ಮನೋರಂಜನೆ

ಡೆನ್ಮಾರ್ಕ್ ಬಾಯ್‍ಫ್ರೆಂಡ್ ಕುರಿತು ನಮ್ಮ ಕುಟುಂಬದವರಿಗೂ ತಿಳಿದಿದೆ: ನಟಿ ತಾಪ್ಸಿ ಪನ್ನು

Pinterest LinkedIn Tumblr


ಬಾಲಿವುಡ್ ತಾರೆ ತಾಪ್ಸಿ ಪನ್ನು ಹಾಗೂ ಡೆನ್ಮಾರ್ಕ್ ಬ್ಯಾಡ್ಮಿಂಟನ್ ಪಟು ಮಥಿಯಾಸ್ ಬೋ ಇಬ್ಬರೂ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಸುದೀರ್ಘ ಸಮಯದಿಂದ ಹರಿದಾಡುತ್ತಿದೆ. ಇವರಿಬ್ಬರೂ ಜೊತೆಯಾಗಿ ಸುತ್ತಾಡುತ್ತಿರುವ ಫೋಟೋಗಳು ಸಹ ಬಹಿರಂಗವಾಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ತಾಪ್ಸಿ, ತನ್ನ ಪ್ರಿಯಕರನ ಸಂಗತಿ ಕುಟುಂಬಿಕರ ಬಳಿ ಮುಚ್ಚಿಟ್ಟಿಲ್ಲ. ಅವರಿಗೂ ಗೊತ್ತು ಎಂದಿದ್ದಾರೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ. ತನ್ನ ಬಾಯ್‍ಫ್ರೆಂಡ್, ಸಂಬಂಧದಗಳ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಮ್ಮ ಮನೆಯವರ ಬಳಿ ಈ ರೀತಿಯ ಸಂಗತಿಯನ್ನು ಮುಚ್ಚಿಡುವುದು ನನಗೆ ಇಷ್ಟವಿಲ್ಲ. ನನ್ನ ಜೀವನದಲ್ಲಿ ಓರ್ವ ವ್ಯಕ್ತಿ ಇದ್ದಾರೆ ಎಂದು ಹೇಳಿಕೊಳ್ಳುವುದು ನನಗೆ ಎಂದಿಗೂ ಹೆಮ್ಮೆಯ ಸಂಗತಿ. ಅದೇ ರೀತಿ ಒಳ್ಳೆಯ ಹೆಡ್‍ಲೈನ್‍ಗಾಗಿ ಮಾಧ್ಯಮಗಳ ಮುಂದೆ ಆ ವ್ಯಕ್ತಿಯ ಬಗ್ಗೆ ಮಾತನಾಡುವುದು ನನಗಿಷ್ಟವಿಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ನಟಿಯಾಗಿ ತಾನು ಇಷ್ಟು ವರ್ಷ ಸಂಪಾದಿಸಿಕೊಂಡ ಮೌಲ್ಯಗಳು ಬೆಲೆ ಕಳೆದುಕೊಳ್ಳುತ್ತವೆ. ಎಲ್ಲರೂ ನನ್ನ ನಟನೆ ಬಗ್ಗೆ ಅಲ್ಲದೆ, ವೈಯಕ್ತಿಕ ಜೀವನದ ಬಗ್ಗೆ ಬರೆಯುತ್ತಾರೆ, ಮಾತನಾಡುತ್ತಾರೆ” ಎಂದಿದ್ದಾರೆ.

“ನನ್ನ ಜೀವನದಲ್ಲಿ ಓರ್ವ ವ್ಯಕ್ತಿ ಇದ್ದಾನೆ. ಅವರ ಬಗ್ಗೆ ನನ್ನ ಕುಟುಂಬದ ಸದಸ್ಯರಿಗೂ ಗೊತ್ತು. ಆ ವ್ಯಕ್ತಿ ನನಗಷ್ಟೇ ಅಲ್ಲ ನನ್ನ ತಂದೆತಾಯಿ, ಸಹೋದರಿಗೂ ಇಷ್ಟವಾಗಬೇಕು. ಯಾಕೆಂದರೆ ತಂದೆತಾಯಿ ಒಪ್ಪಿಗೆ ಇಲ್ಲದಿದ್ದರೆ ಯಾವುದೇ ಪ್ರೀತಿ ಜೀವನಪರ್ಯಂತ ಇರಲ್ಲ” ಎಂದು ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ತಾಪ್ಸಿ ತಾಯಿ ನಿರ್ಮಲ್ ಜಿತ್ ಸಹ ಮಾತನಾಡಿದ್ದಾರೆ. “ನನಗೆ ತಾಪ್ಸಿ ಮೇಲೆ ಪೂರ್ಣ ನಂಬಿಕೆ ಇದೆ. ಅವಳು ಸ್ವತಃ ಯಾರನ್ನು ಆಯ್ಕೆ ಮಾಡಿಕೊಂಡರೂ ಅವಳ ನಿರ್ಧಾರವನ್ನು ಗೌರವಿಸುತ್ತೇವೆ. ಅವಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ” ಎಂದಿದ್ದಾರೆ.

ತಾಪ್ಸಿ ಅಭಿನಯಿಸಿರುವ ಇತ್ತೀಚೆಗಿನ ‘ಥಪ್ಪಡ್’ ಸಿನಿಮಾ ಹಿಟ್ ಆಗಿದೆ. ಸದ್ಯಕ್ಕೆ ಅವರ ಕೈಯಲ್ಲಿ ಮೂರು ಹಿಂದಿ ಸಿನಿಮಾಗಳಿವೆ. ಅದೇ ರೀತಿ ಜನ ಗಣ ಮನ ಎಂಬ ತಮಿಳು ಪ್ರಾಜೆಕ್ಟ್‌ಗೂ ಸಹಿ ಹಾಕಿದ್ದಾರೆ. ತಾಪ್ಸಿ ಟಾಲಿವುಡ್ ಮೂಲಕ ತಮ್ಮ ವೃತ್ತಿ ಬದುಕು ಆರಂಭಿಸಿದರೂ ಬ್ರೇಕ್ ಸಿಕ್ಕಿದ್ದು ಮಾತ್ರ ಬಾಲಿವುಡ್ ಚಿತ್ರಗಳಲ್ಲಿ ಎಂಬುದು ವಿಶೇಷ.

Comments are closed.