ಮನೋರಂಜನೆ

ಚಿತ್ರೀಕರಣ ಸಂದರ್ಭ ಶಾಹಿದ್ ಕಪೂರ್‌ಗೆ ಗಂಭೀರ ಗಾಯ – ಮುಖಕ್ಕೆ ಹತ್ತಾರು ಹೊಲಿಗೆ

Pinterest LinkedIn Tumblr


ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ಶೂಟಿಂಗ್ ಸೆಟ್‍ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಮುಖಕ್ಕೆ 13 ಹೊಲಿಗೆ ಹಾಕಲಾಗಿದೆ.

ಶಾಹಿದ್ ತೆಲುಗಿನ ‘ಜೆರ್ಸಿ’ ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾಗ ಶಾಹಿದ್ ಅವರ ಮುಖಕ್ಕೆ ಗಂಭೀರವಾಗಿ ಗಾಯವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವಿಷಯ ತಿಳಿದ ಶಾಹಿದ್ ಪತ್ನಿ ಮೀರಾ ರಜ್‍ಪುತ್ ಕೂಡಲೇ ಚಂಢೀಗಢ್‍ಗೆ ತೆರಳಿದ್ದಾರೆ.

ಜೆರ್ಸಿ ಸಿನಿಮಾದಲ್ಲಿ ಶಾಹಿದ್ ಕ್ರಿಕೆಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಚಂಡೀಗಢ್‍ನಲ್ಲಿ ನಡೆಯುತ್ತಿದ್ದು, ಈ ಚಿತ್ರಕ್ಕಾಗಿ ಶಾಹಿದ್ ಹಗಲು-ರಾತ್ರಿ ಕಷ್ಟಪಡುತ್ತಿದ್ದಾರೆ. ಪ್ರತಿದಿನದಂದೇ ಶಾಹಿದ್ ಇಂದು ಕೂಡ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದರು. ಚಿತ್ರದ ಸೀನ್‍ವೊಂದರಲ್ಲಿ ಶಾಹಿದ್ ಕ್ರಿಕೆಟ್ ಆಡಬೇಕಿತ್ತು. ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಅವರ ಮುಖಕ್ಕೆ ತಾಗಿದೆ. ಪರಿಣಾಮ ಶಾಹಿದ್ ಅವರ ಲೋವರ್ ಲಿಪ್ ಕಟ್ ಆಗಿದ್ದು, ತುಂಬಾ ರಕ್ತ ಬಂದಿದೆ.

ವರದಿಗಳ ಪ್ರಕಾರ ಶಾಹಿದ್ ಅವರ ಆರೋಗ್ಯದ ಸ್ಥಿತಿ ಈಗ ಸುಧಾರಿಸುತ್ತಿದೆ. ಚೆಂಡು ಬಿದ್ದು ಅವರ ಮುಖ ಊದಿಕೊಂಡಿದ್ದು, ಆ ಊತ ಕಡಿಮೆಯಾಗಲು ಸ್ವಲ್ಪ ದಿನ ಬೇಕಾಗುತ್ತದೆ. ಅಲ್ಲದೆ ಕೆಲವು ದಿನಗಳ ಕಾಲ ಶಾಹಿದ್ ಚಿತ್ರೀಕರಣಕ್ಕೆ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಐದು ದಿನಗಳ ನಂತರ ಶಾಹಿದ್ ಅವರ ಗಾಯ ಹೇಗಿದೆ ಎಂದು ತಿಳಿಯಲಿದೆ ಎಂದು ಹೇಳಲಾಗುತ್ತಿದೆ.

Comments are closed.