ಮನೋರಂಜನೆ

ನಾನು ಲವ್ವಲ್ಲಿ ಇದ್ದೇನೆ: ತೆಲುಗು ನಟ ವಿಜಯ್ ದೇವರಕೊಂಡ

Pinterest LinkedIn Tumblr


ಬೆಂಗಳೂರು: ಮದುವೆ ಬಗ್ಗೆ ಕೇಳಿದಾಗ ನಟ ವಿಜಯ್ ದೇವರಕೊಂಡ ನಾನು ಲವ್ವಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.

ಹೌದು ಇತ್ತೀಚೆಗೆ ತೆಲುಗು ಚಿತ್ರರಂಗದ ಸ್ಟಾರ್ ನಟ ವಿಜಯ್ ದೇವರಕೊಂಡ ಅವರನ್ನು ಮದುವೆ ಬಗ್ಗೆ ಕೇಳಿದಾಗ, ನನಗೆ ಮದುವೆ ಬಗ್ಗೆ ಗೌರವವಿದೆ. ಆದರೆ ಈಗ ಸದ್ಯಕ್ಕೆ ನಾನು ನನ್ನ ವೃತ್ತಿಯ ಜೊತೆ ಲವ್ವಿನಲ್ಲಿ ಇದ್ದೇನೆ ಎಂದು ಉತ್ತರ ನೀಡಿದ್ದಾರೆ.

ಸದಾ ತನ್ನ ಮದುವೆ ಮತ್ತು ಲವ್ ವಿಚಾರದಲ್ಲಿ ಸುದ್ದಿಯಲ್ಲಿರುವ ವಿಜಯ್ ದೇವರಕೊಂಡ ಅಭಿನಯದ ಚಿತ್ರ ‘ವರ್ಲ್ಡ್ ಫೇಮಸ್ ಲವರ್’ ಇದೇ ಫೆಬ್ರವರಿ 14 ರಂದು ಬಿಡುಗಡೆಯಾಗುತ್ತಿದೆ. ಪ್ರೇಮಿಗಳ ದಿನದಂದು ಬಿಡುಗಡೆಗೊಳ್ಳುತ್ತಿರುವ ಸಿನಿಮಾವನ್ನು ಕ್ರಾಂತಿ ಮಾಧವ್ ಅವರು ನಿರ್ದೇಶನ ಮಾಡಿದ್ದಾರೆ. ಕೆ.ಎ ವಲ್ಲಭ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಾಶಿ ಖನ್ನಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ವಿಜಯ್ ದೇವರಕೊಂಡರನ್ನು ಅವರ ಮದುವೆಯ ವಿಚಾರವಾಗಿ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸಿದ ವಿಜಯ್, ನನಗೆ ಮದುವೆಯ ಬಗ್ಗೆ ಗೌರವವಿದೆ. ಆದರೆ ಸದ್ಯಕ್ಕೆ ನಾನು ನನ್ನ ಕೆಲಸದ ಜೊತೆ ಲವ್ವಿನಲ್ಲಿ ಇದ್ದೇನೆ. ಇನ್ನು ಇದರಲ್ಲಿ ಸಾಧಿಸಬೇಕಾಗಿದ್ದು ತುಂಬಾ ಇದೆ. ಹಾಗಾಗಿ ಈಗ ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ವಿಜಯ್ ಹೇಳಿದ್ದಾರೆ.

ಸೌತ್ ಸಿನಿಚಿತ್ರರಂಗದ ಮೋಸ್ಟ್ ಎಲಿಜಬಲ್ ಬ್ಯಾಚುರಲ್ ಆಗಿರುವ ವಿಜಯ್ ದೇವರಕೊಂಡಗೆ ಮಹಿಳಾ ಅಭಿಮಾನಿಗಳು ಜಾಸ್ತಿ. ಹಾಗೆಯೇ ಹಲವಾರು ಹುಡುಗಿಯರ ಜೊತೆ ವಿಜಯ್ ಅವರ ಹೆಸರು ಈ ಹಿಂದೆ ಕೇಳಿಬಂದಿತ್ತು. 2018 ರ ಸಮಯದಲ್ಲಿ ವಿಜಯ್ ಅವರು ವಿದೇಶಿ ಯುವತಿ ಜೊತೆ ಇರುವ ಫೋಟೋಗಳು ಸಖತ್ ವೈರಲ್ ಆಗಿದ್ದವು. ಇದಾದ ನಂತರ ಗೀತಾ ಗೋವಿಂದಂ ಚಿತ್ರದ ಸಮಯದಲ್ಲಿ ರಶ್ಮಿಕಾ ಮಂದಣ್ಣ ಅವರ ಜೊತೆ ವಿಜಯ್ ಹೆಸರು ಕೇಳಿಬಂದಿತ್ತು.

ತೆಲುಗಿನ ಸೀರಿಯಲ್ ನಿರ್ದೇಶಕ ದೇವರಕೊಂಡ ಗೋವರ್ಧನ್ ರಾವ್ ಅವರ ಮಗನಾದ ವಿಜಯ್ ದೇವರಕೊಂಡ, 2011 ರಲ್ಲಿ ತೆರೆಕಂಡ ನುವ್ವಿಲಾ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದಾದ ನಂತರ 2015ರಲ್ಲಿ ತೆರೆಕಂಡ ಅರ್ಜುನ್ ರೆಡ್ಡಿ ಸಿನಿಮಾ ಬ್ಲಾಕ್ ಬಾಸ್ಟರ್ ಹಿಟ್ ಆಗಿ ವಿಜಯ್ ಅವರಿಗೆ ಹೊಸ ಇಮೇಜ್ ತಂದು ಕೊಟ್ಟಿತ್ತು.

Comments are closed.