ಮನೋರಂಜನೆ

ಟಾಪ್ 1 ಸ್ಥಾನ ಕಳೆದುಕೊಂಡ ‘ಜೊತೆ ಜೊತೆಯಲಿ’!: 1ನೇ ಸ್ಥಾನ ಯಾವ ಧಾರಾವಾಹಿಗೆ?

Pinterest LinkedIn Tumblr


ಕಳೆದ ಎರಡು ತಿಂಗಳಿಂದ ಧಾರಾವಾಹಿಗಳ ಪ್ರಸಾರ ನಿಂತಿತ್ತು. ಈಗ ಫ್ರೆಶ್ ಎಪಿಸೋಡ್‌ಗಳ ಪ್ರಸಾರವಾಗುತ್ತಿದೆ. ಈಗಾಗಲೇ ಲಾಕ್ ಡೌನ್ ಟೈಮ್‌ನಲ್ಲಿ ಸಿನಿಮಾ, ವೆಬ್ ಸಿರೀಸ್‌ಗಳ ಮೊರೆ ಹೋಗಿರುವ ಪ್ರೇಕ್ಷಕರು ಮತ್ತೆ ಧಾರಾವಾಹಿ ಲೋಕದತ್ತ ಮರಳುತ್ತಾರೋ ಇಲ್ಲವೋ ಎಂಬ ಭಯ ವಾಹಿನಿ, ಧಾರಾವಾಹಿ ತಂಡಕ್ಕಿತ್ತು. ಆದರೆ ಇದನ್ನು ಈಗ ‘ಗಟ್ಟಿಮೇಳ’ ಧಾರಾವಾಹಿ ಸುಳ್ಳಾಗಿಸಿದೆ.

1ನೇ ಸ್ಥಾನ ಯಾವ ಧಾರಾವಾಹಿಗೆ?
ಲಾಕ್ ಡೌನ್ ನಂತರದಲ್ಲೂ ಕೂಡ ‘ಗಟ್ಟಿಮೇಳ’ ಧಾರಾವಾಹಿ ಟಿಆರ್‌ಪಿಯಲ್ಲಿ ಮತ್ತೆ ಟಾಪ್ 1 ಸ್ಥಾನ ಪಡೆದಿದೆ. ಆರಂಭದಿಂದಲೂ ಹಲವರ ಮೆಚ್ಚುಗೆಗೆ ಈ ಸೀರಿಯಲ್ ಪಾತ್ರವಾಗಿದೆ. ವಿಭಿನ್ನವಾದ ಕಥೆಯಿಂದ ಈಗ ಇದು ಜನರ ಅಚ್ಚುಮೆಚ್ಚಿನ ಧಾರಾವಾಹಿಯಾಗಿ ಹೊರಹೊಮ್ಮಿದೆ. ಇನ್ನೇನು ಈ ಧಾರಾವಾಹಿಯಲ್ಲಿ ಅಮೂಲ್ಯ-ವೇದಾಂತ್ ಪ್ರೇಮಕಥೆ ಸಾಗಲಿದೆ.

2ನೇ ಸ್ಥಾನ?
‘ಜೊತೆ ಜೊತೆಯಲಿ’ ಧಾರಾವಾಹಿ ಎರಡನೇ ಸ್ಥಾನ ಪಡೆದಿದೆ. ಈ ಹಿಂದೆ ಕೂಡ ಈ ಸೀರಿಯಲ್ 2ನೇ ಸ್ಥಾನ ಬಾಚಿಕೊಂಡಿತ್ತು. 45 ವರ್ಷದ ವ್ಯಕ್ತಿ ಜೊತೆಗೆ 20 ವರ್ಷದ ಹುಡುಗಿ ಪ್ರೀತಿಯಲ್ಲಿ ಬೀಳುವ ಕಥೆ ಇದಾಗಿದೆ. ಈ ಮದುವೆಗೆ ಸಮಾಜ ಏನು ಹೇಳತ್ತೆ, ಈ ಜೋಡಿಹಕ್ಕಿ ಎಲ್ಲ ಸಮಸ್ಯೆಗಳನ್ನು ಎದುರಿಸಿ ಮದುವೆಯಾಗುತ್ತಾರಾ? ಎಂಬುದೇ ಧಾರಾವಾಹಿಯ ಒನ್‌ಲೈನ್‌ ಕಥೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬ ಸಂದೇಶವನ್ನು ಈ ಧಾರಾವಾಹಿ ಸಾರಲಿದೆ.

3ನೇ ಸ್ಥಾನ?
‘ಪಾರು’ ಧಾರಾವಾಹಿಗೂ ಕೂಡ ಒಳ್ಳೆಯ ಟಿಆರ್‌ಪಿ ಸಿಕ್ಕಿದೆ. ಇದೀಗ ಮೂರನೇ ಸ್ಥಾನದಲ್ಲಿ ಭದ್ರವಾಗಿ ಕುಳಿತಿದೆ. ಪ್ರೀತಂ ಮತ್ತು ಜನನಿ ಪ್ರೀತಿಯ ನಡುವೆ ಇನ್ಮುಂದೆ ಆದಿ ಮತ್ತು ಪಾರು ಪ್ರೇಮಕಥೆ ಆರಂಭವಾಗಲಿದೆ. ಇದಕ್ಕೆ ಅನುಷ್ಕಾ ಅಡ್ಡಿ ಮಾಡಲಿದ್ದಾಳೆ. ಮನೆಯವರನ್ನು ಒಪ್ಪಿಸಿ ಈ ಜೋಡಿ ಮದುವೆಯಾಗುತ್ತಾಳಾ? ಇಲ್ಲವಾ? ಎಂಬುದನ್ನು ಕಾದು ನೋಡಬೇಕಿದೆ.

4 ಮತ್ತು 5 ಸ್ಥಾನ ಯಾರಿಗೆ?
‘ನಾಗಿಣಿ 2’ ಧಾರಾವಾಹಿ 4ನೇ ಸ್ಥಾನವನ್ನು ಬಾಚಿಕೊಂಡಿದೆ. ಮೂರನೇ-ನಾಲ್ಕನೇ ಸ್ಥಾನದಲ್ಲಿ ಇದು ಸದಾ ಬೇರೆ ಧಾರಾವಾಹಿಗಳಿಗೆ ಸ್ಫರ್ಧೆ ಒಡ್ಡುತ್ತಿತ್ತು. ಇದು ಸೂಪರ್ ನ್ಯಾಚುರಲ್ ಕಥೆ. ಪಾಲಕರನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾಗಿಣಿ ಶಿವಾನಿ ಭೂಮಿಗೆ ಬಂದು ಸೇಡು ತೀರಿಸಿಕೊಳ್ಳುವ ಕಥೆಯಾಗಿದೆ. 5ನೇ ಸ್ಥಾನದಲ್ಲಿ ‘ಮಂಗಳಗೌರಿ ಮದುವೆ’ ಧಾರಾವಾಹಿಯಿದೆ.

Comments are closed.