ಮನೋರಂಜನೆ

ಹಾಲಿವುಡ್‌ ನಟ ರಾಬರ್ಟ್‌ ವಿಶ್ವದ ಸುಂದರ ವ್ಯಕ್ತಿ

Pinterest LinkedIn Tumblr


ನವದೆಹಲಿ: ಹಾಲಿವುಡ್‌ ನಟ ರಾಬರ್ಟ್‌ ಪೆಟ್ಟಿನ್ಸನ್‌ ವಿಶ್ವದಲ್ಲೇ ಅತಿ ಸ್ಫುರದ್ರೂಪಿ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. “ಗೋಲ್ಡನ್‌ ರೇಷಿಯೋ’ ಸಮೀಕರಣ ಪ್ರಕಾರ ವಿಶ್ವದ ಅತಿ ಸುಂದರ ವ್ಯಕ್ತಿಯಾಗಿ ರಾಬರ್ಟ್‌ ಹೊರ ಹೊರಹೊಮ್ಮಿದ್ದಾರೆ.

ಪ್ರಾಚೀನ್‌ ಗ್ರೀಸ್‌ನಲ್ಲಿ ಸೌಂದರ್ಯವನ್ನು ಅಳೆಯಲು ಬಳಸುತ್ತಿದ್ದ ಬ್ಯೂಟಿ ಪೈ ಗೋಲ್ಡನ್‌ ರೇಷಿಯೋ ಮಾನದಂಡದ ಪ್ರಕಾರ, ಶೇ.92.15 ಅಂಕ ಪಡೆದಿರುವ 33 ವರ್ಷದ ರಾಬರ್ಟ್‌ ವಿಶ್ವದ ನಂ.1 ಚೆಲುವ ಎಂಬ ಖ್ಯಾತಿ ಪಡೆದಿದ್ದಾರೆ. ಹಾರ್ಲೆ ಸ್ಟ್ರೀಟ್‌ ಕಾಸ್ಮೆಡಿಕ್‌ನ ಗಣಕೀಕೃತ ಮ್ಯಾಪಿಂಗ್‌ ಮೂಲಕ ಹಲವಾರು ಜಾಗತಿಕ ತಾರಾ ವ್ಯಕ್ತಿಗಳೊಂದಿಗೆ ಹೋಲಿಕೆ ಮಾಡಿದಾದ ರಾಬರ್ಟ್‌ ಅವರ ಕಣ್ಣು, ತುಟಿ, ಮೂಗು, ಗಲ್ಲ, ದವಡೆ “ಪಫೆìಕ್ಟ್ ಮ್ಯಾಚಿಂಗ್‌’ ಹೊಂದಿದೆ. ದೈಹಿಕ ಸದೃಢತೆ, ಮುಖದ ಅಂಗಾಂಗಗಳ ಆಧಾರದ ಮೇರೆಗೆ ಅವರು ವಿನ್ನರ್‌ ಆಗಿದ್ದಾರೆ ಎಂದು ಸಂಸ್ಥೆಯ ಕಾಸ್ಮೆಟಿಕ್‌ ಸರ್ಜನ್‌ ಡಾ| ಜೂಲಿಯನ್‌ ಡಿ ಸಿಲ್ವಾ ತಿಳಿಸಿದ್ದಾರೆ.

ಮಾನದಂಡದ ಪ್ರಕಾರ ರಾಬರ್ಟ್‌ ಅವರ ತುಟಿ, ಹಣೆ, ಮೂಗು, ಕಣ್ಣಿಗೆ ಅತಿ ಹೆಚ್ಚು ಅಂಕ ಲಭಿಸಿದೆ. ಇನ್ನು ನಟ ಹೆನ್ರಿ ಕಾವಿಲ್‌ (36 ) ಶೇ. 91.64 ಅಂಕದೊಂದಿಗೆ ದ್ವಿತೀಯ ಸ್ಥಾನ ಹಾಗೂ ಬ್ರಾಡ್ಲೆà ಕೂಪರ್‌ (45) ಶೇ. 91.08 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. “ಒನ್ಸ್‌ ಅಪಾನ್‌ ಎ ಟೈಮ್‌’ ಖ್ಯಾತಿಯ ನಟ ಬ್ರಾಡ್‌ ಪಿಟ್‌(56) ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

Comments are closed.