ಮನೋರಂಜನೆ

ಸಾಹಸ ಪ್ರದರ್ಶನಕ್ಕಿಳಿದ ಸೂಪರ್ ಸ್ಟಾರ್ ರಜನಿಕಾಂತ್ ! ಏನಿದು ..?

Pinterest LinkedIn Tumblr

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಹೆಸರು. ನಾಲ್ಕು ದಶಕಗಳ ಹಿಂದೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಯಶಸ್ಸು ಕಂಡವರು. ಇದೀಗ ಸಾಹಸ ಪ್ರದರ್ಶನ ಮೂಲಕ ಕಿರುತೆರೆಗೆ ಸಹ ಕಾಲಿಡುತ್ತಿದ್ದಾರೆ. ಈ ಬಗ್ಗೆ ಸ್ವತಃ ರಜನಿಕಾಂತ್ ಅವರೇ ಮಾತನಾಡಿದ್ದಾರೆ.

69 ವರ್ಷದ ನಟ ರಜನಿಕಾಂತ್ ಕಿರುತೆರೆಗೆ ಬಂದಿದ್ದು ಖ್ಯಾತ ಅಂತಾರಾಷ್ಟ್ರೀಯ ವನ್ಯಜೀವಿ ಸಾಕ್ಷ್ಯಚಿತ್ರ ಸಾಹಸಿಗ ಬೇರ್ ಗ್ರಿಲ್ಸ್ ಅವರ ಮ್ಯಾನ್ ವರ್ಸಸ್ ವೈಲ್ಡ್ ಸಾಕ್ಷ್ಯಚಿತ್ರ ಮೂಲಕ.ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಶೋಗಾಗಿ ಬೇರ್ ಗ್ರಿಲ್ಸ್ ಜೊತೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ನಂತರ ಬೇರ್ ಗ್ರಿಲ್ಸ್ ಶೋನಲ್ಲಿ ಭಾಗಿಯಾಗುತ್ತಿರುವ ಎರಡನೇ ಭಾರತೀಯ ರಜನಿಕಾಂತ್ ಅವರು. ಇದರಲ್ಲಿ ವನ್ಯಜೀವಿಗಳು, ಅವುಗಳ ಸಂರಕ್ಷಣೆ, ನೀರಿನ ಮಹತ್ವವನ್ನು ಸಾರಲಾಗಿದೆಯಂತೆ.

ಶೂಟಿಂಗ್ ನಲ್ಲಿ ಭಾಗಿಯಾಗಿದ್ದು ನನಗೆ ನಿಜ ಜೀವನದಲ್ಲಿ ಮನರಂಜನೆ ಮತ್ತು ಉತ್ಸಾಹ ನೀಡಿದೆ ಎನ್ನುತ್ತಾರೆ ರಜನಿಕಾಂತ್. ಇದೊಂದು ಖಂಡಿತವಾಗಿಯೂ ಭಿನ್ನ ಶೋ. ಡಿಸ್ಕವರಿ ಚಾನೆಲ್ ನವರು ನನಗೆ ಈ ಅವಕಾಶ ನೀಡಲು ಮುಂದೆ ಬಂದಾಗ ಸಂತೋಷವಾಗಿ ಸಾಹಸ ಪ್ರದರ್ಶನ ಶೋ ಮೂಲಕ ಕಿರುತೆರೆ ಪ್ರವೇಶಿಸಲು ಒಪ್ಪಿಕೊಂಡೆ ಎನ್ನುತ್ತಾರೆ ರಜನಿಕಾಂತ್.

Comments are closed.