ಮನೋರಂಜನೆ

‘ಎಂಜಿಆರ್’ ಗೆಟಪ್‌ನಲ್ಲಿ ಕಾಣಿಸಿಕೊಂಡ ಖ್ಯಾತ ನಟ!

Pinterest LinkedIn Tumblr


ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ನಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್ ನಟಿಸುತ್ತಿದ್ದು, ಈಗಾಗಲೇ ಟೀಸರ್ ಮೂಲಕ ಸಣ್ಣ ಝಲಕ್‌ ನೀಡಿತ್ತು ಚಿತ್ರತಂಡ. ಜಯಲಲಿತಾ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಅವರ ಜೀವನದಲ್ಲಿ ಬರುವ ಬಹುಮುಖ್ಯ ಪಾತ್ರವೆಂದರೆ, ಅದು ಎಂ.ಜಿ. ರಾಮಚಂದ್ರನ್‌ (ಎಂಜಿಆರ್‌) ಅವರದ್ದು. ಅಂಥ ಪಾತ್ರವನ್ನು ಅರವಿಂದ್ ಸ್ವಾಮಿ ಮಾಡುತ್ತಾರೆ ಎಂದಾಗಲೇ ಕುತೂಹಲ ಮನೆ ಮಾಡಿತ್ತು.

ಇದೀಗ ಚಿತ್ರತಂಡ ಎಂಜಿಆರ್ ಪಾತ್ರದ ಫಸ್ಟ್‌ಲುಕ್ ರಿಲೀಸ್ ಮಾಡಿದ್ದು, ಅರವಿಂದ್ ಸ್ವಾಮಿ ಥೇಟ್‌ ಎಂಜಿಆರ್ ಮಾದರಿಯಲ್ಲೇ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಎಂಜಿಆರ್ ಅವರ ಹೇರ್‌ಸ್ಟೈಲ್‌, ವಾಕಿಂಗ್ ಸ್ಟೈಲ್ ಹೇಗಿತ್ತೋ, ಅದೇ ಥರ ಅರವಿಂದ್ ಲುಕ್ ಮೂಡಿಬಂದಿದೆ. ಫಸ್ಟ್‌ಲುಕ್ ಇಷ್ಟೊಂದು ಭರವಸೆ ಮೂಡಿಸಿರುವಾಗ ತೆರೆಮೇಲೆ ಅವರ ನಟನೆ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳದ್ದು.

ಈ ಹಿಂದೆ ಕಂಗನಾ ಲುಕ್‌ ರಿಲೀಸ್ ಮಾಡಿದಾಗ, ಜಯಲಲಿತಾ ಅವರೊಂದಿಗೆ ಅದು ಅಷ್ಟೊಂದು ಹೋಲಿಕೆ ಆಗುತ್ತಿರಲಿಲ್ಲ. ಹಾಗಾಗಿ, ಸಾಕಷ್ಟು ಅಸಮಾಧಾನ ಅಭಿಮಾನಿಗಳಲ್ಲಿತ್ತು. ಆದರೆ, ಅರವಿಂದ್‌ ಸ್ವಾಮಿ ಅವರ ಲುಕ್ ಆ ನಿರಾಸೆಯನ್ನು ಮರೆಸಿದೆ. ಇನ್ನು, ಪ್ರಕಾಶ್ ರೈ ಈ ಸಿನಿಮಾದಲ್ಲಿ ಎಂ. ಕರುಣಾನಿಧಿ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಜಯಲಲಿತಾ ಅವರ ಆಪ್ತೆ ಶಶಿಕಲಾ ಪಾತ್ರವನ್ನು ಬಹುಭಾಷಾ ನಟಿ ಪ್ರಿಯಾಮಣಿ ನಿರ್ವಹಿಸಲಿದ್ದಾರಂತೆ.

ಎ.ಎಲ್‌. ವಿಜಯ್‌ ನಿರ್ದೇಶನ ಮಾಡುತ್ತಿರುವ ಈ ಸಿನಿಮಾಗೆ ‘ಬಾಹುಬಲಿ’ ಕಥೆಗಾರ ವಿಜಯೇಂದ್ರ ಪ್ರಸಾದ್‌ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಜಿ.ವಿ. ಪ್ರಕಾಶ್‌ಕುಮಾರ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. 2020ರ ಜೂನ್ ತಿಂಗಳಲ್ಲಿ ‘ತಲೈವಿ’ಯನ್ನು ತೆರೆಗೆ ತರುವ ಆಲೋಚನೆ ನಿರ್ಮಾಪಕರದ್ದು.

Comments are closed.