ಮನೋರಂಜನೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ!

Pinterest LinkedIn Tumblr

ಮುಂಬೈ: ಧೋನಿ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮುಂಬೈ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಸುಶಾಂತ್, ಕೈ ಪೋ ಚೇ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು.

ತದನಂತರ ಬಿಡುಗಡೆಯಾಗಿದ್ದ ‘ಶುದ್ಧ್ ದೇಶಿ ರೊಮ್ಯಾನ್ಸ್’ ಸಿನಿಮಾದ ನಟನೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಚಿತ್ರ ಸುಶಾಂತ್ ಸಿಂಗ್ ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು.

ಸುಶಾಂತ್ ಆತ್ಮಹತ್ಯೆ ಸುದ್ದಿ ಬಗ್ಗೆ ಟ್ವಿಟರ್ ನಲ್ಲಿ ದಿಗ್ರ್ಬಮೆ ವ್ಯಕ್ತಪಡಿಸಿರುವ ಅನುರಾಗ್ ಕಶ್ಯಪ್, ಇದು ನಂಬಲಿಕೆ ಆಗುತ್ತಿಲ್ಲ ಎಂದಿದ್ದಾರೆ. ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.

Comments are closed.