ಮನೋರಂಜನೆ

‘ಭಜರಂಗಿ-2’ಸಿನಿಮಾ ಸೆಟ್ ನಲ್ಲಿ ಮತ್ತೆ ಬೆಂಕಿ ಅನಾಹುತ: ಸಂಪೂರ್ಣ ಸೆಟ್ ಸುಟ್ಟು ಭಸ್ಮ

Pinterest LinkedIn Tumblr


ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ‘ಭಜರಂಗಿ 2’ ಚಿತ್ರತಂಡಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಕಳೆದ ಐದು ದಿನಗಳಲ್ಲಿ ಎರಡನೇ ಬಾರಿಗೆ ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಂಪೂರ್ಣ ಸೆಟ್ ಸುಟ್ಟು ಭಸ್ಮವಾಗಿದೆ. ಘಟನೆ ಬಳಿಕ ಚಿತ್ರೀಕರಣ ಸ್ಥಗಿತವಾಗಿದೆ.

ಮೊನ್ನೆಯಷ್ಟೇ ಚಿತ್ರತಂಡದ ಸುಮಾರು ಅರವತ್ತು ಮಂದಿ ಇದ್ದ ಬಸ್ ಅಪಘಾತವಾಗಿದ್ದು ಇಂದು ನೆಲಮಂಗಲ ಬಳಿಯ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಶೂಟಿಂಗ್ ಸೆಟ್ ನಲ್ಲಿ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿದೆ.

ಸಿನಿಮಾ ಸೆಟ್ ನಲ್ಲಿ ಗ್ಯಾಸ್ ಓಪನ್ ಆಗಿದ್ದಾದರೆ ಬಹುದೊಡ್ಡ ಅನಾಹುತವಾಗುತ್ತಿತ್ತು ಆದರೆ ಆಂಜನೇಯನು ನಮ್ಮನ್ನೆಲ್ಲಾ ಮತ್ತೆ ಕಾಪಾಡಿದ್ದಾನೆ ಎಂದು ಶಿವರಾಜ್ ಕುಮಾರ್ ಹೇಳೀದ್ದಾರೆ.

ಒಂದು ಕೋಟಿ ರು. ವೆಚ್ಚದಲ್ಲಿ ಹಾಕಲಾಗಿದ್ದ ಗುಹೆಯ ಸೆಟ್ ಸಂಪೂರ್ಣ ಭಸ್ಮವಾಗಿದೆ. ಗಂಟೆಗೂ ಹೆಚ್ಚು ಕಾಲ ಸೆಟ್ ಬೆಂಕಿಗಾಹುತಿಯಾಗಿ ಹೊತ್ತಿ ಉರಿದಿದೆ. ಆದರೆ ಅದೃಷ್ಟವಶಾತ್ ಯಾವೊಬ್ಬರಿಗೆ ತೊಂದರೆಯಾಗಿಲ್ಲ.ಶಾರ್ಟ್‌ ಸರ್ಕ್ಯೂಟ್‌ ಆಗಿರುವ ಕಾರಣ ಈ ಅವಘಡ ಸಂಭವಿಸಿದ್ದು ಅವಘಡ ನಡೆಯುವ ವೇಳೆ ಶಿವರಾಜ್ ಕುಮಾರ್ ಶೂಟಿಂಗ್ ನಿಂದ ಹೊರಗೆ ವಿಶ್ರಾಂತಿ ಪಡೆಯುತ್ತಿದ್ದರೆಂದು ತಿಳಿದುಬಂದಿದೆ.

ಎ. ಹರ್ಷ ನಿರ್ದೇಶನದ ‘ಭಜರಂಗಿ 2’ ಸಂಕ್ರಾಂತಿ ದಿನ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.

Comments are closed.