ಮನೋರಂಜನೆ

ಕನ್ನಡೇತರರಿಂದಲೂ ನಟ ಅನಿರುದ್ದ ನಟನೆಯ ‘ಜೊತೆ ಜೊತೆಯಲಿ’ ಧಾರಾವಾಹಿ ವೀಕ್ಷಣೆ

Pinterest LinkedIn Tumblr


ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧ್ ಆಗಿ ನಟ ಅನಿರುದ್ಧ ಅವರು ಈಗ ಜನಜನಿತರಾಗಿದ್ದಾರೆ. ಈ ಪಾತ್ರದ ಬಗ್ಗೆ ಮಾತನಾಡಿರುವ ಅವರು, “ಆರ್ಯವರ್ಧನ್ ಪಾತ್ರ ಸಾಕಷ್ಟು ಆಯಾಮಗಳಿರುವಂತಹದ್ದು. ಪ್ರೀತಿಯ ಜೊತೆಗೆ, ಜವಾಬ್ದಾರಿ ಇರುವ ಪಾತ್ರ. ವ್ಯಕ್ತಿಗಳ ಬಗೆಗಿನ ವಿಶೇಷ ಕಾಳಜಿ ಆಗಿರಬಹುದು, ಸಮಾಜದ ಬಗ್ಗೆ ಇರುವಂತಹ ಕಾಳಜಿ ಆಗಿರಬರಹುದು. ಇದೆಲ್ಲಾ ನೋಡುತ್ತಿದ್ದರೆ ನನಗೆ ತುಂಬಾ ಹತ್ತಿರವಾದಂತಹವು. ನನಗೆ ಇಷ್ಟವಾದ ಪಾತ್ರ ಕೂಡ. ಇದು ನನಗಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ಮಾದರಿ ಎನ್ನಿಸಿದೆ ಎಂದಿದ್ದಾರೆ.

“ಕಸದ ಬಗ್ಗೆ ಒಂದಷ್ಟು ವಿಚಾರಗಳನ್ನು ಇಟ್ಟುಕೊಂಡು ಹಂಚಿಕೊಂಡಿದ್ದೆವು. ಆ ಎಪಿಸೋಡ್ ಇನ್ನೂ ಅರ್ಧ ಆಗಿದೆಯಷ್ಟೇ, ಇನ್ನೂ ತುಂಬಾ ಇದೆ ಅದು. ಲಾಕ್‍ಡೌನ್‍ನಿಂದಾಗಿ ಇನ್ನೂ ಕಂಪ್ಲೀಟ್ ಮಾಡಲು ಆಗಿಲ್ಲ. ಹಸಿ ಕಸ ಹಾಗು ಒಣ ಕಸ ಸಪರೇಟ್ ಮಾಡಿ ಒಂದಷ್ಟು ಸಂಚಿಕೆಗಳಲ್ಲಿ ಹೇಳಿದ್ದೇನೆ. ಅದನ್ನು ನಮ್ಮ ಕನ್ನಡಿಗರು ಪಾಲಿಸಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಅಭಿಮಾನಿಗಳು, ಸರಕಾರಿ ಅಧಿಕಾರಿಗಳು ನನಗೆ ಕರೆಗಳನ್ನು ಮೆಸೇಜ್‌ಗಳನ್ನು ಮಾಡಿದ್ದಾರೆ. ನಿಮ್ಮ ಪಾತ್ರದ ಮೂಲಕ ಇಷ್ಟೊಂದು ಬದಲಾವಣೆ ಆಗಿದೆ ಎಂದಿದ್ದಾರೆ. ಇದಕ್ಕಿಂತ ಇನ್ನೇನು ಬೇಕು”.

ಸಮಾಜದಲ್ಲಿ ಒಂದು ಸಕಾರಾತ್ಮಕ ಬದಲಾವಣೆ ಆಗಿದೆ. ತುಂಬಾ ಧಾರಾವಾಹಿಗಳಲ್ಲಿ ನಕಾರಾತ್ಮಕ ಅಂಶಗಳೇ ಜಾಸ್ತಿ ನೋಡಿರುತ್ತೇವೆ. ಅತ್ತೆ ಸೊಸೆ ಕುತಂತ್ರ ಈ ತರಹದಲ್ಲೆಲ್ಲಾ ನೋಡಿರುತ್ತೇನೆ. ಸಕಾರಾತ್ಮಕ ವಿಷಯಗಳನ್ನೂ ಜನ ಇಷ್ಟಪಡುತ್ತಾರೆ. ಸಮಾಜದಲ್ಲಿ ಬದಲಾವಣೆಗೂ ಕಾರಣವಾಗುತ್ತದೆ ಎಂಬುದು ಈ ಧಾರಾವಾಹಿ ತೋರಿಸಿದೆ” ಎಂದು ಅನಿರುದ್ಧ ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೇರೆ ಬೇರೆ ಭಾಷೆಯ ವೀಕ್ಷಕರು. ಅಂದರೆ ತೆಲುಗು, ತಮಿಳು, ಮಲಯಾಳಂ, ಮರಾಠಿ ಹಾಗೂ ಹಿಂದಿ ಭಾಷೆಯ ವೀಕ್ಷಕರು ನನಗೆ ಮೆಸೇಜ್ ಮಾಡಿದ್ದಾರೆ. ಕನ್ನಡ ಧಾರಾವಾಹಿಯನ್ನೇ ನೋಡಿ ಮೆಸೇಜ್ ಮಾಡುತ್ತಿದ್ದಾರೆ. ಈ ಧಾರಾವಾಹಿ ಮೂಲ ಮರಾಠಿ ಭಾಷೆಯದ್ದು. ಬೇರೆ ಬೇರೆ ಭಾಷೆಗಳಲ್ಲಿ ರೀಮೇಕ್ ಆಗುತ್ತಿದೆ. ಮೂಲ ಧಾರಾವಾಹಿಯ ಎಳೆಯನ್ನು ಇಟ್ಟುಕೊಂಡು ನಾವು ನಮ್ಮ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಸಾಕಷ್ಟು ಬದಲಾವಣೆಗಳನ್ನೂ ಮಾಡಿಕೊಂಡಿದ್ದೇವೆ. ಮರಾಠಿ ಧಾರಾವಾಹಿಗೂ ನಮ್ಮ ಧಾರಾವಾಹಿಗೂ ಅಜಗಜಾಂತರ ವ್ಯತ್ಯಾಸ ಇದೆ. ಮುಂದೆಯೂ ತುಂಬಾ ವ್ಯತ್ಯಾಸ ಆಗುತ್ತದೆ.

ತೆಲುಗು, ತಮಿಳು ಹಾಗೂ ಮಲಯಾಳಂ ನವರು ನಮ್ಮ ಧಾರಾವಾಹಿಯನ್ನು ಮೂಲವಾಗಿಟ್ಟುಕೊಂಡು ಮಾಡುತ್ತಿದ್ದಾರೆ. ಆ ವೀಕ್ಷಕರು ಸಹ ನನಗೆ ಕರೆ ಮಾಡಿ ಆ ಧಾರಾವಾಹಿಯ ಜೊತೆಗೆ ನಮ್ಮ ಧಾರಾವಾಹಿಯನ್ನೂ ನೋಡುತ್ತಿದ್ದಾರೆ. ಪ್ರತಿಯೊಂದು ಎಪಿಸೋಡನ್ನೂ ನೋಡಿದ್ದೇವೆ. ಈ ಧಾರಾವಾಹಿ ಮೂಲಕ ಕನ್ನಡವನ್ನೂ ಕಲಿಯುತ್ತಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಧಾರಾವಾಹಿಯಿಂದ ಬೇರೆ ಭಾಷೆ ವೀಕ್ಷಕರು ಕನ್ನಡ ಕಲಿಯಲಿಕ್ಕೆ ಸ್ಫೂರ್ತಿ ಸಿಗುತ್ತದೆ ಎಂದರೆ ಅದಕ್ಕಿಂತ ನಮಗೆ ಇನ್ನೇನು ಬೇಕು. ಇದು ಕರ್ನಾಟಕಕ್ಕೆ ಕನ್ನಡಿಗರಿಗೆ ಹೆಮ್ಮೆಯ ವಿಷಯ ಎನ್ನುತ್ತಾರೆ ಅನಿರುದ್ಧ.

Comments are closed.