ಮನೋರಂಜನೆ

ಬ್ಯಾಕ್ ಲೆಸ್ ಭಾವಚಿತ್ರವೊಂದನ್ನು ಹರಿಬಿಟ್ಟ ಬಾಲಿವುಡ್ ನಟಿ ಊರ್ವಶಿ ರೌತೆಲಾ

Pinterest LinkedIn Tumblr


ಖ್ಯಾತ ಬಾಲಿವುಡ್ ನಟಿ ಊರ್ವಶಿ ರೌತೆಲಾ ತನ್ನ ಚಿತ್ರಗಳ ಜೊತೆಗೆ ಸಾಮಾಜಿಕ ಮಾಧ್ಯಮಗಳ ಮೇಲೆ ತನ್ನ ಭಾವಚಿತ್ರ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಹೆಡ್ಲೈನ್ ಸೃಷ್ಟಿಸುತ್ತಲೇ ಇರುತ್ತಾಳೆ. ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಸದ್ಯ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದು, ಲಾಕ್ ಡೌನ್ ಘೋಷಣೆಯಾದಾಗಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯಳಾಗಿರುವ ಊರ್ವಶಿ, ನಿತ್ಯ ತನ್ನ ಮೋಹಕ ಭಾವಚಿತ್ರ, ಸ್ವಿಮ್ಮಿಂಗ್ ಪೂಲ್ ನಲ್ಲಿನ ಬಿಕಿನಿ ವಿಡಿಯೋಗಳನ್ನೂ ಹಂಚಿಕೊಂಡು ತನ್ನ ಅಭಿಮಾಹಿಗಳಿಗೆ ಖುಷಿಪಡಿಸುತ್ತಲೇ ಇದ್ದಾಳೆ.

ಇತ್ತೀಚೆಗಷ್ಟೇ ಅವಳು ಹರಿಬಿಟ್ಟ ತನ್ನ ಬಿಕಿನಿ ಭಾವಚಿತ್ರಗಳು ಹಾಗೂ ಬಿಕಿನಿ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದವು. ಊರ್ವಶಿ ಹಂಚಿಕೊಳ್ಳುವ ವಿಡಿಯೋ ಆಗಲಿ ಅಥವಾ ಭಾವಚಿತ್ರಗಳಾಗಲಿ ವೈರಲ್ ಆಗುವುದು ಮಾತ್ರ ಖಚಿತ. ಬಿಕಿನಿ ಭಾವಚಿತ್ರಗಳ ಬಳಿಕ ಸದ್ಯ ಊರ್ವಶಿ ತನ್ನ ಬ್ಯಾಕ್ ಲೆಸ್ ಭಾವಚಿತ್ರವೊಂದನ್ನು ಹರಿಬಿಟ್ಟಿದ್ದು, ಅದೂ ಕೂಡ ಇದೀಗ ವೈರಲ್ ಆಗಲಾರಂಭಿಸಿದೆ.

‘ಸಿಂಗ್ ಸಹಾಬ್ ದಿ ಗ್ರೇಟ್’ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿರುವ ಊರ್ವಶಿ ರೌತೆಲಾ, ದೆಹಾದ್ಯಂತ ಲಾಕ್ ಡೌನ್ ಮಧ್ಯೆ ಐಸೋಲೆಶನ್ ನಲ್ಲಿದ್ದುಕೊಂಡು ನಿತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಹಸಿಬಿಸಿ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾಳೆ.

ಹಾಗಂತ ಕೇವಲ ಭಾವಚಿತ್ರಗಳು ಹಾಗೂ ವಿಡಿಯೋ ಮೂಲಕವೇ ಊರ್ವಶಿ ಚರ್ಚೆಯಲ್ಲಿರುತ್ತಾಳೆ ಎಂದು ಅಂದುಕೂಳ್ಳಬೇಡಿ. ಏಕೆಂದರೆ ಇತ್ತೀಚಿಗೆ ಟ್ವೀಟ್ ವೊಂದನ್ನೂ ಕೂಡ ಕಾಪಿ ಮಾಡಿ ಊರ್ವಶಿ ವಿವಾದವನ್ನು ಮೆಮೇಲೆ ಎಳೆದುಕೊಂಡಿದ್ದಳು. ಊರ್ವಶಿಯ ಈ ಈಲ್ಲ ಭಾವಚಿತ್ರಗಳನ್ನು ಅವಳ ಇನ್ಸ್ಟಾಗ್ರಾಮ್ ಖಾತೆಯಿಂದ ಪಡೆಯಲಾಗಿದೆ.

Comments are closed.