ಮನೋರಂಜನೆ

ದಯವಿಟ್ಟು ಹಿಂದಿರುಗಿ ರಶ್ಮಿಕಾ ಮಂದಣ್ಣ– ಅಭಿಮಾನಿಗಳಿಂದ ಮನವಿ

Pinterest LinkedIn Tumblr


ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಟ್ವಿಟ್ಟರಿನಿಂದ ದೂರ ಉಳಿದಿದ್ದು, ಇದನ್ನು ಗಮನಿಸಿದ ಅಭಿಮಾನಿಗಳು ದಯವಿಟ್ಟು ಹಿಂದಿರುಗಿ ರಶ್ಮಿಕಾ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ರಶ್ಮಿಕಾ ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲದೆ ಆಗಾಗ ತಮ್ಮ ಫೋಟೋಗಳನ್ನು ಸಹ ಟ್ವಿಟ್ಟರಿನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ರಶ್ಮಿಕಾ ತಮ್ಮ ಟ್ವಿಟ್ಟರಿನಿಂದ ದೂರ ಉಳಿದುಕೊಂಡಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಕಳೆದ ಒಂದು ವಾರದಿಂದ ರಶ್ಮಿಕಾ ತಮ್ಮ ಟ್ವಿಟ್ಟರ್ ಬಳಸುತ್ತಿಲ್ಲ. ಇದಕ್ಕೆ ಕಾರಣ ರಶ್ಮಿಕಾ ತಮ್ಮ ಟ್ವಿಟ್ಟರ್ ಪಾಸ್‍ವರ್ಡ್ ಮರೆತು ಹೋಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹಾಗಾಗಿ ಅವರು ಟ್ವಿಟ್ಟರಿನಿಂದ ದೂರ ಉಳಿದಿದ್ದಾರೆ. ಮಾರ್ಚ್ 7ರಂದು ರಶ್ಮಿಕಾ ಕೊನೆಯದಾಗಿ ಟ್ವೀಟ್ ಮಾಡಿದ್ದರು. ಇದಾದ ಬಳಿಕ ಅವರು ಯಾವುದೇ ಟ್ವೀಟ್ ಮಾಡಿಲ್ಲ.

ರಶ್ಮಿಕಾ ಒಂದು ವಾರದಿಂದ ಟ್ವಿಟ್ಟರ್ ಬಳಸುತ್ತಿಲ್ಲ ಎಂಬುದನ್ನು ಗಮನಿಸಿದ ಅಭಿಮಾನಿಗಳು “ಕಮ್‍ಬ್ಯಾಕ್ ರಶ್ಮಿಕಾ” ಎಂಬ ಹ್ಯಾಶ್‍ಟ್ಯಾಗ್ ಬಳಸಿ ಟ್ವಿಟ್ಟರಿನಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಟಿಯ ಟ್ವೀಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಕೆಲವು ಅಭಿಮಾನಿಗಳು, ದಯವಿಟ್ಟು ಹಿಂದಿರುಗಿ ರಶ್ಮಿಕಾ. ನಿಮ್ಮನ್ನು ನಾವು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಸ್ಮೈಲ್ ಹಾಗೂ ನಿಮ್ಮ ಸೆಲ್ಫಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ಮಾಡುತ್ತಿದ್ದಾರೆ. ಮತ್ತೆ ಕೆಲವು ಅಭಿಮಾನಿಗಳು, ರಶ್ಮಿಕಾ ತಮ್ಮ ಟ್ವಿಟ್ಟರ್ ಪಾಸ್‍ವರ್ಡ್ ಮರೆತು ಹೋಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಸದ್ಯ ರಶ್ಮಿಕಾ ಈಗ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಜೊತೆ #AA20″ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಅವರು ನಟ ನಿತಿನ್ ಜೊತೆ ನಟಿಸಿದ ‘ಭೀಷ್ಮ’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು.

Comments are closed.