ಮನೋರಂಜನೆ

ನಟಿ ಪ್ರಿಯಾಮಣಿ ಅಕ್ಕ ಬಾಲಿವುಡ್ ನ ದೊಡ್ಡ ಸ್ಟಾರ್ ನಟಿ

Pinterest LinkedIn Tumblr


ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಟಿ ಪ್ರಿಯಾಮಣಿ.ಸ್ಕೂಲ್ನಲ್ಲಿ ಓದುತ್ತಿರುಗಲೇ ಸಿಲ್ಕ್ ಸ್ಯಾರಿಗಳ ಅಡ್ವಿಟೈಜ್ ನಲ್ಲಿ ಆಕ್ಟ್ ಮಾಡಿ ಎಲ್ಲರ ಗಮನ ಸೆಳೆದರು.ಪಿಯುಸಿ ಓದುತ್ತಿದ್ದ ಪ್ರಿಯಾಮಣಿಗೆ ಸಿನಿಮಾಗಳಲ್ಲಿ ಅವಕಾಶ ಬಂತು.ಅಲ್ಲಿಂದ ಸುಮಾರು 10 ವರ್ಷ ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಬೆಳೆದರು.ನ್ಯಾಷನಲ್ ಅವಾರ್ಡ್ ಪಡೆದು ದಕ್ಷಿಣ ಭಾರತದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ನಟಿ ಪ್ರಿಯಾಮಣಿ ಒಂದು ಕಾಲದಲ್ಲಿ ಹೆಚ್ಚಾಗಿ ರಿಯಾಲಿಟಿ ಶೋಗಳ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು.ಪ್ರಿಯಾಮಣಿ ಅವರ ಫ್ಯಾಮಿಲಿಗೆ ಮತ್ತು ಫಿಲಂ ಇಂಡಸ್ಟ್ರಿಗೆ ಹತ್ತಿರದ ಸಂಬಂಧ ಇದೆ.ಅದು ಹೇಗೆ ಗೊತ್ತಾ?

ಅಷ್ಟಕ್ಕೂ ಪ್ರಿಯಾಮಣಿ ಚಿತ್ರರಂಗದಲ್ಲಿ ಬೆಳೆಯಲು ಸಹಾಯ ಮಾಡಿದ್ದು ಯಾರು ಗೊತ್ತಾ ..?
ನಟಿ ಪ್ರಿಯಾಮಣಿ ಅವರು ಅಕ್ಕ ಬಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಿರುವ ಸ್ಟಾರ್ ನಟಿ ಅವರೇ ನಟಿ ವಿದ್ಯಾಬಾಲನ್.ವಿದ್ಯಾ ಬಾಲನ್ ಅವರು ಪ್ರಿಯಾಮಣಿ ಅವರ ಅಕ್ಕ ಅಂದ್ರೆ ಸ್ವಂತ ಚಿಕ್ಕಮ್ಮನ ಮಗಳು ಅಷ್ಟೇ ಅಲ್ಲದೆ ಪ್ರಿಯಾಮಣಿ ಅವರ ಅತ್ತೆ ಕೂಡ ದೊಡ್ಡ ಸ್ಟಾರ್ ಸಿಂಗರ್ ಆಗಿದ್ದಾರೆ.ಸಿಂಗರ್ ಮಾಲ್ಗುಡಿ ಶುಭಾ ಅವರು ಪ್ರಿಯಾಮಣಿ ಅವರ ಸ್ವಂತ ಅತ್ತೆ.ವಿದ್ಯಾ ಬಾಲನ್ ಮತ್ತು ಪ್ರಿಯಾಮಣಿ ಚಿತ್ರರಂಗದಲ್ಲಿ ಬೆಳೆಯಲು ಸಹಾಯ ಮಾಡಿದ್ದು ಮಾಲ್ಗುಡಿ ಶುಭಾ ಅವರು ಎಂದು ಹೇಳಲಾಗುತ್ತದೆ.

ಆಗಾಗಲೇ ಸಿಂಗರ್ ಆಗಿ ಚಿತ್ರ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಮಾಲ್ಗುಡಿ ಶುಭಾ ಅವರು ಪ್ರಾರಂಭದಲ್ಲಿ ವಿದ್ಯಾಬಾಲನ್ ಮತ್ತು ಪ್ರಿಯಾಮಣಿಗೆ ಮಾರ್ಗದರ್ಶನ ಪ್ರೋತ್ಸಾಹ ನೀಡಿ ಅವರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಲು ಸಹಕಾರಿಯಾದರು.ಹೀಗೆ ಯಾವುದೇ ರಂಗ ದಲ್ಲಾದರೂ ನಮ್ಮವರು ಅಂತ ಒಬ್ಬರಿದ್ದರೆ ಅಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ. ಅದರಲ್ಲೂ ಚಿತ್ರರಂಗದಲ್ಲಿ ಬ್ಯಾಗ್ ರೌನ್ಡ್ ಇಲ್ಲದೆ ಬೆಳೆಯಬೇಕು ಅಂದ್ರೆ ತುಂಬಾ ಕಷ್ಟ ಹಾಗೇ ಎಷ್ಟೇ ಇನ್ ಪ್ಲೂಯನ್ಸ್ ಇದ್ದರೂ ಹಾರ್ಡ್ ವರ್ಕ್ ಕೆಲಸದ ಮೇಲೆ ಶ್ರದ್ಧೆ ಹಾಗೂ ಪ್ರತಿಭೆ ಇಲ್ಲಾಂದ್ರೆ ಎಲ್ಲೂ ಬೆಳೆಯಲು ಸಾಧ್ಯವಿಲ್ಲ ಅನ್ನೋದು ಅಷ್ಟೇ ಸತ್ಯ.

ತನ್ನಂತೆ ತನ್ನವರು ಬೆಳೆಯಲಿ ಎಂದು ಸಹಾಯ ಮಾಡಿದ ಮಾಲ್ಗುಡಿ ಶುಭಾ ಅವರ ಒಳ್ಳೆಯ ಮನಸ್ಸಿಗೆ ಅವರಿಗೆ ಒಳ್ಳೆಯದೇ ಆಗಿತ್ತದೆ.

Comments are closed.