ಮನೋರಂಜನೆ

‘ಬಾಲ್ಯದಲ್ಲೇ ನನ್ನ ಮೇಲೆ ಅತ್ಯಾಚಾರ ನಡೆದಿತ್ತು’: ನಟ ರಾಹುಲ್ ರಾಮಕೃಷ್ಣ

Pinterest LinkedIn Tumblr


ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ, ಭರತ್ ಅನೇ ನೇನು ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ನಟ ರಾಹುಲ್ ರಾಮಕೃಷ್ಣ ಅವರು ಬಾಲ್ಯದಲ್ಲೇ ನನ್ನ ಮೇಲೆ ರೇಪ್ ಆಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

ಪ್ರಸ್ತುತ ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗ್ಡೆ ನಟನೆಯ ಅಲಾ ವೈಕುಂಠಪುರಂಲೊ ಚಿತ್ರದ ಬಿಡುಗಡೆಯಾಗಿದ್ದು ಈ ಚಿತ್ರದಲ್ಲೂ ರಾಹುಲ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು.

ರಾಹುಲ್ ಅವರು ಟ್ವೀಟ್ ಮಾಡಿ ಬಾಲ್ಯದಲ್ಲೇ ನನ್ನ ಮೇಲೆ ರೇಪ್ ಆಗಿತ್ತು. ನನ್ನ ದುಃಖದ ಬಗ್ಗೆ ಇದನ್ನು ಬಿಟ್ಟು ಇನ್ನೇನು ಹೇಳುವುದೋ ತಿಳಿಯುತ್ತಿಲ್ಲ. ಏಕೆಂದರೆ ಇದು ನನ್ನ ಬಗ್ಗೆ ನನಗೆ ತಿಳಿದುಕೊಳ್ಳುವಂತೆ ಮಾಡಿತ್ತು ಎಂದು ಬರೆದುಕೊಂಡಿದ್ದಾರೆ.

ರಾಹುಲ್ ಟ್ವೀಟ್ ಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಟ್ವೀಟ್ ಮಾಡಿ, ಧೈರ್ಯವಾಗಿ ಇರೀ.. ನಿಮ್ಮ ಮುಂದಿನ ಸಿನಿಮಾ ಬದುಕಿಗೆ ಒಳ್ಳೆಯದಾಗಲಿ ಎಂದು ಟ್ವೀಟಿಸಿದ್ದಾರೆ.

Comments are closed.