ಕರ್ನಾಟಕ

ಸಿ ಟಿ ರವಿಯಿಂದ ‘ಬೀಫ್’ ಟ್ವೀಟ್ ಎಡವಟ್ಟು!

Pinterest LinkedIn Tumblr


ಬೆಂಗಳೂರು: ಕೇರಳ ಪ್ರವಾಸೋದ್ಯಮ ಇಲಾಖೆ ಟ್ವೀಟ್‌ ಮಾಡಿದ್ದ ಬೀಫ್ ಖಾದ್ಯದ ಫೋಟೋವನ್ನು ರೀ ಟ್ವೀಟ್‌ ಮಾಡಿದ ಸಚಿವ ಸಿ ಟಿ ರವಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಿಕ್ಕಾಪಟ್ಟೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಗುರುವಾರ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಕೇರಳದ ಪ್ರವಾಸೋದ್ಯಮ ಇಲಾಖೆ ಹಾಕಿದ್ದ ಟ್ವೀಟ್‌ನ್ನು ಹಂಚಿಕೊಂಡ ಸಚಿವ ಸಿ ಟಿ ರವಿ ‘ಕರ್ನಾಟಕಕ್ಕೆ ಸ್ವಾಗತ’ ಎಂದು ‘ಒನ್ ಸ್ಟೇಟ್ ಮೆನೀ ವರ್ಡ್ಸ್’ ಎಂಬ ಹ್ಯಾಶ್ ಟ್ಯಾಗ್ ನೀಡಿದ್ದರು. ಆದರೆ ತಮ್ಮ ಯಾವುದೇ ಅಭಿಪ್ರಾಯವನ್ನು ಅವರು ಇದಕ್ಕೆ ಅವರು ಸೇರಿಸಿರಲಿಲ್ಲ.

ಸಚಿವರ ಈ ಎಡವಟ್ಟಿನಿಂದ ಗೊಂದಲಕ್ಕೆ ಒಳಗಾದ ನೆಟ್ಟಿಗರು ಬೀಫ್ ಖಾದ್ಯ ಫೋಟೋ ಹಂಚಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಟ್ವಿಟ್ಟರ್‌ನಲ್ಲಿ ಪೋಟೋ ಹಂಚಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತಾಗಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದ್ದರೂ ಸಿಟಿ ರವಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಸಚಿವರ ಟ್ವೀಟ್‌ ಸ್ಕ್ರೀನ್ ಶಾಟ್‌ಗಳು ಫೇಸ್ ಬುಕ್, ವಾಟ್ಸಪ್‌ಗಳಂತಹ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದ್ದವು. ಇದಾಗ ಸುಮಾರು ಮೂರು ಗಂಟೆಯ ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿ ಟಿ ರವಿ “ ನಾನು ಬೀಫ್‌ ಅನ್ನು ಬೆಂಬಲಿಸುತ್ತೇನೆ ಎಂದು ನೀವು ಹೇಗೆ ಯೋಚಿಸಿದಿರಿ, ಇದು ನನ್ನ ನಂಬಿಕೆಗೆ ವಿರುದ್ಧವಾಗಿದೆ. ಕೇರಳದ ಪ್ರವಾಸೋದ್ಯಮದ ಟ್ವೀಟ್‌ನ್ನು ಹಂಚಿಕೊಂಡಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ನನ್ನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದೀರಿ. ತನ್ನ ಟ್ವೀಟ್ ಕೇರಳದ ವಿರುದ್ಧ ವ್ಯಂಗ್ಯ ಹಾಗೂ ಮೌನ ಪ್ರತಿಭಟನೆಯಾಗಿದೆ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Comments are closed.