ಮನೋರಂಜನೆ

ಕನ್ನಡ ಟಿವಿ ಉದ್ಯಮಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಿ: ‘ಪೈಲ್ವಾನ್’ ಸಿನಿಮಾ ನಿರ್ದೇಶಕ

Pinterest LinkedIn Tumblr


ಲಾಕ್ ಡೌನ್ ಆದಾಗಿನಿಂದ ಚಿತ್ರರಂಗ ತುಂಬ ಕಷ್ಟ ಇದೆ, ಒಂದು ವಾಹಿನಿ ಕೂಡ ತಾತ್ಕಾಲಿಕವಾಗಿ ಸ್ಥಗಿತವಾಗಿದೆ, ಹಲವಾರು ಧಾರಾವಾಹಿಗಳು ಶಾಶ್ವತವಾಗಿ ನಿಂತಿವೆ. ಹೀಗಾಗಿ ಟಿವಿ ಉದ್ಯಮಕ್ಕೆ ಸಹಾಯ ಮಾಡಿ ಎಂದು ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾ ನಿರ್ದೇಶಕ ಕೃಷ್ಣ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಆರ್ಥಿಕ ಪ್ಯಾಕೇಜ್ ಹೊರಡಿಸಿ ಎಂದ ಕೃಷ್ಣ
‘ಕನ್ನಡ ಟಿವಿ ಉದ್ಯಮ 1000 ಕೋಟಿ ರೂಪಾಯಿಯಷ್ಟು ಕೊಡುಗೆ ನೀಡುತ್ತಿದೆ. ಕನ್ನಡ ಸಿನಿಮಾ ಮತ್ತು ಟಿವಿಯೂ ಸೇರಿ 1600 ಕೋಟಿ ರೂಪಾಯಿಯಿಂದ 1750 ಕೋಟಿ ರೂಪಾಯಿ ಕೊಡುಗೆ ನೀಡುತ್ತಿದೆ. ಹೀಗಾಗಿ ಉದ್ಯಮದ ಉಳಿವಿಗಾಗಿ ಆರ್ಥಿಕ ಪ್ಯಾಕೇಜ್ ಹೊರಡಿಸಿ’ ಎಂದು ಹೇಳಿದ್ದಾರೆ ಕೃಷ್ಣ

ಅಂತ್ಯವಾದ ಸುಬ್ಬಲಕ್ಷ್ಮೀ ಸಂಸಾರ ಧಾರಾವಾಹಿ
ಕೃಷ್ಣ ಪತ್ನಿ ಸ್ವಪ್ನಾ ‘ಸುಬ್ಬಲಕ್ಷ್ಮೀ ಸಂಸಾರ’ ಧಾರಾವಾಹಿಯ ನಿರ್ದೇಶನ ಮಾಡಿ, ನಿರ್ಮಾಣ ಮಾಡಿದ್ದರು. ಈ ಧಾರಾವಾಹಿ ಕೂಡ ತನ್ನ ಪ್ರಸಾರವನ್ನು ನಿಲ್ಲಿಸುತ್ತಿದೆ. ಮೇ 25ರಿಂದ ಟಿವಿ ಶೂಟಿಂಗ್ ಮಾಡಲು ಹಲವು ನೀತಿ-ನಿಯಮಗಳನ್ನು ಹಾಕಿ ಸರ್ಕಾರ ಅನುಮತಿ ನೀಡಿದೆ.

ಸಿನಿಮಾಟೋಗ್ರಾಫರ್ ಆಗಿದ್ದ ಕೃಷ್ಣ
ನಿಖಿಲ್ ಕುಮಾರಸ್ವಾಮಿ ಜೊತೆಗೆ ಕೃಷ್ಣ ಸಿನಿಮಾ ಮಾಡುತ್ತಿದ್ದು, ಇದಕ್ಕೆ ಲೈಕಾ ಪ್ರೊಡಕ್ಷನ್ಸ್ ಹಣ ಹೂಡುತ್ತಿದೆ. ತೆಲುಗು, ತಮಿಳಿನಲ್ಲೂ ಕೂಡ ಈ ಚಿತ್ರ ರಿಲೀಸ್ ಆಗುತ್ತಿದೆ. ಸಿನಿಮಾಟೋಗ್ರಾಫರ್ ಆಗಿ ಕೃಷ್ಣ ಕನ್ನಡದ 20 ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ಮುಂಗಾರು ಮಳೆ’ ಚಿತ್ರದಿಂದ ಸಿನಿಮಾ ಕ್ಯಾಮರಾ ಕೆಲಸ ಶುರು ಮಾಡಿದ್ದರು. ಯಶ್ ನಟನೆಯ ‘ಗಜಕೇಸರಿ’ ಸಿನಿಮಾ ಮೂಲಕ ಕೃಷ್ಣ ನಿರ್ದೇಶಕರಾಗಿ ಬಡ್ತಿ ಪಡೆದರು.

Comments are closed.