ಮನೋರಂಜನೆ

ಭಾಷೆ ವಿಷಯವಾಗಿ ನಟ ಅನಿರುದ್ಧ ಕುರಿತು ನೆಟ್ಟಿಗರಿಂದ ಅಪಸ್ವರ!

Pinterest LinkedIn Tumblr


ಸಿನಿ ತಾರೆಯರು ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದ್ರೆ ಕನ್ನಡದ ಬಗ್ಗೆ ಅವರಿಗೆ ಅಭಿಮಾನ ಇಲ್ಲ ಎಂಬ ಮಾತು ಬರುವುದು, ಬೇರೆ ಭಾಷೆಗಳಲ್ಲಿ ಯಾವುದೇ ರೀತಿಯಲ್ಲಿ ಜಾಸ್ತಿ ಕೆಲಸ ಮಾಡಿದ್ರೂ ಕೂಡ ಸಾಮಾನ್ಯವಾಗಿ ಭಾಷೆಯ ವಿಷವಾಗಿ ಇಂತಹ ಮಾತು ಬರತ್ತೆ. ‘ಜೊತೆ ಜೊತೆಯಲಿ’ ಧಾರಾವಾಹಿ ನಟ ಅನಿರುದ್ಧ ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಡುಗಳನ್ನು ಹಾಡಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲ ದಿನಗಳ ಹಿಂದೆ ಮಕ್ಕಳ ಜೊತೆ ಡಾನ್ಸ್ ಮಾಡಿದ ವಿಡಿಯೋ ಕೂಡ ಹಂಚಿಕೊಂಡಿದ್ದರು. ಇದರ ಜೊತೆಗೆ ಅವರು ಹಿಂದಿ ಹಾಡು ಕೂಡ ಹೇಳಿದ್ದರು. ಇದಕ್ಕೆ ಕೆಲವರು ವಿರೋಧಿಸಿದ್ದರು. ನಟ ಅನಿರುದ್ಧ ಕನ್ನಡ ಭಾಷೆಯ ಅಭಿಮಾನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂಕ್ಷಿಪ್ತ ಪತ್ರ ಬರೆದಿದ್ದಾರೆ.

ನಟ ಅನಿರುದ್ಧ ಬರೆದ ಪತ್ರವಿದು:-

ನಮಸ್ಕಾರ ಎಲ್ಲರಿಗೂ…

ಮೊಟ್ಟ ಮೊದಲಿಗೆ ನಾನು ನಿಮ್ಮೆಲ್ಲ ಸಂದೇಶಗಳಿಗೆ ಪ್ರತಿಕ್ರಿಯೆ ಅಥವಾ ಉತ್ತರ ಕೊಡೋದಕ್ಕೆ ಆಗ್ತಿಲ್ಲ ಎನ್ನುವುದಕ್ಕೆ ಕ್ಷಮೆ ಕೇಳ್ತೀನಿ. ನಾನು ಹಿಂದಿ ಹಾಡನ್ನು ಹಾಕಿದಾಗ, ಕೆಲವರು ನನ್ನ ಕನ್ನಡ ತಾಯಿಯ ಬಗ್ಗೆ ಇರೋ ಪ್ರೀತಿಯ ಬಗ್ಗೆ ನನ್ನನ್ನು ಪ್ರಶ್ನೆ ಮಾಡ್ತಾರೆ. ಅದು ತುಂಬಾ ಬೇಸರ ಉಂಟುಮಾಡುತ್ತದೆ. ನಾನು ಕನ್ನಡ ಹಾಡುಗಳನ್ನ ಹಾಡಿರೋದು ಹಲವರು ಕೇಳಿಲ್ಲ. ಪ್ರತಿದಿನ ನಾನು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಹಾಡನ್ನ ಹಾಡುತ್ತಿದ್ದೇನೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಕೂಡ ಮಾಡುತ್ತಿದ್ದೇನೆ. ದಯವಿಟ್ಟು ಆ ಹಾಡು ಕೇಳಿ, ನೋಡಿ, ಕೇಳದೆ, ನೋಡದೆ ತಪ್ಪಾಗಿ ಪ್ರತಿಕ್ರಿಯೆ ನೀಡಬೇಡಿ.

ಕನ್ನಡದಲ್ಲೇ ನಾನು ಓದಿರೋದು, ಸಾಕಷ್ಟು ಕನ್ನಡ ಸಾಹಿತ್ಯ ಓದುತ್ತೇನೆ. ಕನ್ನಡ ಭಾಷೆಯ ಚಿತ್ರ ಗಳಲ್ಲಿ ಹಾಗೂ ನಾಟಕಗಳಲ್ಲಿ ಅಭಿನಯಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ನಾನು ಕನ್ನಡ ಮಾತನಾಡುವಾಗ ಬೇರೆ ಭಾಷೆಯ ಪದಗಳನ್ನು ಬಳಸೋದಿಲ್ಲ. ನನ್ನ ಭಾಷಾಭಿಮಾನದ ಬಗ್ಗೆ ದಯಮಾಡಿ ಪ್ರಶ್ನಿಸಬೇಡಿ… ತುಂಬಾ ಬೇಜಾರು ಆಗುತ್ತದೆ. ‘ವಸುಧೈವ ಕುಟುಂಬಕಂ’ ಎಂಬಂತೆ ಭೂಮಿ ಮೇಲಿರುವ ಎಲ್ಲರೂ, ಪ್ರತಿಯೊಬ್ಬರೂ ನನ್ನ ಕುಟುಂಬವೇ.. ಎಲ್ಲ ಭಾಷೆಗಳೂ ನನ್ನ ಭಾಷೆಗಳೇ.

ಕಿರುತೆರೆಗೆ ಕಾಲಿಟ್ಟ ಸ್ಯಾಂಡಲ್‌ವುಡ್ ನಟ ಅನಿರುದ್ಧ

ಆಂಗ್ಲ ಭಾಷೆಯ ಸಾಹಿತ್ಯ ಓದುತ್ತೇನೆ, ಆಂಗ್ಲ ಭಾಷೆಯಲ್ಲಿ ಲೇಖನಗಳನ್ನ ಬರೀತಿನಿ. ಅವು ಸುಪ್ರಸಿದ್ಧ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಹಿಂದಿ ಭಾಷೆಯ ಹಾಡುಗಳನ್ನೂ ಹಾಡ್ತೀನಿ. ಪ್ರಪಂಚದ ಎಲ್ಲ ಭಾಷೆಯ ಚಿತ್ರಗಳನ್ನ ನಾನು ನೋಡ್ತೀನಿ. ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿದ್ದೀನಿ. ಬೇರೆ ಬೇರೆ ರಾಜ್ಯಗಳ ಅಭಿಮಾನಿಗಳು ನನ್ನನ್ನು ಪ್ರೀತಿಸುತ್ತಾರೆ. ನನಗೆ ಕನ್ನಡದ ಜೊತೆ ಎಲ್ಲ ಭಾಷೆಗಳೂ ಇಷ್ಟ. ನನ್ನ ಬಗ್ಗೆ ದಯವಿಟ್ಟು ತಿಳಿದುಕೊಳ್ಳಿ. ತಾವು ಆ ದೇವರ ಸ್ವರೂಪ ಅಂತ ನಾನು ನಂಬೀದ್ದೇನೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನ ಮೇಲೆ ಸದಾ ಇರಲಿ

Comments are closed.