ಮನೋರಂಜನೆ

ತಾಯಿಯಾಗಲಿದ್ದ ಮೇಘನಾ​ ರಾಜ್ ಗೆ ಬಿಗ್ ಶಾಕ್!

Pinterest LinkedIn Tumblr


ಚಿರಂಜೀವಿ ಸರ್ಜಾ 2017ರಲ್ಲಿ ತಮ್ಮ ಬಹುಕಾಲದ ಗೆಳೆತಿ ಮೇಘನಾ ರಾಜ್ ಜೊತೆಗೆ ಎಂಗೇಜ್ ಆಗುವ ಮೂಲಕ ತಮ್ಮಿಬ್ಬರ ಬಗ್ಗೆ ಹಬ್ಬಿದ್ದ ಗಾಸಿಪ್​ಗಳಿಗೆ ತೆರೆ ಎಳೆದಿದ್ದರು. 2018ರಲ್ಲಿ ಅವರಿಬ್ಬರೂ ಬಹಳ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ, ಮದುವೆಯಾಗಿ ಎರಡೇ ವರ್ಷಕ್ಕೆ ಚಿರಂಜೀವಿ ಸರ್ಜಾ ತನ್ನವರೆನ್ನಲ್ಲ ಅಗಲಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಇನ್ನು 5 ತಿಂಗಳಲ್ಲಿ ಮೇಘನಾ ರಾಜ್ ಕಂದಮ್ಮನಿಗೆ ಜನ್ಮ ನೀಡುವವರಿದ್ದರು ಎಂಬ ಸಂಗತಿ ಬಯಲಾಗಿದೆ. ಈ ಸಿಹಿಸುದ್ದಿಯನ್ನು ಎಲ್ಲರೆದುರು ಹೇಳುವ ಮೊದಲೇ ಚಿರಂಜೀವಿ ಸರ್ಜಾ ಕಣ್ಮುಚ್ಚಿದ್ದಾರೆ.

10 ವರ್ಷಗಳ ಕಾಲ ಸ್ನೇಹಿತರಾಗಿದ್ದ ಚಿರು- ಮೇಘನಾ ನಡುವೆ ಪ್ರೀತಿ ಚಿಗುರೊಡೆದಿತ್ತು. ಬೆಸ್ಟ್​ ಫ್ರೆಂಡ್ಸ್​ ಆಗಿದ್ದ ಅವರಿಬ್ಬರೂ ಒಟ್ಟಿಗೇ ಜೀವನ ನಡೆಸಬೇಕೆಂದು ನಿರ್ಧರಿಸಿದ 2 ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದರು. ಮದುವೆಯಾದ ಮೇಲೂ ಉತ್ತಮ ಸ್ನೇಹಿತರಂತೆ ಇದ್ದ ಚಿರು- ಮೇಘನಾ ಇಬ್ಬರೂ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇತ್ತೀಚೆಗೆ ಮೇಘನಾ ಗಾಯನ ಕ್ಷೇತ್ರಕ್ಕೂ ಕಾಲಿಟ್ಟಿದ್ದರು. ಚಿರು ಸರ್ಜಾ ಅವರ ‘ಸಿಂಗ’ ಸಿನಿಮಾದಲ್ಲಿ ಮೇಘನಾ ಹಾಡಿದ್ದ ‘ವಾಟ್ ಎ ಬ್ಯೂಟಿಫುಲ್ ಹುಡುಗಿ ಸಿವ ಸಿವಾ’ ಹಾಡು ಭಾರೀ ಫೇಮಸ್ ಆಗಿತ್ತು.

ಲಾಕ್​ಡೌನ್ ವೇಳೆ ಚಿರು ಸರ್ಜಾ ತನ್ನ ಮನೆಯವರೊಂದಿಗೆ ಕುಳಿತು ಆಟವಾಡಿದ ವಿಡಿಯೋ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಮೇಘನಾ ಕೂಡ ಇತ್ತೀಚೆಗೆ ಯಾವುದೂ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಅದಕ್ಕೆ ಆಕೆ ಗರ್ಭಿಣಿಯಾಗಿದ್ದೇ ಕಾರಣ. ಮೇಘನಾ ರಾಜ್​ ಈಗ 4 ತಿಂಗಳ ಗರ್ಭಿಣಿ. ಮುದ್ದಾದ ಮಗುವಿನ ನಿರೀಕ್ಷೆಯಲ್ಲಿದ್ದ ಚಿರು- ಮೇಘನಾ ಕುಟುಂಬಕ್ಕೆ ಚಿರು ಸಾವಿನಿಂದಾಗಿ ಬರಸಿಡಿಲು ಬಡಿದಂತಾಗಿದೆ. ತಾವು ತಂದೆ-ತಾಯಿ ಆಗುತ್ತಿರುವ ವಿಷಯವನ್ನು ಸದ್ಯದಲ್ಲೇ ಎಲ್ಲರೆದುರು ಹೇಳಲು ಮೇಘನಾ ಮತ್ತು ಚಿರಂಜೀವಿ ನಿರ್ಧರಿಸಿದ್ದರು. ಆದರೆ, ಅದಕ್ಕೂ ಮೊದಲೇ ವಿಧಿ ಬೇರೆಯದೇ ಆಟವಾಡಿತ್ತು.

ನಿನ್ನೆ ಸಂಜೆ ಚಿರಂಜೀವಿ ಸರ್ಜಾಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಇದುವರೆಗೂ ಅವರಿಗೆ ಆ ರೀತಿಯ ಯಾವುದೇ ಸಮಸ್ಯೆ ಕಂಡುಬರದ ಯಾರೂ ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಂದು ಮಧ್ಯಾಹ್ನ 3 ಗಂಟೆಗೆ ತಪಾಸಣೆಗಾಗಿ ಚಿರು ಅಪೋಲೋ ಆಸ್ಪತ್ರೆಯಲ್ಲಿ ಅಪಾಯಿಂಟ್​ಮೆಂಟ್ ತೆಗೆದುಕೊಂಡಿದ್ದರು. ಆದರೆ, ಆಸ್ಪತ್ರೆಗೆ ಹೊರಡುವ ಮೊದಲೇ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಅವರ ಪಲ್ಸ್​ ಕಡಿಮೆಯಾಗಿತ್ತು. ವೈದ್ಯರು ತಕ್ಷಣ ಚಿಕಿತ್ಸೆ ಶುರು ಮಾಡಿದ್ದರಿಂದ ಚಿರುಗೆ ಪ್ರಜ್ಞೆ ಬಂದಿತ್ತು. ಆದರೆ, ಮತ್ತೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಅವರು ಕೊನೆಯುಸಿರೆಳೆದಿದ್ದಾರೆ.

Comments are closed.