
ಬಾಹುಬಲಿ ಸಿನಿಮಾ ಖ್ಯಾತಿಯ ನಟ ರಾಣಾ ದಗ್ಗುಬಾಟಿಯವರು ತಮ್ಮ ‘ಹಾಥಿ ಮೇರೆ ಸಾಥಿ’ ಸಿನಿಮಾಗಾಗಿ 30 ಕೆ.ಜಿ ದೇಹ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿಅವರು ದಟ್ಟ ಅರಣ್ಯದಲ್ಲಿ ವಾಸಿಸುತ್ತಿರುವ 50 ವರ್ಷದ ಬಂದೇವ್ ಎಂಬ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದಕ್ಕಾಗಿ ಅವರು ಕಳೆದ ಎರಡು ವರ್ಷಗಳಿಂದ ಅತ್ಯಂತ ಶಿಸ್ತುಬದ್ಧವಾದ ಡಯಟ್ ಮತ್ತು ಕಠಿಣ ತರಬೇತಿಗಳನ್ನು ಪಡೆದು ದೇಹ ತೂಕ ಇಳಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಣಾ, ‘ಈ ಸಿನಿಮಾದಲ್ಲಿ ಎಲ್ಲವೂ ತುಂಬಾ ನೈಜವಾಗಿ ಮೂಡಿ ಬರಬೇಕು ಎಂದು ನಿರ್ದೇಶಕ ಪ್ರಭು ಸೊಲೊಮನ್ ಬಯಸುತ್ತಾರೆ.
ನಾನು ಆಗಲೇ ದೃಢಕಾಯನಾಗಿದ್ದರಿಂದ ಹೆಚ್ಚಿನ ಪ್ರಮಾಣದ ದೇಹ ತೂಕ ಕಳೆದುಕೊಳ್ಳಲು ನನಗೆ ಕಷ್ಟವಾಯಿತು. ಆದರೂ ಬಂದೇವ್ ಪಾತ್ರಕ್ಕಾಗಿ ನಾನು ಅತ್ಯಂತ ಕಠಿಣ ದೈಹಿಕ ತರಬೇತಿಗಳನ್ನು ಪಡೆದು ಸಣ್ಣಗೆ ಕಾಣಿಸಿಕೊಂಡಿದ್ದೇನೆ. ಅದು ನನಗೆ ಅದ್ಭುತ ಅನುಭವ ನೀಡಿತು’ ಎಂದಿದ್ದಾರೆ. ಮೂರು ಭಾಷೆಗಳಲ್ಲಿ ಬರಲಿರುವ ಈ ಅಡ್ವೆಂಚರ್ ಸಿನಿಮಾದಲ್ಲಿ ಮನುಷ್ಯ ಮತ್ತು ಆನೆಗಳ ನಡುವಿನ ಸಂಬಂಧದ ಕಥೆ ಇದೆ. ಈ ಸಿನಿಮಾದ ಟೀಸರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಏಪ್ರಿಲ್‌ಗೆ ಸಿನಿಮಾ ಬಿಡುಗಡೆಯಾಗಲಿದೆ.
Comments are closed.