ಮನೋರಂಜನೆ

ವೇದಿಕೆಯಲ್ಲೇ ನಟ ಶಿವರಾಜ್‌ಕುಮಾರ್ ಗಳಗಳನೆ ಕಣ್ಣೀರು ಹಾಕಿದ್ದೇಕೆ..?

Pinterest LinkedIn Tumblr


ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್​. ಅಣ್ಣಾವ್ರ ಹಾದಿಯಲ್ಲೇ ಸರಳ ಸಜ್ಜನಿಕೆಯಿಂದ ಅಭಿಮಾನಿಗಳ ಮನಗೆದ್ದಿರೋ ನಟ. ಚಿತ್ರರಂಗದ ಯಾವುದೇ ಕಾರ್ಯಕ್ರಮ ಆದ್ರು, ಆಮಂತ್ರಣ ಸಿಕ್ರೆ ಶಿವಣ್ಣ ಹಾಜರಾಗ್ತಾರೆ. ಭಾನುವಾರ ಚಾಮರಾಜಪೇಟೆಯ ಕಲಾವಿದರ ಸಂಘದ ವತಿಯಿಂದ 10ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವೇದಿಕೆಯಲ್ಲಿ ನಟ ಶಿವರಾಜ್ ಕುಮಾರ್ ಹಿರಿಯ ನಟ ಕೆ.ಎಸ್ ಅಶ್ವಥ್ ಅವರನ್ನ ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಕನ್ನಡ ಚಿತ್ರರಂಗದ ಮೇರು ಕಲಾವಿದ ಕೆ. ಎಸ್​ ಅಶ್ವಥ್. ಚಾಮಯ್ಯ ಮೇಷ್ಟ್ರು ಅಂತ್ಲೇ ಕನ್ನಡ ಚಿತ್ರರಂಗದಲ್ಲಿ ಅವ್ರು ಚಿರಪರಿಚಿತ. ನೂರಾರು ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನ ನಿರ್ವಹಿಸಿ ಗೆದ್ದವರು ಸಿ. ಎಸ್​ ಅಶ್ವಥ್. ಅವರು ನಮ್ಮನ್ನಗಲಿ 10 ವರ್ಷ ಕಳೆದಿದೆ. ಭಾನುವಾರ ಕೆ. ಎಸ್​ ಅಶ್ವಥ್​ ಪುಣ್ಯ ಸ್ಮರಣೆ ಸವಿ ನೆನಪು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಿರಿಯ ನಟರಾದ ಶ್ರೀನಾಥ್, ಅಶೋಕ್ ಮತ್ತು ಶಿವರಾಜ್ ಕುಮಾರ್ ಭಾಗವಹಿಸಿದ್ರು.

ಕಾರ್ಯಕ್ರಮದ ವೇದಿಕೆಯಲ್ಲಿ ಕೆ.ಎಸ್ ಅಶ್ವಥ್ ಮತ್ತು ಶಿವರಾಜ್ ಕುಮಾರ್ ನಟನೆಯ ಮೋಡದ ಮರೆಯಲ್ಲಿ ಚಿತ್ರದ ದೃಶ್ಯವನ್ನ ಪ್ರದರ್ಶಿಸಲಾಯ್ತು.ಇಬ್ಬರು ನಟಿಸಿರೋ ದೃಶ್ಯವನ್ನ ನೋಡುತ್ತಾ ಶಿವರಾಜ್ ಕುಮಾರ್ ಭಾವುಕರಾದ್ರು. ತಮ್ಮ ಫ್ಯಾಮಿಲಿ ಜೊತೆಗೆ ಕೆ.ಎಸ್ ಅಶ್ವಥ್ ಅವರ ಭಾಂದವ್ಯವನ್ನ ನೆನಪಿಸಿಕೊಂಡು ಕಣ್ಣೀರಾದ್ರು.

ಅಶ್ವಥ್​ ಅವರ ಜೊತೆಗಿನ ನೆನಪುಗಳನ್ನ ಮರೆಯೊದಕ್ಕೆ ಸಾಧ್ಯವಿಲ್ಲ. ಅವರ ನಟನೆ ನಮಗೆ ಸ್ಪೂರ್ತಿ, ಅವರು ಎಲ್ಲು ಹೋಗಿಲ್ಲ ನಮ್ಮಗಳ ಮಧ್ಯೆದಲ್ಲೆ ಇದ್ದಾರೆ ಅಂತ ಶಿವಣ್ಣ ಹೇಳಿದ್ರು.

ಶಿವರಾಜ್​ಕುಮಾರ್​ ನಟನೆಯ ಇನ್​ಸ್ಪೆಕ್ಟರ್​ ವಿಕ್ರಂ, ಗಂಧದ ಗುಡಿ ಭಾಗ-2, ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕೆ. ಎಸ್​ ಅಶ್ವಥ್​ ಬಣ್ಣ ಹಚ್ಚಿದ್ರು. ಅದ್ಭುತ ಅಭಿನಯ ಮತ್ತು ಸರಳ ಸಜ್ಜನ ವ್ಯಕ್ತಿತ್ವದಿಂದ ಕೆ. ಎಸ್​ ಅಶ್ವಥ್​ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.

Comments are closed.