ಮನೋರಂಜನೆ

ಸ್ಯಾಂಡಲ್ ವುಡ್ ಚಿತ್ರ ‘ಕಬ್ಜ’ದಲ್ಲಿ ನಾನು ನಟಿಸುತ್ತಿಲ್ಲ: ಕಾಜಲ್ ಅಗರವಾಲ್

Pinterest LinkedIn Tumblr


ಬಾಲಿವುಡ್ ಹಾಗೂ ದಕ್ಷಿಣ ಭಾರತ ಸಿನಿಮಾಗಳ ಅಪರೂಪ ಸುಂದರಿ ಕಾಜಲ್ ಅಗರವಾಲ್ ಅವರು ಕನ್ನಡದ ಸಿನಿಮಾದಲ್ಲಿ ನಟಿಸುವ ಸಂಗತಿ ಮತ್ತೊಮ್ಮೆ ಠುಸ್ ಆಗಿದೆ. ಇತ್ತೀಚಿಗಷ್ಟೇ ಉಪೇಂದ್ರ ನಾಯಕತ್ವ ಹಾಗೂ ಆರ್ ಚಂದ್ರು ನಿರ್ದೇಶನದ ಮುಂಬರುವ ‘ಕಬ್ಜ’ ಚಿತ್ರದಲ್ಲಿ ಖ್ಯಾತ ನಟಿ ಕಾಜಲ್ ಅಗರವಾಲ್ ನಟಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಇದೀಗ ಸ್ವತಃ ನಟಿ ಕಾಜಲ್ ಅಗರವಾಲ್ ತಾವು ಕನ್ನಡದ ‘ಕಬ್ಜ’ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಈ ಮೊದಲು ಸಹ ಕನ್ನಡದ ಹಲವು ಬಿಗ್ ಬಜೆಟ್ ಚಿತ್ರದಲ್ಲಿ ನಟಿ ಕಾಜಲ್ ಅಗರವಾಲ್ ನಟಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಅದ್ಯಾವುದೂ ಸಹ ನಿಜವಾಗಿರಲಿಲ್ಲ. ಇದೀಗ ಉಪೇಂದ್ರ ಜೋಡಿಯಾಗಿ ‘ಕಬ್ಜ’ ಚಿತ್ರದಲ್ಲಿ ಕಾಜಲ್ ನಟಿಸಲಿದ್ದಾರೆ ಎಂಬ ಸುದ್ದಿ ಸಹ ಸುಳ್ಳಾದಂತಾಗಿದೆ. ಅಲ್ಲಿಗೆ ಕಾಜಲ್ ಫ್ಯಾನ್ಸ್‌ಗಳು ಅವರನ್ನು ಕನ್ನಡದ ಚಿತ್ರದಲ್ಲಿ ನೋಡುವ ಅವಕಾಶವನ್ನು ಮತ್ತೊಮ್ಮೆ ಮಿಸ್ ಮಾಡಿಕೊಂಡಿದ್ದಾರೆ.

‘ಬ್ರಹ್ಮ’ ಚಿತ್ರದ ಬಳಿಕ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಮುಂಬರುವ ‘ಕಬ್ಜ’ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಮೂಡಲು ಕಾರಣರಾಗಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಹಾಗೇ ಉಳಿದುಕೊಂಡಿದೆ. ಅದರೆ, ಕಾಜಲ್ ಅಗರವಾಲ್ ಅಲ್ಲ ಎಂಬ ಸಂಗತಿ ಬಹಿರಂಗವಾಗಿದೆ.

ಈ ಮೊದಲು ನಟಿ ಕಾಜಲ್ ಅಗರವಾಲ್ ಅವರು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್-ರಚಿತಾ ರಾಮ್ ಜೋಡಿಯ ‘ಚಕ್ರವ್ಯೂಹ’ ಚಿತ್ರದಲ್ಲಿ ಒಂದು ಹಾಡನ್ನು ಹಾಡುವ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದರು. ಆದರೆ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಅವರ ಆಸೆಯಾಗಲೀ ಅಥವಾ ಅವರನ್ನು ಕನ್ನಡ ಚಿತ್ರದ ಮೂಲಕ ನೋಡುವ ಕನ್ನಡ ಸಿನಿಅಭಿಮಾನಿಗಳ ಅಸೆಯಾಗಲೀ ಇನ್ನೂ ಈಡೇರಿಲ್ಲ. ಆ ಕ್ಷಣ ಅದ್ಯಾವಾಗ ಬರುತ್ತೋ ಗೊತ್ತಿಲ್ಲ!

Comments are closed.