ಮನೋರಂಜನೆ

ಜಾಲತಾಣದಲ್ಲಿ HOT ಫೋಟೋಗಳನ್ನು ಹಂಚಿಕೊಂಡ ವಾಣಿ ಕಪೂರ್

Pinterest LinkedIn Tumblr


ನವದೆಹಲಿ: ಖ್ಯಾತ ಬಾಲಿವುಡ್ ನಟಿ ವಾಣಿ ಕಪೂರ್ ಬಾಲಿವುಡ್ ಗೆ ಕಾಲಿಟ್ಟು ಆರು ವರ್ಷ ಪೂರೈಸಿವೆ. ಈ ಆರು ವರ್ಷಗಳಲ್ಲಿ ವಾಣಿ ಕೇವಲ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಸದ್ಯ ನಾಲ್ಕನೇ ಚಿತ್ರದ ಚಿತ್ರೀಕರನದಲ್ಲಿ ತೊಡಗಿದ್ದಾರೆ. ಚಿತ್ರರಂಗದಲ್ಲಿ ಮೆಲ್ಲಗೆ ಸಾಗುತ್ತಿರುವ ವಾಣಿ, ಇದುವರೆಗೆ ತಮ್ಮ ಜೀವನದಲ್ಲಿ ಅಸುರಕ್ಷತೆಯ ಭಾವನೆ ಕದತಟ್ಟಿಲ್ಲ ಎನ್ನುತ್ತಾರೆ. ಕೆಲಸದ ಪ್ರತಿ ನೂರಕ್ಕೆ ನೂರರಷ್ಟು ಸಮರ್ಪಿತರಾಗುವುದು ತುಂಬಾ ಮಹತ್ವದ್ದಾಗಿದೆ ಎಂಬುದು ವಾಣಿ ಅನಿಸಿಕೆ ಮತ್ತು ಅವರು ಅದನ್ನು ತುಂಬಾ ಶ್ರದ್ಧೆಯಿಂದ ಪಾಲಿಸುತ್ತಿರುವುದಾಗಿ ಹೇಳುತ್ತಾರೆ. ಅಷ್ಟೇ ಅಲ್ಲ ಇನ್ಸ್ಟಾಗ್ರಾಮ್ ಮೇಲೂ ಕೂಡ ತುಂಬಾ ಸಕ್ರೀಯರಾಗಿರುವ ವಾಣಿ, ತಮ್ಮ ಹಲವು ಫೋಟೋ, ವಿಡಿಯೋಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ವಾಣಿ ತಮ್ಮ ಛಾಯಾಚಿತ್ರಗಳನ್ನು ಇನ್ಸ್ಟಾಗ್ರಾಮ್ ಮೇಲೆ ಹಂಚಿಕೊಳ್ಳುತ್ತಲೇ ಅವು ವೈರಲ್ ಆಗಲಾರಂಭಿಸುತ್ತವೆ. ವಾಣಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಮತ್ತು ಇದುವರೆಗೂ ವೈರಲ್ ಆಗುತ್ತಿರುವ ಚಿತ್ರಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

ಚಿತ್ರ ಜಗತ್ತಿಗೆ ದೂರ-ದೂರದ ಸಂಬಂಧವೂ ಇರದ ವಾಣಿ ಕಪೂರ್, ತಮ್ಮ ಮೊದಲ ಚಿತ್ರ ‘ಶುದ್ಧ ದೇಸಿ ರೋಮಾನ್ಸ್’ ಚಿತ್ರದ ಮೂಲಕ ಸಾಕಷ್ಟು ಹೆಡ್ ಲೈನ್ ಗಿಟ್ಟಿಸಿದ್ದರು.

IGNOU ಮೂಲಕ ಬ್ಯಾಚಲರ್ ಇನ್ ಟೂರಿಸಂ ಪದವಿ ಪಡೆದ ವಾಣಿ ಒಬೆರಾಯ್ ಹೋಟೆಲ್ಸ್ ನಲ್ಲಿ ಇಂಟರ್ನ್ಶಿಪ್ ಮುಗಿಸಿ ಬಳಿಕ ITC ಗ್ರೂಪ್ ನ ಹೋಟೆಲ್ ಗಾಗಿ ಕೆಲಸ ಮಾಡಿದ್ದಾರೆ.

ಕಿರುತೆರೆಯಲ್ಲಿ ಪ್ರಸಾರಗೊಂಡ ‘ರಾಜುಬೇನ್’ ಮೂಲಕ ವಾಣಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದಾರೆ.

ಕಿರುತೆರೆಯಲ್ಲಿ ಮಿಂಚಿತ ಬಳಿಕ ಯಶ್ ರಾಜ್ ಬ್ಯಾನರ್ ಅಡಿಯ ಒಟ್ಟು ಮೂರು ಚಿತ್ರಗಳಿಗೆ ವಾಣಿ ಸಹಿ ಹಾಕಿದ್ದರು.
ಈ ಚಿತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ. ‘ಶುದ್ಧ ದೇಸಿ ರೋಮಾನ್ಸ್’ ಚಿತ್ರಕ್ಕಾಗಿ ವಾಣಿ ಕಪೂರ್ ಗೆ ‘ಬೆಸ್ಟ್ ಡೆಬ್ಯೂ ಇನ್ ಫೀಮೆಲ್’ ಫಿಲ್ಮ್ ಫೇರ್ ಪ್ರಶಸ್ತಿ ಬಂದಿದೆ.

ಕಳೆದ ವರ್ಷ ಬಿಡುಗಡೆಗೊಂಡ ‘ವಾರ್’ ಚಿತ್ರದಲ್ಲಿ ವಾಣಿ ಕಪೂರ್ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ವಾಣಿ ಜೊತೆ ಹೃತಿಕ್ ರೋಶನ್ ಹಾಗೂ ಟೈಗರ್ ಶ್ರಾಫ್ ಕೂಡ ಮುಖ್ಯಭೂಮಿಕೆಯಲ್ಲಿ ಕಂಡುಬಂದಿದ್ದರು.

Comments are closed.