ಮನೋರಂಜನೆ

ಬಿಗ್ ಬಾಸ್ ಮನೆಯಲ್ಲಿ ಮಿಡ್‍ನೈಟ್‍ನಲ್ಲಿ ಎಲಿಮಿನೇಟ್ ಆದ ಹರೀಶ್ ರಾಜ್

Pinterest LinkedIn Tumblr

ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಸ್ಪರ್ಧಿ ಹರೀಶ್ ರಾಜ್ ಅವರು ಮಿಡ್‍ನೈಟ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

ಮಂಗಳವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆಲ್ಲಾ ಗಾರ್ಡನ್ ಏರಿಯಾಗೆ ಕರೆಸಿ ಕ್ರೇನ್‍ನಲ್ಲಿ ನಿಲ್ಲಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ಹೇಳಿದ್ದರು. ಈ ವೇಳೆ ಕೊಟ್ಟ ಬೋರ್ಡಿಂಗ್ ಪಾಸ್ ಸ್ವೈಪ್ ಮಾಡಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಸ್ವೈಪ್ ಮಾಡಿದಾಗ ಹಸಿರು ದೀಪ ಬೆಳೆಗಿದರೆ ಆ ಸ್ಪರ್ಧಿ ಸೇಫ್ ಆಗಲಿದ್ದು, ಕೆಂಪು ದೀಪ ಬೆಳಗಿದರೆ ಆ ಸ್ಪರ್ಧಿ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ.

ಮೊದಲು ಶೈನ್ ಶೆಟ್ಟಿ ಸ್ವೈಪ್ ಮಾಡಿದ್ದು, ಅವರು ಸೇಫ್ ಆಗಿದ್ದಾರೆ. ಬಳಿಕ ಕುರಿ ಪ್ರತಾಪ್, ಭೂಮಿ ಶೆಟ್ಟಿ ಸ್ವೈಪ್ ಮಾಡಿ ತಮ್ಮ ಬಿಗ್ ಬಾಸ್ ಜರ್ನಿಯನ್ನು ಮುಂದುವರಿಸಿದ್ದಾರೆ. ನಂತರ ಹರೀಶ್ ರಾಜ್ ಅವರು ಬೋರ್ಡಿಂಗ್ ಪಾಸ್ ಸ್ವೈಪ್ ಮಾಡಿದ್ದಾರೆ. ಈ ವೇಳೆ ಕೆಂಪು ದೀಪ ಬೆಳಗಿದ್ದು, ಹರೀಶ್ ಅವರು ಎಲಿಮಿನೇಟ್ ಆಗಿದ್ದಾರೆ. ಹರೀಶ್ ಅವರನ್ನು ಕ್ರೇನ್ ಮೂಲಕವೇ ಮನೆಯಿಂದ ಹೊರ ಕರೆದುಕೊಂಡು ಹೋಗಲಾಯಿತು.

ಹರೀಶ್ ಮಧ್ಯರಾತ್ರಿ ಎಲಿಮಿನೇಟ್ ಆದ ಕಾರಣ ಅವರು ಸುದೀಪ್ ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿಲ್ಲ. ಇನ್ನು ಹರೀಶ್ ಮನೆಯಿಂದ ಹೊರ ಹೋಗುತ್ತಿದ್ದಂತೆ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ಈ ವಾರ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ವಾಸುಕಿ, ಶೈನ್, ಭೂಮಿ, ದೀಪಿಕಾ ಹಾಗೂ ಕುರಿ ಪ್ರತಾಪ್ ಫೈನಲಿಸ್ಟ್ ಆಗಿದ್ದಾರೆ.

Comments are closed.