ಕರ್ನಾಟಕ

‘ನೋ ಕನ್ನಡ- ನೋ ಬಿಸಿನೆಸ್‌’ ಟ್ವಿಟ್ಟರ್ ಅಭಿಯಾನಕ್ಕೆ ಭಾರೀ ಬೆಂಬಲ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿನ ಕೇಂದ್ರ ಸರಕಾರದ ಕಚೇರಿಗಳು, ಬ್ಯಾಂಕ್ ಗಳು ಹಾಗೂ ಔಷಧ ಮಳಿಗೆಗಳು, ವಾಣಿಜ್ಯ ಮಳಿಗೆಗಳು, ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡ ಬಳಕೆ ಮಾಡದಿರುವ ಬಗ್ಗೆ ಈಗ ಟ್ವಿಟ್ಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಹಿನ್ನಲೆಯಲ್ಲಿ ಈಗ #NoKannadaNoBusiness ಹ್ಯಾಷ್ಟ್ಯಾಗ್ ನೋ ಕನ್ನಡ ನೋ ಬಿಸಿನೆಸ್ ಟ್ವಿಟ್ಟರ್ ಅಭಿಯಾನಕ್ಕೆ ಕನ್ನಡಿಗರು ಬೃಹತ್ ಪ್ರಮಾಣದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುಹೃತ ಯಜಮಾನ್ ಎನ್ನುವವರು ಈ ಅಭಿಯಾನದ ಭಾಗವಾಗಿ ಟ್ವೀಟ್ ಮಾಡಿ ‘ಚೀನಾದಲ್ಲಿ ಅಲ್ಲಿನ ಭಾಷೆಯಲ್ಲಿ ಬೋರ್ಡ್ ಹಾಕಲು ಯಾವ ತೊಂದರೆಯೂ ಇಲ್ಲ ಬೆಂಗಳೂರಲ್ಲಿ ಕನ್ನಡದಲ್ಲಿ ಬೋರ್ಡ್ ಹಾಕಿ ಅಂದಾಗ ಕೋರ್ಟ್ ಬಾಗಿಲು ತಟ್ಟುವುದರ ಹಿಂದಿನ ಉದ್ದೇಶವೇನು ಮೆಟ್ರೋ ? ‘ ಎಂದು ಪ್ರಶ್ನಿಸಿದ್ದಾರೆ.

ಈಗ ಕನ್ನಡಿಗರು ಈ ಅಭಿಯಾನದ ಭಾಗವಾಗಿ ಒಂದು ವೇಳೆ ಬಹುರಾಷ್ಟ್ರೀಯ ಕಂಪನಿಗಳಾಗಲಿ ಅಥವಾ ಯಾವುದೇ ಮಳಿಗೆಗಳಾಗಲಿ ರಾಜ್ಯದಲ್ಲಿ ಕನ್ನಡ ಬಳಕೆ ಮಾಡದಿದ್ದಲ್ಲಿ ಇಲ್ಲಿ ವ್ಯಾಪಾರ ವಹಿವಾಟು ನಡೆಸುವ ಅಗತ್ಯವಿಲ್ಲ ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

Comments are closed.