ಮನೋರಂಜನೆ

ತಮಿಳಿನ ಈ ನಟನಿಗೆ ನಮ್ಮ ರಾಜ್ಯದ ಸಿನಿಮಾಗಳಲ್ಲಿ ಭರ್ಜರಿ ಬೇಡಿಕೆ..!

Pinterest LinkedIn Tumblr


ಪವನ್ ಒಡೆಯರ್ ಸಾರಥ್ಯದ ರೆಮೋ ಅನೇಕ ವಿಚಾರಗಳಿಂದ ಸುದ್ದಿ ಮನೆಯ ಅಥಿತಿಯಾಗುತ್ತಲೇ ಇದೆ. ನಿರ್ದೇಶಕ ಪವನ್ ಒಡೆಯರ್ ಆಗಾಗ ರೆಮೋ ಬಗ್ಗೆ ಒಳ್ಳೊಳೆ ಸಮಾಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾನೆ ಇರ್ತಾರೆ. ಅದೇ ಪವನ್ ಒಡೆಯರ್ ಈಗ ಒಂದು ಸೆನ್ಸೆಷನ್ ಸಮಾಚಾರವನ್ನು ಹಂಚಿಕೊಂಡಿದ್ದಾರೆ.

ಸಾರಥಿ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದ ತಮಿಳಿನ ಶರತ್ ಕುಮಾರ್ ಅವರು ಇದೀಗ ಸ್ಯಾಂಡಲ್ವುಡ್ ನಲ್ಲಿ ಬೇಡಿಕೆಯ ನಟರಾಗಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ಬಾಕ್ಲ ಬಸ್ಟರ್ ರಾಜಕುಮಾರ ಚಿತ್ರದಲ್ಲಿ ಪುನೀತ್ ತಂದೆ ಪಾತ್ರದಲ್ಲಿ ನಟಿಸಿ ಶರತ್ ಕುಮಾರ್ ಸೈ ಎನಿಸಿಕೊಂಡಿದ್ದರು. ಅದಕ್ಕೂ ಮುಂಚೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಾರಥಿ ಸಿನಿಮಾದಲ್ಲಿ ಮಿಂಚಿದ್ರು. ಇದೀಗ ಅದೇ ರೀತಿಯ ಮಿಂಚೋ ಪವರ್​ಫುಲ್​​​​ ಪಾತ್ರದಲ್ಲಿ ಶರತ್ ಕುಮಾರ್ ನಟಿಸಲಿದ್ದಾರೆ.

ರೆಮೋ.. ನಟಸಾರ್ವಭೌಮ ಚಿತ್ರದ ನಂತರ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. ಅದ್ಧೂರಿ ಮಲ್ಟಿಸ್ಟಾರ್ ಕಾಸ್ಟ್ ಸಿನಿಮಾ ಕೊಟ್ಟ ಸಿ.ಆರ್​.ಮನೋಹರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮಗದೊಂದು ಬೃಹತ್ ಸಿನಿಮಾ ಇದು. ಅನೇಕ ವಿಶೇಷ ಸಮಾಚಾರಗಳಿಂದ ಸದ್ದು ಮಾಡುತ್ತಿದ ರೆಮೋ ಬಳಗಕ್ಕೆ ಬಹುಭಾಷಾ ನಟ ಶರತ್ ಕುಮಾರ್ ಬಲಗಾಲಿಟ್ಟಿದ್ದಾರೆ.

ಶ್ರೀ ದೇಶಪಾಂಡೆ ಅನ್ನೋ ಕರ್ನಾಟಕದ ಶ್ರೀಮಂತ ವ್ಯಕ್ತಿ ಪಾತ್ರದಲ್ಲಿ ಶರತ್ ಕುಮಾರ್, ಇಶಾನ್ ತಂದೆ ಪಾತ್ರದಲ್ಲಿ ರೆಮೋ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ರೆಮೋ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್, ರೊಮ್ಯಾಂಟಿಕ್ ಡ್ರಾಮಾವಾಗಿದ್ದು ; ಶರತ್ ಕುಮಾರ್ ಪಾತ್ರ ಅದ್ಭುತವಾಗಿದೆಯಂತೆ. ಶರತ್ ಕುಮಾರ್ ಪೋಸ್ಟರ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

ರೆಮೋ ಚಿತ್ರದಲ್ಲಿ ಇಶಾನ್‌ಗೆ ಜೋಡಿಯಾಗಿ ಆಶಿಕಾ ರಂಗನಾಥ್ ಅಭಿನಯಿಸುತ್ತಿದ್ದಾರೆ. ಬೆಂಗಳೂರು, ಹೈದರಾಬಾದ್, ಶಿರಸಿ ಮತ್ತು ಯಲ್ಲಾಪುರದಲ್ಲಿ ಸದ್ಯ ಶೂಟಿಂಗ್ ನಡೆಯುತ್ತಿದ್ದು ನಂತರ ಚಿತ್ರದ ಹಾಡುಗಳ ಚಿತ್ರೀಕರಣ ಸಿಂಗಾಪುರ, ಥಾಯ್ಲೆಂಡ್, ಮಲೇಷಿಯಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ನಡೆಯಲಿದೆ. ಮುಂದಿನ ವರ್ಷ ಪ್ರೇಕ್ಷಕರ ಮುಂದೆ ರೆಮೋ ಮೂಡಿಬರಲಿದೆ.

Comments are closed.