ಅಂತರಾಷ್ಟ್ರೀಯ

ಕಾನೂನು ಬಾಹಿರವಾಗಿ ಮೆಕ್ಸಿಕೋ ಗಡಿ ಮೂಲಕ ಪ್ರವೇಶ; ಅಮೆರಿಕದಿಂದ 150 ಮಂದಿ ಭಾರತೀಯರ ಗಡಿಪಾರು

Pinterest LinkedIn Tumblr


ವಾಷಿಂಗ್ಟನ್: ವೀಸಾ ನಿಯಮದ ಉಲ್ಲಂಘನೆ ಅಥವಾ ಕಾನೂನು ಬಾಹಿರವಾಗಿ ಅಮೆರಿಕವನ್ನು ಪ್ರವೇಶಿಸಿರುವ ಆರೋಪದಲ್ಲಿ ಮೂವರು ಮಹಿಳೆಯರು ಸೇರಿದಂತೆ ಸುಮಾರು 150 ಮಂದಿ ಭಾರತೀಯರನ್ನು ಅಮೆರಿಕ ಗಡಿಪಾರು ಮಾಡಿದ್ದು, ಬುಧವಾರ ಬೆಳಗ್ಗೆ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.

25ರಿಂದ 35 ವರ್ಷದ ನಡುವಿನ ಇವರೆಲ್ಲ ಪಂಜಾಬ್, ಹರ್ಯಾಣ ಮತ್ತು ಗುಜರಾತ್ ರಾಜ್ಯಕ್ಕೆ ಸೇರಿದವರಾಗಿದ್ದಾರೆ ಎಂದು ವರದಿ ತಿಳಿಸಿದೆ. ಈ ಭಾರತೀಯ ಪ್ರಜೆಗಳು ಮೆಕ್ಸಿಕೋ ಗಡಿಯಿಂದ ಕಾನೂನು ಬಾಹಿರವಾಗಿ ಅಮೆರಿಕಕ್ಕೆ ಪ್ರವೇಶಿಸಿರುವುದಾಗಿ ವರದಿ ವಿವರಿಸಿದೆ.

ಕೆಲವರು ಗಡಿ ದಾಟಿದ ನಂತರ ಅಮೆರಿಕದ ಗಡಿ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಕೆಲವರು ವೀಸಾ ಅವಧಿ ಮುಗಿದ ಮೇಲೂ ಅಮೆರಿಕದಲ್ಲಿ ಉಳಿದಿದ್ದು, ವಲಸೆ ಅಧಿಕಾರಿಗಳ ದಾಳಿಯಲ್ಲಿ ಸಿಕ್ಕಿಹಾಕಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮೆಕ್ಸಿಕೋ ತಲುಪಲು ವಲಸಿಗರಿಗೆ ಹಲವಾರು ಮಾರ್ಗಗಳಿವೆ. ಕೆಲವರು ಈಕ್ವೆಡಾರ್ ಮೂಲಕ, ಕೆಲವರು ದಕ್ಷಿಣ ಅಮೆರಿಕದ ಮೂಲಕ ಪ್ರವೇಶಿಸಿದ್ದರು. ಇನ್ನುಳಿದವರು ಗ್ರೀಸ್, ಇಟಲಿ ಹಾಗೂ ಇತರ ಯುರೋಪ್ ದೇಶಗಳ ಮೂಲಕ ಅಮೆರಿಕ ಪ್ರವೇಶಿಸಿದ್ದರು ಎಂದು ವರದಿ ತಿಳಿಸಿದೆ.

Comments are closed.