ರಾಷ್ಟ್ರೀಯ

ಮನೆ ಬಾಗಿಲಿಗೆ ಉಚಿತವಾಗಿ ಊಟದ ವ್ಯವಸ್ಥೆ ಆರಂಭಿಸಿದ ಕೇರಳ ಸರ್ಕಾರ

Pinterest LinkedIn Tumblr

ತಿರುವನಂತಪುರ: ಸಮುದಾಯ ಅಡುಗೆ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅವಶ್ಯ ಇರುವವರ ಮನೆ ಬಾಗಿಲಿಗೆ ಉಚಿತವಾಗಿ ಸಿದ್ಧ ಆಹಾರ ಪೂರೈಸುವ ಯೋಜನೆಯನ್ನು ಕೇರಳ ಸರ್ಕಾರ ಆರಂಭಿಸಿದೆ. ಸದ್ಯ 941 ಪಂಚಾಯತ್‌ಗಳಲ್ಲಿ ಸಮುದಾಯ ಅಡುಗೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯೋಜನೆ ಘೋಷಿಸಿದ ಮರುದಿನವೇ 43 ಸಮುದಾಯ ಅಡುಗೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 2,215 ಮನೆಗಳಿಗೆ ಸಿದ್ಧ ಆಹಾರ ಪೂರೈಸಲಾಗಿದ್ದು, ಈ ಪೈಕಿ 1,639 ಮನೆಗಳಿಗೆ ಉಚಿತವಾಗಿ ಆಹಾರ ವಿತರಿಸಲಾಗಿದೆ. ಶುಕ್ರವಾರದ ವೇಳೆಗೆ ಇನ್ನೂ 528 ಸಮುದಾಯ ಅಡುಗೆ ಕೇಂದ್ರಗಳು ಸ್ಥಾಪನೆಯಾಗಿವೆ. ಉಳಿದವು ಇನ್ನೆರಡು ದಿನಗಳಲ್ಲಿ ಸ್ಥಾಪನೆಯಾಗಲಿವೆ ಎಂದು ಖಾಸಗಿಸುದ್ದಿಸಂಸ್ಥೆಯೊಂದು ವರದಿ ಮಾಡಿದೆಕೊರೊನಾ ಲಾಕ್‌ಡೌನ್‌ ಪರಿಣಾಮದಿಂದ ದುರ್ಬಲವರ್ಗದವರು, ಬಡವರು, ನಿರ್ಗತಿಕರಿಗೆ ಆಹಾರ ಸಮಸ್ಯೆಯಾಗಿದೆ ಎಂಬ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.

ಆರ್ಥಿಕವಾಗಿ ದುರ್ಬಲರಾಗರುವವರಿಗೆ ಉಚಿತವಾಗಿ ಅಹಾರ ನೀಡಲಾಗುತ್ತಿದೆ. ಸಾರ್ವಜನಿಕರೂ ಇದರ ಪ್ರಯೋಜನೆ ಪಡೆಯಬಹುದಾಗಿದ್ದು, ಅವರಿಗೆ ಸಸ್ಯಾಹಾರಿ ಊಟಕ್ಕೆ ₹ 20 ನಿಗದಿಪಡಿಸಲಾಗಿದೆ. ಕಾರ್ಯಕರ್ತರಿಗೆ ಒಂದು ಊಟಕ್ಕೆ ₹ 5ರಂತೆ ಸೇವಾ ಶುಲ್ಕ ನೀಡಬೇಕಾಗುತ್ತದೆ.

Comments are closed.