ಕರ್ನಾಟಕ

ಗೆಳೆಯನ ಎದುರೇ, ಹಗ್ & ಕಿಸ್

Pinterest LinkedIn Tumblr


ಶಿವಮೊಗ್ಗ: ಸಾಮಾನ್ಯವಾಗಿ ಕ್ರೀಡಾಂಗಣದಲ್ಲಿ ಆಟಗಾರರು ತರಬೇತಿಗೆ ಬರುತ್ತಾರೆ. ಆದರೆ ನಗರದ ನೆಹರು ಕ್ರೀಡಾಂಗಣದಲ್ಲಿ ಪ್ರೇಮಿಗಳು ಬಂದು ಹಾಡಹಾಗಲೇ ಕಿಸ್ ಮಾಡಿ, ತಬ್ಬಿಕೊಂಡು ರೊಮ್ಯಾನ್ಸ್ ಮಾಡಿರುವ ಘಟನೆ ನಡೆದಿದೆ.

ಕ್ರೀಡಾಂಗಣದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಪ್ರಾಧಿಕಾರದ ಕಚೇರಿಯ ಅಣತಿ ದೂರದಲ್ಲಿ ಯುವ ಜೋಡಿಯೊಂದು ರೊಮ್ಯಾಂಟಿಕ್ ಮೂಡ್‍ನಲ್ಲಿ ಹಾಡಹಗಲೇ, ಸಾರ್ವಜನಿಕ ಸ್ಥಳದಲ್ಲಿ ಅಪ್ಪಿಕೊಂಡು ಮುತ್ತು ಕೊಡುತ್ತಾ ಮೈ ಮರೆತಿದೆ. ಕಾಲೇಜಿಗೆ ಚಕ್ಕರ್ ಹಾಕಿ ಸ್ಟೇಡಿಯಂನಲ್ಲಿ ಹಾಜರಾಗಿ, ಸ್ನೇಹಿತನ ಎದುರೇ ಹಗ್ ಆ್ಯಂಡ್ ಕಿಸ್ ಕೊಡುತ್ತಾ, ಯಾರ ಭಯವೂ ಇಲ್ಲದೇ ಮೈಮರೆತಿದ್ದಾರೆ.

ಇದು ಇಲ್ಲಿನ ಕ್ರೀಡಾಂಗಣದಲ್ಲಿ ಸೂಕ್ತ ಸೆಕ್ಯುರಿಟಿ ವ್ಯವಸ್ಥೆ ಇಲ್ಲದೇ ಇರುವುದು ತೋರ್ಪಡಿಸುತ್ತದೆ. ಸ್ಟೇಡಿಯಂನಲ್ಲಿ ಸಾರ್ವಜನಿಕರು ವಾಕಿಂಗ್ ಮಾಡುವ ಜಾಗದಲ್ಲಿ, ಅದರಲ್ಲೂ ಕಾಲೇಜು ಸಮವಸ್ತ್ರದಲ್ಲಿಯೇ ರೊಮ್ಯಾನ್ಸ್ ಮಾಡಿದ ಪ್ರೇಮಿಗಳ ವರ್ತನೆಯನ್ನು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿದ್ದಾರೆ.

ಅಲ್ಲದೇ ಕ್ರೀಡಾಪಟುಗಳು ದೇವಾಲಯವೆಂದು ಪೂಜಿಸುವ ಕ್ರೀಡಾಂಗಣದಲ್ಲಿ ಈ ರೀತಿ ಪ್ರೇಮಿಗಳ ಅಸಭ್ಯ ವರ್ತನೆಗೆ ಇಲ್ಲಿನ ವಾಯುವಿಹಾರಿಗಳು ಮತ್ತು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Comments are closed.