
ನವದೆಹಲಿ: ಸ್ವರ್ಣ ಮಂದಿರದ ಚಿತ್ರವಿರುವ ಮ್ಯಾಟ್ಗಳನ್ನು ಮಾರಾಟ ಮಾಡಿದ ಸಂಬಂಧ ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪಾಶ್ಚಾತ್ಯ ಶೌಚಾಲಯಕ್ಕೆ ಬಳಸುವ ಸೀಟ್ ಕವರ್ ಮೇಲೆ ಸಿಖVರ ಪುಣ್ಯಕ್ಷೇತ್ರ ಸ್ವರ್ಣ ಮಂದಿರ ಚಿತ್ರವನ್ನು ಬಿಡಿಸಲಾಗಿತ್ತು. ಈ ಸಂಬಂಧ ದೆಹಲಿ ಸಿಖ್ ಗುರುದ್ವಾರ ನಿರ್ವಹಣೆ ಸಮಿತಿ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ಅವರು ಟ್ವಿಟರ್ನಲ್ಲಿ ಮ್ಯಾಟ್ ಫೋಟೋ ಸಹಿತ ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಅಮೆಜಾನ್ನಿಂದ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ. ಇಂತಹ ವಸ್ತುಗಳನ್ನು ನಿಷೇಧಿಸಬೇಕು ಹಾಗೂ ಈ ಕುರಿತು ಅಮೆಜಾನ್ ಜಾಗತಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು.
Comments are closed.