ಮನೋರಂಜನೆ

ನಟಿ ಸಮಂತಾ ಅಕ್ಕಿನೇನಿ ನಾಪತ್ತೆ: ಅಭಿಮಾನಿಗಳಿಗೆ ತುಂಬ ಬೇಸರ!

Pinterest LinkedIn Tumblr


ಟಾಲಿವುಡ್‌ನ ಬೇಡಿಕೆಯ ನಟಿ ಸಮಂತಾ ಅಕ್ಕಿನೇನಿ, ನಟ ನಾಗಾರ್ಜುನ ಪುತ್ರ ನಾಗ ಚೈತನ್ಯ ಮದುವೆಯಾದ್ಮೇಲೆ ಪದೇ ಪದೇ ಒಂದಲ್ಲ ಒಂದು ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬೋಲ್ಡ್ ಡ್ರೆಸ್‌ ಫೋಟೋಗಳಿಗೆ ತರಹೇವಾರಿ ಕಾಮೆಂಟ್‌ಗಳು ಬರುತ್ತಿರುತ್ತವೆ. ಅದರ ಜೊತೆಗೆ ಅವರ ಮಾತುಗಳು ಕೂಡ ಸಾಕಷ್ಟು ಚರ್ಚೆಗೆ ಒಳಪಡುತ್ತವೆ.

ಮದುವೆಯಾದ್ಮೇಲೆ ಸಮಂತಾಗಿ ಅಷ್ಟಾಗಿ ಆಫರ್‌ಗಳು ಬರುತ್ತಿಲ್ಲ. ಮಗು ಮಾಡಿಕೊಳ್ಳುವ ಪ್ಲ್ಯಾನ್ ಸಮಂತಾಗೆ ಇರಬಹುದು ಎಂದು ಕೂಡ ಹೇಳಲಾಗಿತ್ತು. ಆದರೆ ಈ ವದಂತಿ ಹಬ್ಬಿದಾಗೆಲ್ಲ ಸಮಂತಾ ಇದನ್ನು ತಿರಸ್ಕರಿಸಿದ್ದರು. ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಿದ್ದ ಸಮಂತಾ, ಕಳೆದ 10 ದಿನಗಳಿಂದ ಏನನ್ನೂ ಪೋಸ್ಟ್ ಮಾಡಿಲ್ಲ. ಹೀಗಾಗಿ ಇವರ ಅಭಿಮಾನಿಗಳು ತುಂಬ ಬೇಸರ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಕುಳಿತು ಹೆಚ್ಚು ಇಂಟರ್ನೆಟ್‌ ಬಳಕೆ ಮಾಡುತ್ತಿದ್ದಾರೆ. ಮಾರ್ಚ್ 28ರಿಂದ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಏನನ್ನೂ ಪೋಸ್ಟ್ ಮಾಡದಿರುವುದನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಮಂತಾ ಇನ್ನೂ ಹಣ ಸಹಾಯ ಮಾಡಿಲ್ವಾ?
‘ಫಿಲ್ಮ್ ಎಂಪ್ಲೋಯಿಸ್ ಫೆಡರೇಶನ್ ಆಫ್ ಸೌಥ್ ಇಂಡಿಯಾ’ಕ್ಕೆ ಎಲ್ಲ ನಟರು ಹಣ ಸಹಾಯ ಮಾಡುತ್ತಿದ್ದಾರೆ. ಆದರೆ ಸಮಂತಾ ಇದುವರೆಗೂ ಯಾವುದೇ ಹಣ ನೀಡಿದ್ದರ ಬಗ್ಗೆ ಘೋಷಣೆ ಮಾಡಿಲ್ಲ. ಸಮಂತಾರ ಈ ಅನುಪಸ್ಥಿತಿಯಿಂದ ನೆಟ್ಟಿಗರು ಅವರು ಗರ್ಭಿಣಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಸಮಂತಾ ಕೊನೆಯದಾಗಿ ತೆಲುಗಿನ ‘ಜಾನು’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ‘ದಿ ಫ್ಯಾಮಿಲಿ ಮ್ಯಾನ್’ ವೆಬ್‌ಸಿರೀಸ್ ಸೀಕ್ವೇಲ್‌ನಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.

ಬಾಯ್‌ಫ್ರೆಂಡ್ ಬಗ್ಗೆ ಸಮಂತಾ ಮಾತು
‘ಮಹಾನಟಿ ಸಾವಿತ್ರಿ ವೈಯಕ್ತಿಕ ಜೀವನದಲ್ಲಿ ಏನೆಲ್ಲ ಕಷ್ಟಗಳು ಬಂತೋ, ನನ್ನ ಜೀವನದಲ್ಲೂ ಕೂಡ ಅಂತಹ ಕಷ್ಟಗಳು ಎದುರಾದವು. ಆದರೆ ನಾನು ಮೊದಲೇ ಎಚ್ಚೆತ್ತುಕೊಂಡೆ. ಹೀಗಾಗಿ ಪರಿಸ್ಥಿತಿ ಕೈಮೀರುವ ಮುನ್ನವೇ ಆ ಬಂಧನದಿಂದ ಹೊರಬಿದ್ದೆ. ಆ ಬಳಿಕ ಚೈತನ್ಯ ಅವರಂತಹ ದೊಡ್ಡ ವ್ಯಕ್ತಿಯೊಂದಿಗೆ ಬದುಕನ್ನು ಹಂಚಿಕೊಳ್ಳುವ ಅವಕಾಶ ಲಭಿಸಿತು’ ಎಂದು ಸಮಂತಾ ಕೆಲ ದಿನಗಳ ಹಿಂದೆ ಸಂದರ್ಶನದಲ್ಲಿ ಹೇಳಿದ್ದಾರೆ. ಸಮಂತಾ ಮತ್ತು ಸಿದ್ದಾರ್ಥ್ ಪ್ರೀತಿ ಮಾಡುತ್ತಿದ್ದರು ಎಂದು ಹೇಳಲಾಗಿತ್ತು.

Comments are closed.