ಮನೋರಂಜನೆ

ಅಮ್ಮನಾಗುತ್ತಿರುವ ಖುಷಿಯಲ್ಲಿ ‘ಜೋಡಿ ಹಕ್ಕಿ’ ಧಾರಾವಾಹಿ ನಟಿ!

Pinterest LinkedIn Tumblr


‘ಜೋಡಿ ಹಕ್ಕಿ’ ಧಾರಾವಾಹಿ ಮುಕ್ತಾಯವಾಗಿ ಹಲವು ತಿಂಗಳಾಯ್ತು. ಆರೂರು ಜಗದೀಶ್ ನಿರ್ದೇಶನದ ಈ ಸೀರಿಯಲ್ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು. ಧಾರಾವಾಹಿ ಮುಗಿದರೂ ಕೂಡ ಜನರು ಇದರ ಪಾತ್ರಗಳನ್ನು ಮಾಡಿದ್ದ ಕಲಾವಿದರನ್ನು ಮರೆತಿಲ್ಲ. ‘ಜೋಡಿ ಹಕ್ಕಿ’ ಧಾರಾವಾಹಿಯ ನಟಿಯೊಬ್ಬರು ತಾಯಿಯಾಗುವ ಖುಷಿಯಲ್ಲಿದ್ದಾರೆ. ಅವರೇ ಮಧುಶ್ರೀ ಅಯ್ಯರ್.

ಕೆಲವು ಧಾರಾವಾಹಿಗಳಲ್ಲಿ ಮಧುಶ್ರೀ ನಟನೆ

ಬಿಕಾಂ ಪದವೀಧರೆಯಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಬ್ಯಾಂಕ್ ಎಕ್ಸಾಂ ಬರೆಯಲು ಬಂದಿದ್ದ ಮಧುಶ್ರೀಗೆ ಸಂಬಂಧಿಕರೊಬ್ಬರು ಧಾರಾವಾಹಿಯೊಂದಕ್ಕೆ ಆಡಿಷನ್ ನೀಡಲು ಹೇಳಿದರು. ಇದೇ ಅವರಿಗೆ ಮುಂದಿನ ದಿನಗಳಲ್ಲಿ ‘ಜೋಡಿ ಹಕ್ಕಿ’, ‘ರಾಧಾ ರಮಣ’, ‘ಅವಳು’ ಧಾರಾವಾಹಿಯಲ್ಲಿ ಪೋಷಕ ಪಾತ್ರ ಮಾಡಲು ಅನುಕೂಲವಾಯಿತು. ‘ರಾಧಾ ರಮಣ’ದ ನಟಿ ಶ್ವೇತಾ ಪ್ರಸಾದ್ ಅವರು ಮಧುಶ್ರೀಗೆ ದೂರದ ಸಂಬಂಧಿಕರಂತೆ.

‘ಜೋಡಿ ಹಕ್ಕಿ’ ಧಾರಾವಾಹಿಯಲ್ಲಿ ನಟಿಸಿದ್ದ ಮಧುಶ್ರೀ
‘ಜೋಡಿ ಹಕ್ಕಿ’ ಧಾರಾವಾಹಿಯಲ್ಲಿ ಅನು ಪಾತ್ರದಲ್ಲಿ ಮಧುಶ್ರೀ ನಟಿಸಿದ್ದರು. ನಾಯಕಿ ಚೈತ್ರಾ ರಾವ್‌ಗೆ ಸ್ನೇಹಿತೆಯಾಗಿ ಮಧು ನಟಿಸಿದ್ದರು. ಹೀಗಾಗಿ ಜನರು ಮಧುವನ್ನು ಗುರುತಿಸಬಲ್ಲರು. ಈ ಧಾರಾವಾಹಿಯಲ್ಲಿ ಈ ಮೂಲಕ ಮಧುಶ್ರೀ ಮುಖ್ಯ ಪಾತ್ರ ವಹಿಸಿದ್ದರು ಎನ್ನಬಹುದು.

2018ರಲ್ಲಿ ಸಪ್ತಪದಿ ತುಳಿದಿದ್ದ ಮಧುಶ್ರೀ
ಕಳೆದ ವರ್ಷ 2018ರಲ್ಲಿ ಮಧುಶ್ರೀ ಅವರು ಯಶ್ ಅಯ್ಯರ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಯಶ್ ಟಿಕ್ ಟಾಕ್ ಮಾಡುತ್ತ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಮಧು ಮತ್ತು ಯಶ್ ಸೇರಿ ಹಲವು ಟಿಕ್ ಟಾಕ್ ವಿಡಿಯೋ ಮಾಡಿದ್ದಾರೆ. ಈ ವರ್ಷ ಇವರಿಬ್ಬರೂ ತಂದೆ-ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಇದನ್ನು ಮಧು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ಇನ್ನು ಎರಡು ತಿಂಗಳೊಳಗೆ ಮಧುಶ್ರೀ ಅಯ್ಯರ್ ತಾಯಿಯಾಗಲಿದ್ದಾರೆ.

Comments are closed.