ಮನೋರಂಜನೆ

ನಟಿ ಪೂಜಾ ಹೆಗ್ಡೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಗೊಂದಲಕ್ಕೊಳಗಾದ ಅಂಕಲ್

Pinterest LinkedIn Tumblr


ಸೆಲೆಬ್ರಿಟಿಗಳು ಹೆಚ್ಚಾಗಿ ಕಾಣಸಿಗುವ ತಾಣ ಎಂದರೆ ಅದು ಏರ್‌ಪೋರ್ಟ್ ಮಾತ್ರ. ಮುಂಬೈನಲ್ಲಾದರೆ ಇನ್ನೂ ಜಾಸ್ತಿ. ಹಾಗಾಗಿಯೇ ಅಲ್ಲಿನ ಮಾಧ್ಯಮಗಳು ಏರ್‌ಪೋರ್ಟ್‌ಗೆಂದೇ ವಿಶೇಷ ಛಾಯಾಗ್ರಾಹಕರನ್ನು ನೇಮಿಸಿಕೊಂಡಿರುತ್ತವೆ. ಇನ್ನು ಅಭಿಮಾನಿಗಳಾದರೆ ನಿತ್ಯ ಯಾರಾದರೂ ಒಬ್ಬ ಸೆಲೆಬ್ರಿಟಿಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಲೇ ಇರುತ್ತಾರೆ.

ಸೋಮವಾರ ಬೆಳಗ್ಗೆ ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು. ಆ ಸಮಯದಲ್ಲಿ ಫೋಟೋಗ್ರಾಫರ್ ಫೋಟೋ ತೆಗೆಯುತ್ತಿದರೆ ತಮಾಷೆ ಪ್ರಸಂಗವೊಂದು ನಡೆಯಿತು. ಅಂಕಲ್ ಒಬ್ಬರು ಪೂಜಾ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದರು. ಅವರ ಉತ್ಸಾಹ ನೋಡಿ ಪೂಜಾ ಹೆಗ್ಡೆ ಸಹ ಸೆಲ್ಫಿಗೆ ಅವಕಾಶ ನೀಡಿದರು. ಆದರೆ ಆಗಿದ್ದೇ ಬೇರೆ.

ಪೂಜಾ ಸಹ ಅವರಿಗಾಗಿ ಕೆಲ ಕ್ಷಣ ನಿಂತುಕೊಂಡರು. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಷ್ಟು ಹೊತ್ತು ನಿಲ್ಲಲ್ಲ. ವಿಷಯ ಹೀಗಿರಬೇಕಾದರೆ ಅಂಕಲ್‌ಗಾಗಿ ಪೂಜಾ ಸ್ವಲ್ಪ ಹೆಚ್ಚು ಸಮಯವನ್ನೇ ನೀಡಿದರು. ಆದರೂ ಪಾಪ ಅಂಕಲ್‍ಗೆ ಸೆಲ್ಫಿ ತೆಗೆದುಕೊಳ್ಳುವ ಸುವರ್ಣಾವಕಾಶ ಮಿಸ್ ಆಯ್ತು.

ಪೂಜಾ ಹೆಗ್ಡೆಯನ್ನು ನೋಡಿದ್ದೇ ತಡ ತಡಬಡಾಯಿಸಿದರು. ಈ ಗಾಬರಿಯಲ್ಲಿ ಕೈಯಿಂದ ಫೋನ್ ಜಾರಿ ಬಿತ್ತು. ಮೊದಲೇ ತಬ್ಬಿಬ್ಬಾಗಿದ್ದ ಅಂಕಲ್ ಈ ಘಟನೆಯಿಂದ ಇನ್ನಷ್ಟು ಗೊಂದಲಕ್ಕೊಳಗಾಗದರು. ಫೋನನ್ನು ಹಾಗೆ ಹೀಗೆ ಮಾಡುತ್ತಾ ಕಮಂಗಿ ತರಹ ಆಡಿದರೇ ಹೊರತು ಸೆಲ್ಫಿ ಮಾತ್ರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

ಈ ದೃಶ್ಯವನ್ನು ನೋಡುತ್ತಿದ್ದ ಫೋಟೋಗ್ರಾಫರ್, ಅಲ್ಲಿದ್ದವರೆಲ್ಲಾ ಬಿದ್ದು ಬಿದ್ದು ನಗುವಂತಾಗಿದೆ. ಆ ಬಳಿಕ ಬಹಳಷ್ಟು ಮಂದಿ ಅಭಿಮಾನಿಗಳು ಬಂದು ಪೂಜಾ ಜೊತೆಗೆ ಸೆಲ್ಫಿ ತೆಗೆದುಕೊಂಡರು. ಬಳಿಕ ಸ್ವಲ್ಪವೂ ತಡಮಾಡದೆ ಪೂಜಾ ತನ್ನ ಕಾರನ್ನು ಹತ್ತಿ ಹೊರಟು ಹೋದರು.

ಸದ್ಯಕ್ಕೆ ಪೂಜಾ ಹೆಗ್ಡೆ ವೃತ್ತಿ ಬದುಕು ಉಚ್ಛ್ರಾಯ ಸ್ಥಿತಿಯಲ್ಲಿದೆ. ಇದಕ್ಕೆ ಕಾರಣ ‘ಅಲಾ ವೈಕುಂಠಪುರಮುಲೋ’ ಹಿಟ್ ಆಗಿದ್ದೇ ಕಾರಣ. ಬಾಕ್ಸ್ ಆಫೀಸ್‌ನಲ್ಲೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸದ್ಯಕ್ಕೆ ಪ್ರಭಾಸ್, ಅಖಿಲ್ ಜೊತೆಗೂ ಪೂಜಾ ಅಭಿನಯಿಸುತ್ತಿದ್ದಾರೆ. ಇನ್ನೊಂದು ಕಡೆ ಬಾಲಿವುಡ್‌ನಲ್ಲೂ ಬಂಪರ್ ಆಫರ್ ಗಿಟ್ಟಿಸಿದ್ದಾರೆ. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗೆ ಕಭಿ ಈದ್ ಕಭಿ ದಿವಾಲಿ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

Comments are closed.