ಮನೋರಂಜನೆ

ರಚಿತಾ ರಾಮ್ ಜೊತೆ ಮದುವೆ ಊಹಾಪೋಹ: ಶೀಘ್ರದಲ್ಲೇ ವಿವಾಹ ಕುರಿತು ತಿಳಿಸುತ್ತೇನೆ: ನಿಖಿಲ್ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಬಗ್ಗೆ ಗಾಸಿಪ್ ಹರಿದಾಡುತ್ತಿದೆ. ಈಗ ಸ್ವತಃ ನಿಖಿಲ್ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.

ಬುಧವಾರ ನಿಖಿಲ್ ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು ಅವರು, ನನ್ನ ಮದುವೆ ಬಗ್ಗೆ ಶೀಘ್ರದಲ್ಲೇ ಅನೌನ್ಸ್ ಮಾಡುತ್ತೇನೆ. ಅಲ್ಲಿಯವರೆಗೂ ಅತುರ ಬೇಡ. ನನ್ನ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಆ ಸುದ್ದಿಗಳೆಲ್ಲ ಸುಳ್ಳು. ಕಳೆದ ಒಂದು ವರ್ಷದಿಂದ ನಮ್ಮ ಮನೆಯಲ್ಲಿ ನನಗೆ ಹುಡುಗಿಯನ್ನು ಹುಡುಕುತ್ತಿದ್ದು, ಸದ್ಯದಲ್ಲೇ ಫೈನಲ್ ಆಗಲಿದೆ. ಆಕೆ ಯಾರು ಎನ್ನುವುದನ್ನು ಸ್ವತಃ ನಾನೇ ತಿಳಿಸುತ್ತೇನೆ ಎಂದು ಗಾಸಿಪ್‍ಗಳಿಗೆಲ್ಲ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಮದ್ವೆ ಊಹಾಪೋಹದ ಬಗ್ಗೆ ಮೌನ ಮುರಿದ ಡಿಂಪಲ್ ಕ್ವೀನ್

ನಾನು ಮದುವೆಯಾಗುವ ಹುಡುಗಿ ಸಿನಿಮಾರಂಗದಲ್ಲಿ ಯಾವುದೇ ಲಿಂಕ್ ಇಲ್ಲ. ಆಕೆಗೆ ಚಿತ್ರರಂಗದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಆಕೆ ಸರಳವಾದ ಕನ್ನಡದ ಹುಡುಗಿಯಾಗಿದ್ದು, ನಮ್ಮ ಸಂಸ್ಕೃತಿ ಬಗ್ಗೆ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದಾಳೆ. ಅಪ್ಪ-ಅಮ್ಮ ನನ್ನ ಮದುವೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರವೇ ಅಂತಿಮ ಎಂದು ನಿಖಿಲ್ ತಿಳಿಸಿದ್ದಾರೆ.

ವೈಯಕ್ತಿಕ ವಿಚಾರದ ಹೊರತಾಗಿ ನಿಖಿಲ್ ತಮ್ಮ ಚಿತ್ರಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ನಾನು ಎರಡು ಚಿತ್ರಗಳಲ್ಲಿ ನಟಿಸಲಿದ್ದು, ಈ ವರ್ಷ ಆ ಎರಡು ಚಿತ್ರಗಳು ಬಿಡುಗಡೆಯಾಗಲಿದೆ ಎಂದು ನಿಖಿಲ್ ಹೇಳಿದ್ದಾರೆ. ನಿಖಿಲ್ ಬುಧವಾರ ತಮ್ಮ ಹುಟ್ಟುಹಬ್ಬವನ್ನು ತಂದೆಯ ಆಶೀರ್ವಾದ ಪಡೆಯುವ ಮೂಲಕ ಬಹಳ ಸರಳವಾಗಿ ಆಚರಿಸಿದ್ದಾರೆ.

Comments are closed.