ಮನೋರಂಜನೆ

ಬಿಗ್ ಬಾಸ್ ಮನೆಯಲ್ಲಿ ಶೈನ್ ಶೆಟ್ಟಿ ಜೊತೆ ದೀಪಿಕಾ ದಾಸ್ ರೋಮ್ಯಾಂಟಿಕ್ ಡ್ಯಾನ್ಸ್

Pinterest LinkedIn Tumblr


ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಸಮಯ ಎಷ್ಟಾಗುತ್ತದೆ, ಹೊರಜಗತ್ತಿನಲ್ಲಿ ಏನಾಗುತ್ತಿದೆ ಎಂಬ ಅರಿವೆಯೇ ಇರೋದಿಲ್ಲ. ಮೊಬೈಲ್, ಟಿವಿಯನ್ನು ಬಿಗ್ ಬಾಸ್ ಮನೆಯಿಂದ ಹೊರಬಂದಮೇಲೆಯೇ ಸ್ಪರ್ಧಿಗಳು ಬಳಸಬೇಕು. ಆದರೆ ಪ್ರತಿ ಸೀಸನ್‌ಲ್ಲೂ ಕೂಡ ಯುಗಾದಿ, ದೀಪಾವಳಿ, ಹೊಸ ವರ್ಷ, ಕ್ರಿಸ್‌ಮಸ್ ಬಂದರೆ ಬಿಗ್ ಬಾಸ್ ಸ್ಪರ್ಧಿಗಳಿಗೆಂದೇ ವಿಶೇಷ ಭೋಜನ, ಆಟಗಳನ್ನು ಆಯೋಜಿಸಿರುತ್ತಾರೆ. ಹಾಗೆ ಈ ಬಾರಿ ಕೂಡ ಕೆಲ ಕಾರ್ಯಕ್ರಮಗಳು ಹೊಸ ವರ್ಷದ ಆಚರಣೆಯಲ್ಲಿ ನಡೆದಿವೆ.

ರೋಮ್ಯಾಂಟಿಕ್ ಹಾಡಿಗೆ ಕುಣಿದ ದೀಪಿಕಾ ದಾಸ್, ಶೈನ್ ಶೆಟ್ಟಿ
ಚಂದನಾ ಎರಡು ಹಾಡಿಗೆ ಡಾನ್ಸ್ ಮಾಡಿದ್ದಾರೆ. ಕಿಶನ್ ಕೂಡ ಹುಚ್ಚೆದ್ದು ಕುಣಿದಿದ್ದಾರೆ. ಅಷ್ಟೇ ಅಲ್ಲದೆ ಶೈನ್ ಶೆಟ್ಟಿ, ದೀಪಿಕಾ ದಾಸ ರೋಮ್ಯಾಂಟಿಕ್ ಆಗಿ ಡಾನ್ಸ್ ಮಾಡಿದ್ದಾರೆ. ದೀಪಿಕಾ ಹಿಂದೆ ಶೈನ್ ಶೆಟ್ಟಿ ಬಿದ್ದಿರೋದು, ದೀಪಿಕಾರನ್ನು ಸುಮ್ಮನೆ ಕಾಲೆಳೆಯೋದು, ರೇಗಿಸೋದು ಮಾಡುತ್ತಲೇ ಇರುತ್ತಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂಬುದು ಹಲವರ ಅಭಿಪ್ರಾಯ. ಆದರೆ ಶೈನ್ ಶೆಟ್ಟಿ ಫೂಟೇಜ್‌ಗಾಗಿ ಈ ರೀತಿ ಬಿಹೇವ್ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿಯೇ ಇವರಿಬ್ಬರು ರೋಮ್ಯಾಂಟಿಕ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಹಿಂದೆ ಕಿಶನ್ ಜೊತೆಯೂ ದೀಪಿಕಾ ಹೆಜ್ಜೆ ಹಾಕಿದ್ದರು.

ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸ್ತಾರೆ ಕುರಿ ಪ್ರತಾಪ್
ಬಿಗ್ ಬಾಸ್ ಮನೆಯಲ್ಲಿ ಕುರಿ ಪ್ರತಾಪ್ ಸಾಧ್ಯವಾದಷ್ಟು ನಗಿಸುತ್ತಲೇ ಇರುತ್ತಾರೆ. ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಸುದೀಪ್ ಅವರು ಕುರಿ ಪ್ರತಾಪ್ ಮಾತು ಕೇಳಿ ಯಾವಾಗಲೂ ನಗುತ್ತಲೇ ಇರುತ್ತಾರೆ. ಪ್ರೇಕ್ಷಕರು ಕೂಡ ಕುರಿ ಕಾಮಿಡಿ ಕಂಡು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಇಂದು ಬಿಗ್ ಬಾಸ್ ಮನೆಯಲ್ಲಿ ಕುರಿ ಪ್ರತಾಪ್ ಮತ್ತು ಹರೀಶ್ ರಾಜ್ ನಡುವೆ ಒಂದು ಚಿಕ್ಕ ಸ್ಕಿಟ್ ನಡೆಯಲಿದೆ, ಮೇಲ್ನೋಟಕ್ಕೆ ಕುರಿ ಸಿಕ್ಕಾಪಟ್ಟೆ ಹಾಸ್ಯ ಮಾಡಿದಂತೆ ಕಾಣುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ತಾಯಿ
ನಿನ್ನೆ ತಾನೇ ಬಿಗ್ ಬಾಸ್ ಮನೆಗೆ ಚಂದನಾ ಅವರ ತಾಯಿ ಬಂದಿದ್ದರು. ಇಂದು ದೀಪಿಕಾ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅಮ್ಮನ ಬಳಿ ದೀಪಿಕಾ ಏನು ಮಾತಾಡಿದ್ದಾರೆ ಎಂಬುದು ಇಂದು ಪ್ರಸಾರವಾಗುವ ಎಪಿಸೋಡ್‌ನಲ್ಲಿ ಬಹಿರಂಗವಾಗಲಿದೆ.

Comments are closed.