ಕರಾವಳಿ

ಕೋಟೇಶ್ವರ ಕಟ್ಕೆರೆಯಲ್ಲಿ ಬಾಲ ಯೇಸುಸುವಿನ ವಾರ್ಷಿಕ ಮಹೊತ್ಸೋವ

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದಲ್ಲಿ ಬಾಲಾ ಯೇಸುವಿನ ವಾರ್ಷಿಕ ಮಹೊತ್ಸೋವವು ಭಕ್ತಿ ಬಲಿದಾನದ ಮೂಲಕ ನಡೆಯಿತು.

‘ನೀನೆ ಸಾಕು ದೆವಾ’ ಎಂಬ ಧೇಯ್ಯ ವಾಖ್ಯದೊಂದಿಗೆ ನಡೆದ ಉತ್ಸವದಲ್ಲಿ ರಿಷಿವನ ಇನ್ಸುಟ್ಯುಟ್‌ನ ಪ್ರಾಧ್ಯಾಪಕರಾದ ಧರ್ಮಗುರು ವಂ| ಜೊಸೆಫ್ ಡಿಸೋಜಾ ಒ.ಸಿ.ಡಿ. ಉತ್ಸವದ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಬಾಲಾ ಯೇಸುವಿಗೆ ನಾವು ಎಷ್ಟು ಗೌರವಿಸುತ್ತೇವೊ, ಅದಕ್ಕಿಂತ ಹೆಚ್ಚು ನಿಮ್ಮನ್ನು ಬಾಲ ಯೇಸು ಆಶಿರ್ವಾದಿಸುತ್ತಾರೆ, ಕ್ರಿಸ್ತನ ಅನುಯಾಯಿಗಳಾದ ನಾವು ಯೇಸುವಿನ ತತ್ವಗಳಂತೆ ನಡೆಯಬೇಕು, ನಾವು ತಪ್ಪುಗಳನ್ನು ಎಸಗಿದರು, ನಮ್ಮಂತಹ ಪಾಪಿಗಳನ್ನು ಕ್ಷಮಿಸಿ ತನ್ನೊಟ್ಟಿಗೆ ಜೀವಿಸಲು ಬರಮಾಡಿಕೊಳ್ಳುವಂತವರು ನಮ್ಮ ದೇವರು. ಅಧಿಕಾರ ಅಂತಸ್ತು, ಮಾನ ಮರ್ಯಾದೆಗೆ ಅಂಟ್ಟಿಕೊಳ್ಳದಿರಿ, ಸೇವಕರಂತ್ತೆ ಸಮಾಜದ ಸೇವೆ ಮಾಡಿ. ಸೈತಾನನು ನಿಮಗೆ ದೇವರಂತೆ ದಿವ್ಯ ಶಕ್ತಿಯಿದೆಯೆಂದು ತಪ್ಪು ನಿಮಗೆ ತಪ್ಪು ದಾರಿಗೆ ಎಳೆಯುತ್ತಾನೆ, ಆದರೆ ನಾವು ಜಾಗ್ರತರಾಗಿದ್ದು ದೇವರ ಮುಂದೆ ಅತೀ ಸಣ್ಣವರಾಗಿ ಸೇವೆ ಮಾಡಿ ದೇವರ ಸಾಮ್ರಾಜ್ಯದಲ್ಲಿ ಸ್ಥಾನ ಗಳಿಸಲು ಪ್ರಯತ್ನಿಸೋಣ’ ಎಂದು ಸಂದೇಶ ನೀಡಿದರು.

ಈ ಉತ್ಸವದ ತಯಾರಿಗಾಗಿ ಆಶ್ರಮದಲ್ಲಿ ೩ ದಿನಗಳ ಧ್ಯಾನ ಕೂಟವನ್ನು ಹಮ್ಮಿಕೊಂಡಿತ್ತು. ಈ ಧ್ಯಾನ ಕೂಟವನ್ನು ವಂ|ಫಾ| ಸ್ಟೀವನ್ ಲೋಬೊ, ಜೊಯೆಲ್ ಲಸ್ರಾದೊ, ರೊನಾಲ್ಡ್ ಡಿಸೋಜಾ ಇವರು ನೆಡೆಸಿಕೊಟ್ಟರು. ಮಹಾ ವಾರ್ಷಿಕದ ಈ ಉತ್ಸವದ ಬಲಿ ಪೂಜೆಯಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಉತ್ಸವದ ಕಾರ್ಮೆಲ್ ಸಂಸ್ಥೆಯ ಯಾಜಕರಿಗೆ ಶುಭಾಶಯಗಳನ್ನು ಕೋರಿದರು.

ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದ ರೆಕ್ಟರ್ ಧರ್ಮಗುರು ವಂ| ಪ್ರಕಾಶ್ ಡಿಕುನ್ಹಾ, ಸಂತ್ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ಕ್ಷೇವಿಯರ್ ಪಿಂಟೊ, ವಂ|ಫಾ|ಪ್ರವೀಣ್ ಮಾರ್ಟಿಸ್, ವಂ|ಫಾ|ವಿಜಯ್ ಡಿಸೋಜಾ, ವಂ|ಫಾ|ಜೋನ್ ಮಿನೇಜೆಸ್, ವಂ|ಫಾ| ಜೋನ್ ಆಲ್ಫ್ರೆಡ್ ಬಾರ್ಬೊಜಾ ಮತ್ತು ಬಿಕರ್ನ ಕಟ್ಟೆಯ ಬಾಲ ಯೇಸು ಪುಣ್ಯ ಕ್ಷೇತ್ರದ ಹಲವಾರು ಧರ್ಮಗುರುಗಳು ಹಾಗೇ ಕುಂದಾಪುರ ವಲಯದ ಧರ್ಮಗುರುಗಳು, ಅತಿಥಿ ಇತರ ಅನೇಕ ಧರ್ಮಗುರುಗಳು ಈ ಉತ್ಸವದ ಬಲಿದಾನದಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ವಂ|ಫಾ| ಆಲ್ವಿನ್ ಇವರ ಭಕ್ತಿ ಗೀತೆಗಳ ಸಿಡಿಯನ್ನು ಬಿಡುಗಡೆಗೊಳಿಸಲಾಯಿತು. ಕಟ್ಕರೆ ಬಾಲ ಯೇಸುವಿನ ಆಶ್ರಮದ ಮುಖ್ಯಸ್ಥರಾದ ಸಿರಿಲ್ ಮಿನೇಜಸ್ ಧನ್ಯವಾದಗಳನ್ನು ಅರ್ಪಿಸಿದರು.. ವಂ|ಫಾ|ಸ್ಟೀವನ್ ಲೋಬೊ ಸ್ವಾಗತಿಸಿ, ಗಾಯನ ತಂಡದ ನೇತ್ರತ್ವನ್ನು ವಹಿಸಿದರು ವಂ|ಫಾ| ದೀಪ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Comments are closed.