ಮನೋರಂಜನೆ

ಟ್ವಿಟರ್‌ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್‌ಗೆ ಆತ್ಮಹತ್ಯೆ ಬೆದರಿಕೆ ಒಡ್ಡಿದ ಅಭಿಮಾನಿಗಳು

Pinterest LinkedIn Tumblr


ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಬಣ್ಣದ ಜಗತ್ತಿನಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿರುವುದು ಗೊತ್ತೇ ಇದೆ. ಕಳೆದ ವರ್ಷ ರಿಲೀಸ್ ಆದ ‘ಝೀರೋ’ ಸಿನಿಮಾ ಬಳಿಕ ಇದುವರೆಗೂ ಅವರ ಹೊಸ ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಘೋಷಣೆ ಹೊರಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ತುಂಬಾ ಬೇಸರಗೊಂಡಿದ್ದಾರೆ.

ಶಾರುಖ್ ಖಾನ್ ಶೀಘ್ರದಲ್ಲೇ ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ಸಮಯದಿಂದ ಸದ್ದು ಮಾಡುತ್ತಲೇ ಇದೆ. ಆದರೆ ಶಾರುಖ್ ಮಾತ್ರ ಈ ಬಗ್ಗೆ ತುಟಿ ಬಿಚ್ಚಲಿಲ್ಲ. ಅಭಿಮಾನಿಗಳೂ ಕಾತುರದಿಂದ ಕಾಯುತ್ತಲೇ ಇದ್ದಾರೆ. ಆದರೆ ನಿರಾಸೆ ಮಾತ್ರ ತಪ್ಪಿದ್ದಲ್ಲ.

ಈ ಹಿನ್ನೆಲೆಯಲ್ಲಿ ಶಾರುಖ್ ಅಭಿಮಾನಿಗಳು ಟ್ವಿಟರ್‍‌ನಲ್ಲಿ ಹೊಸ ವರ್ಷಕ್ಕಾದರೂ ಹೊಸ ಸಿನಿಮಾ ಘೋಷಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಜೊತೆಗೆ #WeWantAnnouncementSRK ಎಂಬ ಹ್ಯಾಶ್ ಟ್ಯಾಗ್ ಸೃಷ್ಟಿಸಿ ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಿದ್ದಾರೆ.

ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದು, “ಶಾರುಖ್ ಸಾರ್ ಇದುವರೆಗೂ ತಾವು ತೆಗೆದುಕೊಂಡ ಬ್ರೇಕ್‍ಗಳು ಸಾಕು. ಝೀರೋ ಸಿನಿಮಾ ಬಳಿಕ ನಾವು ಯಾವುದೇ ಸಿನಿಮಾ ನೋಡಿಲ್ಲ. ಯಾಕೆಂದರೆ ನಿಮ್ಮಿಂದ ಯಾವುದೇ ಸಿನಿಮಾ ಬರಲಿಲ್ಲ. ಕನಿಷ್ಠಪಕ್ಷ ಘೋಷಣೆಯೂ ಆಗಲಿಲ್ಲ. ಈಗಲಾದರೂ ನಿಮ್ಮಿಂದ ಗುಡ್ ನ್ಯೂಸ್ ಬರುತ್ತದೆಂದು ಎದುರು ನೋಡುತ್ತಿದ್ದೇವೆ” ಎಂದಿದ್ದಾರೆ.

ಇನ್ನೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದು, “ಹೊಸ ವರ್ಷದಲ್ಲಿ ಹೊಸ ಸಿನಿಮಾಗೆ ಸಂಬಂಧಿಸಿದ ಘೋಷಣೆ ಹೊರಬೀಳಲಿಲ್ಲ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದಿದ್ದಾನೆ. ಶಾರುಖ್ ಸಾರ್ ನೀವೇನಾದರೂ ಜನವರಿ 1ರಿಂದ ಹೊಸ ಸಿನಿಮಾ ಬಗ್ಗೆ ಯಾವುದೇ ಘೋಷಣೆ ಮಾಡಲಿಲ್ಲ ಎಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ.

ಪ್ಲೀಸ್ ಅನೌನ್ಸ್ ಮಾಡಿಬಿಡಿ ಶಾರುಖ್ ಖಾನ್. ನಮಗೆ ಗೊತ್ತು ಝೀರೋ ಚಿತ್ರ ವಿಶೇಷ ಅಂತ ಮತ್ತು ನೀವು ಈ ರೀತಿ ಶಿಕ್ಷೆ ಕೊಡ್ತಾ ಇದ್ದೀರಾ? ಇದು ಅಷ್ಟು ಒಳ್ಳೇದಲ್ಲ ಸಾರ್. ಹೊಸ ವರ್ಷದ ದಿನವಾದರೂ ಹೊಸ ಸಿನಿಮಾ ಘೋಷಿಸಿ ಎಂದಿದ್ದಾರೆ ಅಭಿಮಾನಿಗಳು.

Comments are closed.