ಮನೋರಂಜನೆ

65ರ ಹರೆಯದ ನಿರ್ಮಾಪಕ ಟಾಪ್ ಮೇಲಕ್ಕೆ ಎತ್ತಲು ಹೇಳಿದ್ರು! ನಟಿ ಮಲ್ಹಾರ್ ರಾಥೋಡ್

Pinterest LinkedIn Tumblr


ಮುಂಬೈ: ಈಗಾಗಲೇ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ನ ಹಲವು ಪ್ರಸಿದ್ಧ ನಟಿಯರು ಸಿನಿಮಾರಂಗದಲ್ಲಿನ ಕಾಸ್ಟಿಂಗ್ ಕೌಚ್ (ಲೈಂಗಿಕ ಕಿರುಕುಳ) ಬಗ್ಗೆ ಆರೋಪಿಸಿದ್ದರು. ಇದೀಗ ಟೆಲಿವಿಷನ್ ಸ್ಟಾರ್ ನಟಿ ಮಲ್ಹಾರ್ ರಾಥೋಡ್ ಮತ್ತೊಂದು ಸೇರ್ಪಡೆ.

ಭಾರತೀಯ ಗ್ಲಾಮರಸ್ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಹೇಗೆ ಹಾಸು ಹೊಕ್ಕಾಗಿದೆ ಎಂಬ ಬಗ್ಗೆ ನಟಿ ರಾಥೋಡ್ ತನಗಾದ ಕಹಿ ಅನುಭವವನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಹಿರಂಗಗೊಳಿಸಿದ್ದಾರೆ.

ನಾನು 2008ರಲ್ಲಿ ಮುಂಬೈಗೆ ಬಂದಾಗ ಅಪ್ರಾಪ್ತಳಾಗಿದ್ದೆ. ಆಗ ನಟನೆಯಲ್ಲಿ ತನಗೆ ಅವಕಾಶ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿ ಅದೃಷ್ಟ ಪರೀಕ್ಷೆಗೆ ಹೋಗಿದ್ದೆ. ಅಂದು 65 ವರ್ಷದ ಸಿನಿಮಾ ನಿರ್ಮಾಪಕರೊಬ್ಬರು ನನಗೆ “ನಿನ್ನ ಮೇಲ್ ವಸ್ತ್ರ(ಟಾಪ್) ಮೇಲಕ್ಕೆ ಎತ್ತು ಹೇಳಿದ್ದರು. ನನಗೆ ಇದನ್ನು ಕೇಳಿ ಭಯವಾಗಿತ್ತು..ಕೂಡಲೇ ನಾನು ಅಲ್ಲಿಂದ ಹೊರನಡೆದಿದ್ದೆ ಎಂದು ರಾಥೋಡ್ ಕಾಸ್ಟಿಂಗ್ ಕೌಚ್ ನ ಕಹಿ ನೆನಪನ್ನು ಬಿಚ್ಚಿಟ್ಟಿರುವುದಾಗಿ ವರದಿ ತಿಳಿಸಿದೆ.

ಬಾಲಿವುಡ್ ಸೇರಿದಂತೆ ಭಾರತೀಯ ಸಿನಿಮಾರಂಗದಲ್ಲಿ ಯಾರೇ ಆಗಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಕೆಟ್ಟ ಸಂಸ್ಕೃತಿಗೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ಮೀ ಟೂನಂತಹ ಚಳವಳಿಯಲ್ಲಿ ಇಂಡಸ್ಟ್ರೀಯಲ್ಲಿ ಇರುವವರು ಕೆಲವೇ ಮಂದಿ ಅದರ ವಿರುದ್ಧ ಧ್ವನಿ ಎತ್ತಿ ಜಯಗಳಿಸುತ್ತಾರೆ ಎಂದು ರಾಥೋಡ್ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

Comments are closed.