ಮನೋರಂಜನೆ

ರಣ್‍ಬೀರ್ ಕಪೂರ್ – ಆಲಿಯಾ ಭಟ್ ಡಿ. 18ರಂದು ದಾಂಪತ್ಯ ಜೀವನಕ್ಕೆ ಪ್ರವೇಶ

Pinterest LinkedIn Tumblr


ಮುಂಬೈ: ಬಾಲಿವುಡ್ ಜೋಡಿ ರಣ್‍ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಡಿ. 18ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

2020 ಡಿ. 18ರಂದು ಆಲಿಯಾ ಹಾಗೂ ರಣ್‍ಬೀರ್ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಮದುವೆಯ ಎಲ್ಲ ಶಾಸ್ತ್ರಗಳ ಇಬ್ಬರ ಮನೆಯಲ್ಲಿಯೇ ಮಾಡಲಾಗುತ್ತೆ. ಮದುವೆ ನಂತರ ಫೈವ್ ಸ್ಟಾರ್ ಹೋಟೆಲಿನಲ್ಲಿ ಪಾರ್ಟಿ ಆಯೋಜಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ರಣ್‍ಬೀರ್ ಹಾಗೂ ಆಲಿಯಾ 2 ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ‘ಬ್ರಹ್ಮಾಸ್ತ್ರ’ ಚಿತ್ರ ಡಿ. 4ರಂದು ಬಿಡುಗಡೆ ಆಗಲಿದೆ. ಈ ಚಿತ್ರ ಬಿಡುಗಡೆಯಾದ ನಂತರ ಇಬ್ಬರು ಮದುವೆಯಾಗಲಿದ್ದಾರೆ.

ರಣ್‍ಬೀರ್ ತಂದೆ, ಹಿರಿಯ ರಿಷಿ ಕಪೂರ್ ಅವರು ತಮ್ಮ ಮಗನ ಮದುವೆ ಬೇಗ ಮಾಡುವುದಾಗಿ ನಿರ್ಧರಿಸಿದ್ದಾರೆ. ಕಳೆದ ವರ್ಷ ರಿಷಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆಗ ಅವರು ನ್ಯೂಯಾರ್ಕ್ ಆಸ್ಪತ್ರೆಯೊಂದರಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಎರಡು ದಿನಗಳ ಹಿಂದೆ ರಿಷಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಕುಟುಂಬಸ್ಥರು ರಣ್‍ಬೀರ್ ಅವರ ಮದುವೆ ದಿನವನ್ನು ನಿಗದಿ ಪಡಿಸಿದ್ದಾರೆ.

ರಣ್‍ಬೀರ್ ಹಾಗೂ ಆಲಿಯಾ ‘ಬ್ರಹ್ಮಸ್ತ್ರ’ ಚಿತ್ರದಲ್ಲಿ ನಟಿಸಲು ಶುರು ಮಾಡಿದಾಗಿನಿಂದ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅಲ್ಲದೆ ಈ ಹಿಂದೆ ರಣ್‍ಬೀರ್ ಹಾಗೂ ಆಲಿಯಾರ ನಕಲಿ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು. ಈ ಆಮಂತ್ರಣ ಪತ್ರಿಕೆಯಲ್ಲಿ 2020, ಜನವರಿ 22ರಂದು ಜೋಧಪುರ್‍ನ ಉಮೇದ್ ಭವನದಲ್ಲಿ ರಣ್‍ಬೀರ್ ಹಾಗೂ ಆಲಿಯಾ ಮದುವೆಯಾಗಲಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.

ಇದಕ್ಕೂ ಮೊದಲು ರಣ್‍ಬೀರ್ ಹಾಗೂ ಆಲಿಯಾ ಮದುವೆ ಆಗಿರುವ ಫೋಟೋವೊಂದು ವೈರಲ್ ಆಗಿತ್ತು. ಮದುವೆ ಜಾಹೀರಾತಿನಲ್ಲಿ ನಟಿಸಿದ ಆಲಿಯಾ ಇರುವ ಫೋಟೋವನ್ನು ರಣ್‍ಬೀರ್ ಅವರನ್ನು ಫೋಟೋಶಾಪ್ ಮಾಡಿ ವೈರಲ್ ಮಾಡಲಾಗಿತ್ತು. ಸದ್ಯ ಬಿ-ಟೌನ್‍ನಲ್ಲಿ ಹರಿದಾಡುತ್ತಿರುವ ಈ ಸುದ್ದಿಗೆ ಕುಟುಂಬಸ್ಥರು ಮದುವೆ ದಿನಾಂಕವನ್ನು ನಿಗದಿ ಮಾಡುವ ಮೂಲಕ ಗಾಸಿಪ್‍ಗಳಿಗೆ ತೆರೆ ಎಳೆದಿದ್ದಾರೆ.

Comments are closed.