ಮನೋರಂಜನೆ

ಮಾರಣಾಂತಿಕ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿದ ಹಾಲಿವುಡ್ ಸ್ಟಾರ್ ನಟ !

Pinterest LinkedIn Tumblr

ಹಾಲಿವುಡ್ ಸ್ಟಾರ್ ನಟ, ರಂಗಭೂಮಿ ಕಲಾವಿದ, ಡೆಸ್ಪರೇಟ್ಲಿ ಸೀಕಿಂಗ್ ಸೂಸಾನ್, ಕ್ರೊಕೊಡೈಲ್ ಡ್ಯೂನ್ ಡೀ ಮತ್ತು ನೆಟ್ ಫ್ಲಿಕ್ಸ್ ನ “ಯೂ” ಸರಣಿ ಖ್ಯಾತಿಯ ಮಾರ್ಕ್ ಬ್ಲಮ್ (69) ಮಾರಣಾಂತಿಕ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಫೋಕ್ಸ್ ನ್ಯೂಸ್ ವರದಿ ಪ್ರಕಾರ, ಬ್ಲಮ್ ಪತ್ನಿ ಜನೆಟ್ ಝಾರೀಶ್ ಇ ಮೇಲ್ ಮೂಲಕ ಖಚಿತಪಡಿಸಿದ್ದಾರೆ.

ನನ್ನ ಪತಿ ನಿನ್ನೆ ಕೋವಿಡ್ 19 ವೈರಸ್ ನಿಂದ ನ್ಯೂಯಾರ್ಕ್ ಪ್ರೆಸ್ ಬೈಟೇರಿಯನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

“ಇದೊಂದು ತುಂಬಾ ದುಃಖದ ವಿಷಯ, ನಮ್ಮ ಗೆಳೆಯ, ಮಂಡಳಿಯ ಮಾಜಿ ಸದಸ್ಯ ಮಾರ್ಕ್ ಬ್ಲಮ್ ಕೋವಿಡ್ ಸೋಂಕಿನಿಂದ ನಿಧನರಾಗಿದ್ದಾರೆಂಬ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಎಸ್ ಎಜಿ-ಎಫ್ ಟಿಆರ್ ಎನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ರೆಬೆಕ್ಕಾ ಡ್ಯಾಮೋನ್ ಟ್ವೀಟ್ ಮಾಡಿದ್ದಾರೆ.

1970ರಲ್ಲಿ ನ್ಯೂ ಜರ್ಸಿಯಲ್ಲಿ ಜನಿಸಿದ್ದ ಮಾರ್ಕ್ 1983ರಲ್ಲಿ ಲವ್ ಸಿಕ್ ಸಿನಿಮಾದಲ್ಲಿ ನಟನಾಗಿ ಅಭಿನಯಿಸುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.

Comments are closed.