ಮನೋರಂಜನೆ

ಅಲ್ಲು ಅರ್ಜುನ್​ ಅಭಿನಯದ ಚಿತ್ರದ 6 ನಿಮಿಷದ ಫೈಟ್​ಗೆ 6 ಕೋಟಿ..!

Pinterest LinkedIn Tumblr


‘ಅಲಾ ವೈಕುಂಠಪುರಂಲೋ’ ಸಿನಿಮಾದ ನಂತರ ಅಲ್ಲು ಅರ್ಜುನ್​ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ’. ನಿರ್ದೇಶಕ ಸುಕುಮಾರ್​ ಜೊತೆ ನಟಿಸುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಸಾಕಷ್ಟು ಕಾರಣಗಳಿಂದ ಈ ಚಿತ್ರ ವಿಶೇಷವೆನಿಸಿಕೊಂಡಿದೆ.

ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಲಾರಿ ಡ್ರೈವರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ. ಅಲ್ಲು ಅರ್ಜುನ್​ ಹುಟ್ಟುಹಬ್ಬದಂದು ಈ ಚಿತ್ರದ ಫಸ್ಟ್​ ಲುಕ್​ ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನು ಈ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ತೆರೆ ಕಾಣಲಿದೆ. ಬಹುಭಾಷೆಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರದಲ್ಲಿ 6 ನಿಮಿಷಗಳ ಫೈಟಿಂಗ್​ ಸೀಕ್ವೆನ್ಸ್​ಗೆ 6 ಕೋಟಿ ವೆಚ್ಚವಾಗಲಿದೆಯಂತೆ.

ಅಲ್ಲು ಅರ್ಜುನ್​ ಆ್ಯಕ್ಷನ್​ ಹೇಗಿರುತ್ತದೆ ಎಂದು ವರ್ಣಿಸುವ ಅಗತ್ಯವಿಲ್ಲ. ಇದೇ ಕಾರಣದಿಂದಾಗಿ ನಿರ್ದೇಶಕ ಸುಕುಮಾರ್​ 6 ನಿಮಿಷದ ಆ್ಯಕ್ಷನ್​ ದೃಶ್ಯಕ್ಕಾಗಿ 6 ಕೋಟಿ ವೆಚ್ಚ ಮಾಡಿಸುತ್ತಿದ್ದಾರಂತೆ. ಹೀಗೊಂದು ಸುದ್ದಿ ಸದ್ಯ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಈ ಸಿನಿಮಾದ ಹಾಡೊಂದರಲ್ಲಿ ದಿಶಾ ಪಟಾಣಿ ಹೆಜ್ಜೆ ಹಾಕಲಿದ್ದಾರಂತೆ.

Comments are closed.