ಮನೋರಂಜನೆ

ಬಾಲಿವುಡ್ ನಟಿ ಮಲೈಕಾ ಅರೋರಾ ಕ್ಯಾಮೆರಾಗೆ ಪೋಸ್ ಕೊಡುವಾಗ ಜಾರಿದ ಡ್ರೆಸ್

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಕ್ಯಾಮೆರಾಗೆ ಪೋಸ್ ಕೊಡುವಾಗ ಡ್ರೆಸ್ ಜಾರಿ ಮುಜುಗರಕ್ಕೊಳಗಾಗಿದ್ದಾರೆ.

ಇತ್ತೀಚೆಗೆ ಮಲೈಕಾ ಅವರು ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರ ಪತ್ನಿ ಗೌರಿ ಖಾನ್ ಕಾಸ್ಟ್ಯೂಮ್ ಡಿಸೈನ್ ಮಾಡಿರುವ ಶಾಪ್ ಲಾಂಚ್ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಕಾರ್ಯಕ್ರಮಕ್ಕೆ ಮಲೈಕಾ ಡೀಪ್ ನೆಕ್ ಡ್ರೆಸ್ ಧರಿಸಿದ್ದರು.

ಮಲೈಕಾ ಕಾರ್ಯಕ್ರಮಕ್ಕೆ ಆಗಮಿಸಿದಾಗ ಕ್ಯಾಮೆರಾ ಮುಂದೆ ನಿಂತು ಫೋಟೋಗೆ ಪೋಸ್ ಕೊಡುತ್ತಿದ್ದರು. ಈ ವೇಳೆ ಅವರು ಧರಿಸಿದ್ದ ಡ್ರೆಸ್ ಮತ್ತಷ್ಟು ಕೆಳಗೆ ಜಾರಿದೆ. ಡ್ರೆಸ್ ಜಾರುತ್ತಿದೆ ಎಂದು ಗೊತ್ತಾದ ತಕ್ಷಣ ಮಲೈಕಾ ಅಲ್ಲಿಂದ ಬಂದಿದ್ದಾರೆ. ಮಲೈಕಾ ಅವರ ಉಡುಪು ಜಾರಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇತ್ತೀಚೆಗೆ ಮಲೈಕಾ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಈ ಶರ್ಟ್‍ಗೆ ಅವರು ಪ್ಯಾಂಟ್ ಹಾಕದೆ ಬೂಟ್ಸ್ ಧರಿಸಿ ಅದಕ್ಕೆ ಹ್ಯಾಟ್ ಧರಿಸಿದ್ದರು. ಮಲೈಕಾರ ಈ ಲುಕ್ ಅವರ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಕೆಟ್ಟದಾಗಿ ಕಮೆಂಟ್ಸ್ ಮಾಡಲು ಶುರು ಮಾಡಿದ್ದರು.

ಈ ಫೋಟೋ ವೈರಲ್ ಆಗುತ್ತಿದ್ದಂತೆ ಕೆಲವರು, “ಮಲೈಕಾ ಪ್ಯಾಂಟ್ ಧರಿಸುವುದನ್ನು ಏಕೆ ಮರೆತು ಹೋಗುತ್ತಾರೆ” ಎಂದು ಕಮೆಂಟ್ ಮಾಡಿದ್ದರು. ಮತ್ತೆ ಕೆಲವರು, “ಮಲೈಕಾ ಅವರ ಮುಖದಲ್ಲಿ ಹೆಚ್ಚಾಗುತ್ತಿರುವ ಅವರ ವಯಸ್ಸು ಕಾಣಿಸುತ್ತಿದೆ”. ಇನ್ನು ಕೆಲವರು ಮಲೈಕಾರಿಗೆ ವಯಸ್ಸಿಗೆ ತಕ್ಕಂತೆ ಉಡುಪು ಹಾಕಿ ಎಂದು ಸಲಹೆ ನೀಡಿದ್ದರು.

1998ರಲ್ಲಿ ಮಲೈಕಾ, ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಜೋಡಿಗೆ ಒಂದು ಮಗುವಿದೆ. ಆದರೆ 2017ರಲ್ಲಿ ಮಲೈಕಾ ಹಾಗೂ ಅರ್ಬಾಜ್ ಖಾನ್ ವಿಚ್ಛೇದನ ಪಡೆದು, ಬೇರೆಯಾಗಿದ್ದರು. ಈಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರನ್ನು ಮಲೈಕಾ ಪ್ರೀತಿಸುತ್ತಿದ್ದಾರೆ. ಅಲ್ಲದೆ ಇಬ್ಬರು ಸಂದರ್ಶನದಲ್ಲಿ ಪರಸ್ಪರ ಬಹಿರಂಗವಾಗಿ ಮಾತನಾಡುತ್ತಿರುತ್ತಾರೆ.

Comments are closed.