ಮನೋರಂಜನೆ

ತೆಲುಗು ಸಿನಿಮಾದಿಂದ ಕೋಟಿ ಕೋಟಿ ರೂಪಾಯಿ ಬಾಚಿದ ರಶ್ಮಿಕಾ ಮಂದಣ್ಣ

Pinterest LinkedIn Tumblr


ಮಹೇಶ್ ಬಾಬು, ರಶ್ಮಿಕಾ ಮಂದಣ್ಣ ಅಭಿನಯದ ‘ಸರಿಲೇರು ನೀಕೆವ್ವರು’ ಸಿನಿಮಾ ನಿನ್ನೆ ಬಿಡುಗಡೆಯಾಗಿ, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. 2020ರ ಮೊದಲ ಬ್ಲಾಕ್‌ಬಸ್ಟರ್‌ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಡೆದುಕೊಂಡಿದೆ. ಮಾಸ್ ಮತ್ತು ಕೌಟುಂಬಿಕ ಪ್ರೇಕ್ಷಕರಿಂದ ಈ ಚಿತ್ರ ಮೆಚ್ಚುಗೆ ಗಳಿಸಿದೆ. ಮಹೇಶ್ ಬಾಬು ಮತ್ತು ವಿಜಯ್ ಶಾಂತಿ ನಟನೆ ಈ ಚಿತ್ರದ ಹೈಲೇಟ್‌ಗಳಲ್ಲಿ ಒಂದು. ರಶ್ಮಿಕಾ ಮಂದಣ್ಣ ಈ ಹಿಂದೆಂದೂ ಇಷ್ಟೊಂದು ಚೆನ್ನಾಗಿ ನಟಿಸಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಸಖತ್ ಡಾನ್ಸ್ ಸ್ಟೆಪ್‌ನಿಂದ ಟಾಲಿವುಡ್‌ ಪ್ರಿನ್ಸ್ ವೀಕ್ಷಕರ ಮನಸೂರೆಗೊಳ್ಳಾತ್ತಾರೆ.

‘ಸರಿಲೇರು ನೀಕೆವ್ವರು’ ಸಿನಿಮಾ ಕಲೆಕ್ಷನ್ ಇಷ್ಟು!
ವಿಶ್ವದಾದ್ಯಂತ ತೆರೆಕಂಡ ಈ ಚಿತ್ರದ ಬಾಕ್ಸ್ ಆಫೀಸ್‌ ಗಳಿಕೆ ಎಷ್ಟಿರಬಹುದು ಎಂಬ ಪ್ರಶ್ನೆ ಹಲವರಿಗೆ ಇರಬಹುದು. ಅಮೆರಿಕದಲ್ಲಿ 10 ಮಿಲಿಯನ್ ಡಾಲರ್‌ ಬಾಚಿಕೊಂಡಿದೆ ‘ಸರಿಲೇರು ನೀಕೆವ್ವರು’ ಸಿನಿಮಾ. ಒಟ್ಟಾರೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ರಶ್ಮಿಕಾ ಚಿತ್ರ 32.7 ಕೋಟಿ ರೂ. ಹಣ ಕೊಳ್ಳೆ ಹೊಡೆದಿದೆ ಎಂಬ ಮಾತು ಕೇಳಿಬರುತ್ತಿದೆ. ಆಂಧ್ರಪ್ರದೇಶದಲ್ಲಿ ಎಲ್ಲ ಥೀಯೇಟರ್‌ಗಳು ಕೂಡ ಭರ್ಜರಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿಯೂ ಕೂಡ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ಅಲ್ಲು ಅರ್ಜುನ್ ಮತ್ತು ಮಹೇಬ್ ಬಾಬು ಚಿತ್ರಗಳ ನಡುವೆ ಕ್ಲ್ಯಾಶ್
ಇಂದು ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಮುಲೋ’ ಚಿತ್ರ ರಿಲೀಸ್ ಆಗಿದ್ದು ಹೀಗಾಗಿ ಮಹೇಶ್ ಬಾಬು, ಅಲ್ಲು ಅರ್ಜುನ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಕ್ಲ್ಯಾಶ್ ಆಗುವ ಸಾಧ್ಯತೆಯೇ ಹೆಚ್ಚಿದೆ. ಆದರೆ ‘ಸರಿಲೇರು ನಿಕೆವ್ವರು’ ಚಿತ್ರ ವಿಮರ್ಶೆಯಲ್ಲಿ ಗೆದ್ದಿರೋದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಕಲೆಕ್ಷನ್ ಮಾಡಬಹುದು. ಆದಷ್ಟು ಬೇಗ ರಶ್ಮಿಕಾ ಚಿತ್ರ ನೂರು ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆಯಿದೆ.

Comments are closed.