ಅಂತರಾಷ್ಟ್ರೀಯ

ಹಾಲಿವುಡ್ ಮಾಜಿ ನಿರ್ಮಾಪಕ ಹಾರ್ವೇ ವಿನ್ ಸ್ಟೈನ್ ನಿಂದ ಪೈಶಾಚಿಕ ಅತ್ಯಾಚಾರ: ಹಾಲಿವುಡ್ ನಟಿ ಅನ್ನಾಬೆಲ್ಲಾ ಸಿಯೋರಾ ಹಾರ್ವೆ

Pinterest LinkedIn Tumblr


ನ್ಯೂಯಾರ್ಕ್: ಮಿರಾಮ್ಯಾಕ್ಸ್ ಎಂಟರ್ ಟೈನ್ಮೆಂಟ್ ಕಂಪನಿಯ ಸಹ ಸಂಸ್ಥಾಪಕ, ಹಾಲಿವುಡ್ ಮಾಜಿ ನಿರ್ಮಾಪಕ ಹಾರ್ವೇ ವಿನ್ ಸ್ಟೈನ್ ನನ್ನ ಅಪಾರ್ಟ್ ಮೆಂಟ್ ನೊಳಗೆ ನುಗ್ಗಿ ಅತ್ಯಾಚಾರ ಎಸಗಿರುವುದಾಗಿ ಹಾಲಿವುಡ್ ನಟಿ ಅನ್ನಾಬೆಲ್ಲಾ ಸಿಯೋರಾ ಹಾರ್ವೆ ಪ್ರಕರಣದ ವಿಚಾರಣೆಯಲ್ಲಿ ಗುರುವಾರ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿರುವುದಾಗಿ ವರದಿ ತಿಳಿಸಿದೆ.

ಸಿಯೋರಾ ದ ಸೋಪ್ರಾನೋಸ್ ಬಾಲಿವುಡ್ ಸಿನಿಮಾ ಮೂಲಕ ಹೆಚ್ಚು ಜನಪ್ರಿಯರಾಗಿದ್ದರು. ಈ ಅತ್ಯಾಚಾರ ಘಟನೆ ನಡೆದಿದ್ದು ಸುಮಾರು 25 ವರ್ಷಗಳ ಹಿಂದೆ ಎಂದು ವರದಿ ವಿವರಿಸಿದೆ.

ವಿನ್ ಸ್ಟೈನ್ಸ್ ಪ್ರಕರಣದ ವಿಚಾರಣೆಯಲ್ಲಿ ಭಾವುಕರಾಗಿ ಅಂದಿನ ಘಟನೆಯನ್ನು ನ್ಯಾಯಾಧೀಶರ ಮುಂದೆ ವಿವರಿಸಿದ್ದರು. 1990ರಲ್ಲಿ ರಾತ್ರಿ ಶೂಟಿಂಗ್ ಮುಗಿಸಿ ನ್ಯೂಯಾರ್ಕ್ ಅಪಾರ್ಟ್ ಮೆಂಟ್ ನಲ್ಲಿ ಇದ್ದಾಗ. ಡೋರ್ ಬೆಲ್ ಆಗಿತ್ತು..ಬಾಗಿಲು ತೆರೆದಾಗ ವಿನ್ ಸ್ಟೈನ್ ಒಳಬಂದಿದ್ದರು. ನಾನಾಗ ರಾತ್ರಿ ಧಿರಿಸು(ನೈಟ್ ಗೌನ್) ಧರಿಸಿದ್ದೆ. ತಕ್ಷಣವೇ ನನ್ನ ಹಿಡಿದುಕೊಂಡ ವಿನ್ ಸ್ಟೈನ್ ಬೆಡ್ ರೂಂ ಒಳಕ್ಕೆ ಕರೆದೊಯ್ದಿದ್ದರು ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.

ಈತನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದೆ. ನಾನು ವಿನ್ ಸ್ಟೈನ್ ಮುಖಕ್ಕೆ ಹೊಡೆದಿದ್ದೆ. ಆದರೂ ನನ್ನ ಬಿಡಲೇ ಇಲ್ಲ ಎಂದು ನ್ಯೂಯಾರ್ಕ್ ಜ್ಯೂರಿ ಮುಂದೆ ವಿಚಾರಣೆಯಲ್ಲಿ ಸಾಕ್ಷ್ಯ ಹೇಳಿದ್ದಾರೆ. ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲಿ ಬೆಡ್ ಮೇಲೆ ನನ್ನ ಕೈಗಳನ್ನು ಒತ್ತಿ ಹಿಡಿದಿದ್ದರು. ನಂತರ ನನ್ನ ನೈಟ್ ಗೌನ್ ಎತ್ತಿ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾರೆ.

ನ್ಯೂಯಾರ್ಕ್ ಕೋರ್ಟ್ ನಲ್ಲಿ ಸಿಯೋರಾ ವಿನ್ ಸ್ಟೈನ್ ವಿರುದ್ಧ ಆರೋಪಿಸುತ್ತಿದ್ದಾಗ ಆಕೆಯ ಮುಖ ನೋಡದೆ ನಿಂತಿರುವುದಾಗಿ ವರದಿ ತಿಳಿಸಿದೆ. ತನ್ನ ಮೇಲಿನ ಎಲ್ಲಾ ಆರೋಪ ಆಧಾರ ರಹಿತ ಎಂದು ವಾದಿಸಿರುವುದಾಗಿ ವರದಿ ಹೇಳಿದೆ.

ಒಂದು ವೇಳೆ ವಿನ್ ಸ್ಟೈನ್ ಮೇಲಿನ ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ. ಈ ಘಟನೆ ಕೆಲವು ವರ್ಷಗಳ ಹಿಂದೆ ನಡೆದಿರುವುದಾಗಿದೆ. ಆದರೆ ನ್ಯೂಯಾರ್ಕ್ ಕಾನೂನು ಪ್ರಕಾರ ವಿಚಾರಣೆ ಮುಂದುವರಿಸಿ ಶಿಕ್ಷೆ ನೀಡಬೇಕೆಂದು ಸಿಯೋರಾ ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ.

Comments are closed.