ಅಂತರಾಷ್ಟ್ರೀಯ

ಕೊರೊನಾ ವೈರಸ್; ವುಹಾನ್ ಆಸ್ಪತ್ರೆಯ ನಿರ್ದೇಶಕ ಸಾವು

Pinterest LinkedIn Tumblr


ಬೀಜಿಂಗ್: ಚೀನಾದ ವುಹಾನ್ ಆಸ್ಪತ್ರೆಯ ನಿರ್ದೇಶಕ ಲಿಯು ಝಿಮಿಂಗ್ ಕೊರೊನಾ ವೈರಸ್ ಗೆ ಸಾವನ್ನೊಪ್ಪಿರುವ ಘಟನೆ ನಡೆದಿದೆ ಎಂದು ರಾಜ್ಯ ಸರ್ಕಾರ ಸ್ವಾಮಿತ್ವದ ವರದಿ ಹೇಳೀದೆ.

ಚೀನಾದ ವುಹಾನ್ ಕೊರೊನಾ ವೈರಸ್ ನ ಮೂಲ ಸ್ಥಳವಾಗಿದ್ದು, ದೇಶಾದ್ಯಂತ ಮರಣಮೃದಂಗ ಬಾರಿಸುತ್ತಿರುವ ನೂತನ ವೈರಸ್ ದಾಳಿಗೆ ನಿರ್ದೇಶಕ ಲಿಯು ಸಾವನ್ನಪ್ಪಿದ್ದಾರೆ. ಕೋವಿಡ್ 19 ವೈರಸ್ ಕಳೆದ ವರ್ಷ ವುಹಾನ್ ನಲ್ಲಿ ಮೊದಲು ಪತ್ತೆಯಾಗಿರುವುದಾಗಿ ನಂಬಲಾಗಿದೆ.

ಈ ವೈರಸ್ ಗೆ ಈವರೆಗೆ 1900ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 72 ಸಾವಿರ ಮಂದಿ ವೈರಸ್ ಗೆ ತುತ್ತಾಗಿದ್ದಾರೆ ಎಂದು ವರದಿ ತಿಳಿಸಿದೆ. ಲಿಯು ಝೀಮಿಂಗ್ ವುಚಾಂಗ್ ಆಸ್ಪತ್ರೆಯ ನಿರ್ದೇಶಕರಾಗಿದ್ದು, ಅವರನ್ನು ರಕ್ಷಿಸುವ ಎಲ್ಲಾ ಪ್ರಯತ್ನವು ವಿಫಲವಾಗಿರುವುದಾಗಿ ಸ್ಟೇಟ್ ಬ್ರಾಡ್ ಕಾಸ್ಟರ್ ಸಿಸಿಟಿವಿ ವರದಿ ಮಾಡಿದೆ.

ಈವರೆಗೆ ಕೊರೊನಾ ವೈರಸ್ ಗೆ ಆರು ಮಂದಿ ವೈದ್ಯಕೀಯ ಕ್ಷೇತ್ರದ ಜನರು ಸಾವನ್ನಪ್ಪಿದ್ದು, ಸಾವಿರಾರು ಮಂದಿಗೆ ವೈರಾಣು ಸೋಂಕು ತಲುಲಿರುವುದಾಗಿ ವರದಿ ತಿಳಿಸಿದೆ.

Comments are closed.