ಕರ್ನಾಟಕ

ರಾಜ್ಯಕ್ಕೆ ಒಂದಿಂಚೂ ಜಾಗ ಬಿಡುವುದಿಲ್ಲ: ಮಹಾರಾಷ್ಟ್ರಕ್ಕೆ ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಮಹಾರಾಷ್ಟ್ರ – ಬೆಳಗಾವಿ ಗಡಿ ಭಾಗದಲ್ಲಿ ಶಿವಸೇನೆ ಕಾರ್ಯಕರ್ತರು ಪುಂಡಾಟ ತೋರಿರುವ ಘಟನೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕರ್ನಾಟಕದ ಒಂದಿಂಚೂ ಜಾಗ ಬಿಡುವುದಿಲ್ಲ ಎಂದಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಹಾಜನ್ ಆಯೋಗದ ವರದಿ ಪ್ರಕಾರ ಕರ್ನಾಟಕಕ್ಕೆ ಮತ್ತು ಮಹಾರಾಷ್ಟ್ರಕ್ಕೆ ಯಾವ ಪ್ರದೇಶ ಸೇರಬೇಕು ಎನ್ನುವುದು ತೀರ್ಮಾನ ಆಗಿದೆ. ಈ ಬಗ್ಗೆ ಈಗ ವಿವಾದ ಸೃಷ್ಟಿ ಮಾಡುವುದು ತರವಲ್ಲ ಎಂದರು.

ಎಂಇಎಸ್‌ ಹಾಗೂ ಶಿವಸೇನೆ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಯಿಸಿದ ಬಿಎಸ್ ವೈ, ರಾಜಕೀಯ ಬೇಳೆ ಬೆಳೆಸಿಕೊಳ್ಳಲು ಇಂಥ ಹೇಳಿಕೆ ನೀಡುತ್ತಿದ್ದಾರೆ. ಕರ್ನಾಟಕದ ಒಂದಿಂಚೂ ಜಾಗ ಬಿಡುವುದಿಲ್ಲ. ಗಡಿ ಭಾಗದ ಕನ್ನಡಿಗರು ಶಾಂತಿ ಕಾಪಾಡಿಕೊಳ್ಳಲು ಮನವಿ ಮಾಡುತ್ತೇನೆ ಎಂದರು.

Comments are closed.