದೆ. ಅಂದಾಜು 34ರಿಂದ 76 ದಿನಗಳ ವರೆಗೆ ಸೋಂಕುಗಳ ಸಂಖ್ಯೆಯನ್ನು ಶೇಕಡಾ 69ರಿಂದ 97ರಷ್ಟು ಕಡಿಮೆ ಮಾಡಲು ನೆರವಾಗಿದೆ.

ಅಷ್ಟೇ ಯಾಕೆ ಲಾಕ್‌ಡೌನ್‌ನಿಂದಾಗಿ ದೇಶದ ಆರೋಗ್ಯ ವ್ಯವಸ್ಥೆಗೆ ಮೂಲಸೌಕರ್ಯಗಳನ್ನು ವೃದ್ಧಿಸಲು ಹೆಚ್ಚಿನ ಸಮಯವನ್ನು ನೀಡಿದೆ. ದೇಶದಲ್ಲಿ ಮಾರ್ಚ್ 25ರಂದು ಮೊದಲ ಬಾರಿಗೆ ಲಾಕ್‌ಡೌನ್ ಜಾರಿಗೆ ಬಂದಿತ್ತು.

ಉದಾಹರಣೆಗೆ ಆರು ವಾರಗಳ ಲಾಕ್‌ಡೌನ್ ಬಳಿಕ ಮೇ 6ರಂದು ದೇಶದಲ್ಲಿ ಅಂದಾಜು 5,29,872 ಪ್ರಕರಣಗಳು ದಾಖಲಾಗಬೇಕಿತ್ತು. ಆದರೆ ಲಾಕ್‌ಡೌನ್ ಪರಿಣಾಮದಿಂದ ಆರೋಗ್ಯ ಇಲಾಖೆಯ ವರದಿಗಳ ಪ್ರಕಾರ 3.32 ಲಕ್ಷ ಪ್ರಕರಣಗಳು ಮಾತ್ರ ದಾಖಲಾಗಿದ್ದವು.

ಇದರಿಂದಾಗಿ ಐಸಿಯು ಹಾಸಿಗೆ ಹಾಗೂ ವೆಂಟಿಲೇಟರ್‌ಗಳ ಅವಶ್ಯಕತೆ ಶೇಕಡಾ 83ರಷ್ಟು ಕಡಿಮೆ ಮಾಡಲು ನೆರವಾಗಿದೆ.

Comments are closed.