ಮನೋರಂಜನೆ

ನಟಿ ಅನಿತಾ ಭಟ್ ಸಖತ್ ಗ್ಲಾಮರಸ್

Pinterest LinkedIn Tumblr


ಬೆಂಗಳೂರು: ಕೆಲವೇ ದಿನಗಳ ಹಿಂದೆ ‘ಬೆಂಗಳೂರು 69’ ಚಿತ್ರದ ಪೋಸ್ಟರ್​ಗಳು ಬಿಡುಗಡೆ ಆಗಿದ್ದವು. ಅದರಲ್ಲಿ ನಟಿ ಅನಿತಾ ಭಟ್ ಸಖತ್ ಗ್ಲಾಮರಸ್ ಆಗಿ ಪೋಸ್ ನೀಡಿದ್ದರು. ಇತ್ತೀಚೆಗೆ ಅದೇ ಸಿನಿಮಾದ ಟೀಸರ್ ಕೂಡ ಪ್ರದರ್ಶಿಸಲಾಯಿತು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅನಿತಾ, ಈ ಟೀಸರ್​ನಲ್ಲಿ ಸಹನಟ ಪವನ್ ಶೆಟ್ಟಿ ಜತೆ ಲಿಪ್​ಲಾಕ್ ಮಾಡಿದ್ದಾರೆ. ಮಾತ್ರವಲ್ಲ, ಸಿನಿಮಾದಲ್ಲಿ ಅಂಥ ಇನ್ನೂ ಕೆಲವು ಇಂಟಿಮೇಟ್ ದೃಶ್ಯಗಳು ಇವೆಯಂತೆ. ‘ಹಾಗಂತ ಯಾವುದೇ ಸನ್ನಿವೇಶವನ್ನು ನಿರ್ದೇಶಕರು ಬೇಕಂತಲೇ ತುರುಕಿಲ್ಲ.

ಇಡೀ ಕಥೆಗೆ ಟ್ವಿಸ್ಟ್ ನೀಡುವಂತಹ ದೃಶ್ಯಗಳಿವು. ಹಾಗಾಗಿ ನಾನು ಇಂಟಿಮೇಟ್ ಆಗಿ ನಟಿಸಲು ಒಪ್ಪಿಕೊಂಡೆ. ಟೀಸರ್ ನೋಡಿದ ಬಳಿಕ ಅನೇಕರು ನನ್ನ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇದು ಬೇರೆಯದೇ ರೀತಿಯ ಸಿನಿಮಾ. ಪೂರ್ತಿ ಚಿತ್ರ ನೋಡಿದ ಬಳಿಕ ಪ್ರೇಕ್ಷಕರಿಗೆ ಅರ್ಥವಾಗುತ್ತದೆ’ ಎನ್ನುತ್ತಾರೆ ಅನಿತಾ.

ನಾಯಕ-ನಾಯಕಿ ಪ್ರೇಮಿಗಳು ಎಂಬುದನ್ನು ತೋರಿಸುವುದು ಮಾತ್ರ ಆ ದೃಶ್ಯದ ಉದ್ದೇಶ ಆಗಿದ್ದರೆ ಅದಕ್ಕೆ ಅವರು ಸಮ್ಮತಿ ನೀಡುತ್ತಿರಲಿಲ್ಲವಂತೆ. ಅದನ್ನು ಸಾಂಕೇತಿಕವಾಗಿ ಬೇರೆ ರೀತಿಯಲ್ಲೂ ಚಿತ್ರಿಸಬಹುದು. ಆದರೆ ಇವು ಕಥೆಯ ಬಹುಮುಖ್ಯ ಘಟ್ಟದಲ್ಲಿ ಬರುವ ದೃಶ್ಯಗಳಾದ್ದರಿಂದ ಅದಕ್ಕೆ ನ್ಯಾಯ ಸಲ್ಲಿಸಲು ಲಿಪ್ ಲಾಕ್ ಅನಿವಾರ್ಯ ಎಂಬುದು ಅನಿತಾ ಅಭಿಪ್ರಾಯ.

ಅದೇ ರೀತಿ ಚಿತ್ರರಂಗದಲ್ಲಿ ಅನೇಕ ಕಲಾವಿದರು ಈ ಬಗ್ಗೆ ತಮ್ಮದೇ ನಿಲುವು ಹೊಂದಿದ್ದಾರೆ. ನಟಿಯರಲ್ಲದೆ ಕೆಲವು ಹೀರೋಗಳೂ ಮಡಿವಂತಿಕೆ ಕಾಪಾಡಿಕೊಂಡು ಬರುತ್ತಿದ್ದಾರೆ. ‘ಬಾಲಿವುಡ್​ನಲ್ಲಿ ಸಲ್ಮಾನ್ ಖಾನ್ ಕೂಡ ಲಿಪ್​ಲಾಕ್ ದೃಶ್ಯಗಳಿಂದ ದೂರ ಉಳಿದಿದ್ದಾರೆ. ನಟಿ ರಾಧಿಕಾ ಆಪ್ಟೆ ಇದಕ್ಕೆ ಸಂಪೂರ್ಣ ವಿರುದ್ಧ. ಅದು ಅವರವರ ವೈಯಕ್ತಿಕ ಅಭಿಪ್ರಾಯ’ ಎಂದಿದ್ದಾರೆ ಅನಿತಾ.

ಅಂದಹಾಗೆ, ‘ಬೆಂಗಳೂರು 69’ ಟೀಸರ್ ಇನ್ನೂ ಯೂಟ್ಯೂಬ್​ನಲ್ಲಿ ಲಭ್ಯವಾಗಿಲ್ಲ. ಶೀಘ್ರವೇ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2020ರ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಕ್ರಾಂತಿ ಚೈತನ್ಯ ನಿರ್ದೇಶನ ಮಾಡಿದ್ದು, ಗುಲ್ಜಾರ್ ಬಂಡವಾಳ ಹೂಡಿದ್ದಾರೆ.

Comments are closed.