ಮನೋರಂಜನೆ

ಈ ನಟಿಯ ಹೇರ್‌ಸ್ಟೈಲ್‌ ಖರ್ಚು 2.5 ಲಕ್ಷ ರೂ.!

Pinterest LinkedIn Tumblr


ಬೃಹತ್‌ ಸೆಟ್‌ ಹಾಕಲು ಚಿತ್ರತಂಡಗಳು ಲಕ್ಷಾಂತರ ರೂಪಾಯಿ ವ್ಯಯಿಸುತ್ತವೆ. ಆದರೆ ನಟಿಯೊಬ್ಬರ ಹೇರ್‌ ಸ್ಟೈಲ್‌ಗೆ ಎರಡೂವರೆ ಲಕ್ಷ ರೂ. ಖರ್ಚು ಮಾಡುವುದು ಎಂದರೆ ಅದು ದುಂದು ವೆಚ್ಚವೇ ಸರಿ. ಬಾಲಿವುಡ್‌ನ ‘ಸ್ಟ್ರೀಟ್‌ ಡಾನ್ಸರ್‌ 3D’ ಸಿನಿಮಾ ತಂಡ ಅಂತಹ ಒಂದು ಕೆಲಸ ಮಾಡಿದೆ.

ದುಬೈನಲ್ಲಿ ಮಾಡಿಸಲಾದ ಹೇರ್‌ ಸ್ಟೈಲ್‌
ಅಚ್ಚರಿ ಎನಿಸಿದರೂ ಈ ವಿಚಾರ ನಿಜ. ಇದರ ಬಗ್ಗೆ ಸ್ವತಃ ನಟಿ ನೋರಾ ಫತೇಹಿ ಬಾಯಿ ಬಿಟ್ಟಿದ್ದಾರೆ. ‘ಸ್ಟ್ರೀಟ್‌ ಡಾನ್ಸರ್‌ 3D’ ಚಿತ್ರದಲ್ಲಿ ಅವರೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಪಾತ್ರಕ್ಕಾಗಿ ಅವರಿಗೆ ಪೋನಿಟೇಲ್‌ ರೀತಿಯ ಕೇಶ ವಿನ್ಯಾಸ ಮಾಡಿಸಲಾಗಿದೆ. ಅದನ್ನು ದುಬೈನಲ್ಲಿ ಮಾಡಿಸಲಾಗಿದ್ದು, ಅದಕ್ಕಾಗಿ ಬರೋಬ್ಬರಿ ಎರಡೂವರೆ ಲಕ್ಷ ರೂಪಾಯಿ ವ್ಯಯಿಸಲಾಗಿದೆಯಂತೆ. ಬೇರೆ ಸಿನಿಮಾಗಳಲ್ಲಾಗಿದ್ದರೆ ಇದೇ ಮೊತ್ತದಲ್ಲಿ ದೊಡ್ಡ ಸೆಟ್‌ ಹಾಕಬಹುದಿತ್ತು!

ಯಾಕೆ ಇಷ್ಟು ದುಬಾರಿ?
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ನೋರಾ, 2.5 ಲಕ್ಷ ರೂ. ಹೇಗೆ ಖರ್ಚಾಯಿತು ಎಂಬುದನ್ನೂ ವಿವರಿಸಿದ್ದಾರೆ. ‘ಸಿನಿಮಾದಲ್ಲಿ ನನ್ನದು ನಾಯಕಿ ಶ್ರದ್ಧಾ ಕಪೂರ್‌ಗೆ ಎದುರಾಗಿ ನಿಲ್ಲುವಂತಹ ಪಾತ್ರ. ಹಾಗಾಗಿ ಆ ಪಾತ್ರಕ್ಕೆ ಪೋನಿ ಟೇಲ್‌ ಹೇರ್‌ ಸ್ಟೈಲ್‌ ಸೂಕ್ತ ಎಂದು ನಮಗೆ ಅನಿಸಿತು. ಅದಕ್ಕಾಗಿ ಅರ್ಧ ಕೆಜಿಯಷ್ಟು ನೈಜ ಕೂದಲು ಬಳಸಿದ್ದೇವೆ. ಅದನ್ನು ಧರಿಸಿ ಡಾನ್ಸ್‌ ಮಾಡುವುದು ಕಷ್ಟವಾಗಿತ್ತಾದರೂ ಆ ಲುಕ್‌ ಚೆನ್ನಾಗಿ ಕಾಣುತ್ತದೆ ಎಂಬ ಕಾರಣಕ್ಕೆ ಇಡೀ ಸಿನಿಮಾದಲ್ಲಿ ಬಳಸಿದ್ದೇವೆ’ ಎಂದಿದ್ದಾರೆ ನೋರಾ ಫತೇಹಿ.

‘ಗರ್ಮಿ’ ಹಾಡಿನಲ್ಲಿ ಹಾಟ್‌ ನೋರಾ!
ಇದೇ ಸಿನಿಮಾದಲ್ಲಿನ ‘ಗರ್ಮಿ..’ ಹಾಡಿಗೆ ನೋರಾ ಫತೇಹಿ ಸಖತ್‌ ಹಾಟ್‌ ಆಗಿ ಹೆಜ್ಜೆ ಹಾಕಿದ್ದಾರೆ. ಅದನ್ನು ಕಂಡ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದುವರೆಗೂ 100 ಮಿಲಿಯನ್‌ ಬಾರಿ ವೀಕ್ಷಣೆ ಕಂಡಿರುವುದೇ ಈ ಮಾತಿಗೆ ಸಾಕ್ಷಿ. ‘ಸ್ಟ್ರೀಟ್‌ ಡಾನ್ಸರ್‌ 3D’ ಚಿತ್ರಕ್ಕೆ ರೆಮೋ ಡಿಸೋಜಾ ನಿರ್ದೇಶನ ಮಾಡಿದ್ದು, ವರುಣ್‌ ಧವನ್‌, ಶ್ರದ್ಧಾ ಕಪೂರ್‌, ಪ್ರಭುದೇವ ಮತ್ತು ನೋರಾ ಫತೇಹಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಜ.24ರಂದು ಈ ಸಿನಿಮಾ ಬಿಡುಗಡೆ.

Comments are closed.