ಮನೋರಂಜನೆ

ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಚಂದನಾ

Pinterest LinkedIn Tumblr


‘ಬಿಗ್ ಬಾಸ್ ಕನ್ನಡ ಸೀಸನ್ 7’ರಲ್ಲಿ ಕ್ಪಾಪ್ಟನ್ ಆದವರ ಮನೆಯವರ ಧ್ವನಿಯನ್ನು ಕೇಳಿಸಲಾಗುತ್ತದೆ. ಅದರಂತೆಯೇ ಕ್ಯಾಪ್ಟನ್ ಆದವರ ಪಾಲಕರ ಅಥವಾ ಮಕ್ಕಳ ಧ್ವನಿಯನ್ನು ಕೇಳಿಸಲಾಗಿತ್ತು. ಇತ್ತೀಚೆಗಷ್ಟೇ ಪ್ರಿಯಾಂಕಾ ಕ್ಯಾಪ್ಟನ್ ಆದಮೇಲೆ ಅವರ ತಾಯಿ ಧ್ವನಿಯನ್ನು ಬಿಗ್ ಮನೆಯೊಳಗಡೆ ಪ್ರಸಾರ ಮಾಡಲಾಗಿತ್ತು. ಮಗಳೇ ಚೆನ್ನಾಗಿ ಆಟ ಆಡು ಎಂದು ಪ್ರಿಯಾಂಕಾ ತಾಯಿ ಮಗಳಿಗೆ ಸಲಹೆ ನೀಡಿದ್ದರು.

ನಾಲ್ಕು ವರ್ಷದಿಂದ ಮಾವನ ಜೊತೆ ಮಾತನಾಡದೆ ಭೂಮಿ ಶೆಟ್ಟಿ ಬೇಸರ ಮಾಡಿಕೊಂಡಿದ್ದರು. ಕ್ಷಮೆ ಕೇಳುವ ಟಾಸ್ಕ್‌ನಲ್ಲಿ ಭೂಮಿ ಶೆಟ್ಟಿ ಈ ವಿಚಾರವನ್ನು ಹೇಳಿಕೊಂಡು ಅತ್ತಿದ್ದರು. ಬಿಗ್ ಬಾಸ್‌ ಎಂಬ ರಿಯಾಲಿಟಿ ಶೋದಲ್ಲಿ ಸ್ನೇಹ, ಪ್ರೀತಿ-ಪ್ರೇಮ, ಎಮೋಶನಲ್ ಎಲ್ಲವೂ ಅನಾವರಣಗೊಳ್ಳುತ್ತದೆ. ಎಷ್ಟೋ ಸ್ಪರ್ಧಿಗಳ ನೋವಿನ ಕಥೆ ಪ್ರೇಕ್ಷಕರ ಮುಂದೆ ಬಹಿರಂಗವಾಗುತ್ತದೆ. ಸೆಲೆಬ್ರಿಟಿಗಳ ಲೈಫ್ ಅಂದರೆ ಕಲರ್‌ಫುಲ್‌ ಲೈಫ್ ಅಂತ ಹಲವರು ಅಂದುಕೊಂಡಿರುತ್ತಾರೆ, ಆದರೆ ನಿಜಕ್ಕೂ ಎಲ್ಲರ ಬದುಕು ಕಲರ್‌ಫುಲ್ ಆಗಿರಲ್ಲ. ಅವರಿಗೂ ಕೂಡ ಅವರದ್ದೇ ಆದ ಕಷ್ಟಗಳಿರುತ್ತವೆ, ವೈಯಕ್ತಿಕ ಲೈಫ್ ಇರುತ್ತವೆ.

ಬಿಗ್ ಬಾಸ್ ಮನೆಗೆ ಚಂದನಾ ಅವರ ಅಮ್ಮ ಬಂದಿದ್ದಾರೆ. ಆ ಎಪಿಸೋಡ್ ಇಂದು ಪ್ರಸಾರವಾಗಲಿದೆ. ಅಮ್ಮನನ್ನು ನೋಡುತ್ತಿದ್ದಂತೆ ಚಂದನಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಚಂದನಾ ಅಳೋದನ್ನು ನೋಡಿ ಬಿಗ್ ಬಾಸ್ ಮನೆಯ ಇತರ ಸ್ಪರ್ಧಿಗಳು ಚಂದನಾರನ್ನು ನಿಬ್ಬೆರಗಾಗಿ ನೋಡುತ್ತಿದ್ದರು. ತಂದೆ ಕಳೆದುಕೊಂಡ ಚಂದನಾಗೆ ಅಮ್ಮ ಅಂದರೆ ತುಂಬ ಅಚ್ಚುಮೆಚ್ಚು. ಅಮ್ಮನನ್ನು ನೋಡದೆ ಚಂದನಾ 12 ವಾರಗಳಾಯಿತು. ಹೀಗಾಗಿ ಚಂದನಾ ಬಿಕ್ಕಿ ಬಿಕ್ಕಿ ಅತ್ತಿರಬಹುದು. ಅಮ್ಮ ಚಂದನಾರಿಗೆ ಹೇಳಿದ್ದೇನು? ಚಂದನಾ ಅಮ್ಮನ ಬಳಿ ಏನು ಹೇಳಿದರು ಅನ್ನೋದನ್ನು ನೋಡಬೇಕು ಎಂದರೆ ಇಂದಿನ ಬಿಗ್ ಬಾಸ್ ಎಪಿಸೋಡ್ ನೋಡಿ.

Comments are closed.